Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 6 ಸ್ಪಾಟ್ ಫಿಕ್ಸಿಂಗ್ : ಶ್ರೀಶಾಂತ್ ಸೇರಿ ಮೂವರು ಆರೋಪ ಮುಕ್ತ

ನವದೆಹಲಿ, ಜುಲೈ 25: ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್) 6ನೇ ಆವೃತ್ತಿಯಲ್ಲಿ ನಡೆದಿದೆ ಎನ್ನಲಾದ ಸ್ಪಾಟ್ ಫಿಕ್ಸಿಂಗ್ ಪ್ರಕರಣ ಕುರಿತಂತೆ ದೆಹಲಿ ಹೈಕೋರ್ಟ್ ಶನಿವಾರ ಮಹತ್ವದ ತೀರ್ಪು ನೀಡಿದೆ. ವೇಗಿ ಶ್ರೀಶಾಂತ್ ಸೇರಿದಂತೆ ಮೂವರು ಆರೋಪಿಗಳನ್ನು ದೋಷಮುಕ್ತಗೊಳಿಸಲಾಗಿದೆ.

ಶ್ರೀಶಾಂತ್ ಸೇರಿದಂತೆ ಮೂವರು ಆಟಗಾರರ ಮೇಲಿನ ಆರೋಪದ ವಿಚಾರಣೆ ನಡೆಸಿದ ದೆಹಲಿ ಕೋರ್ಟಿನ ಹೆಚ್ಚುವರಿ ನ್ಯಾ. ನೀನಾ ಬನ್ಸಾಲ್ ಕೃಷ್ಣ ಅವರು ಮೂವರ ಮೇಲಿನ ಆರೋಪಗಳನ್ನು ವಜಾಗೊಳಿಸಿದ್ದಾರೆ. ಶ್ರೀಶಾಂತ್, ಅಜಿತ್ ಚಂಡೀಲಾ, ಅಂಕಿತ್ ಚೌಹಾಣ್ ಅವರು ಈಗ ದೋಷಮುಕ್ತರಾಗಿದ್ದಾರೆ. [ಐಪಿಎಲ್ ಹಗರಣ 2013 ರಿಂದ 2015: ಟೈಮ್ ಲೈನ್]

ಇಂಡಿಯನ್ ಪ್ರಿಮಿಯರ್ ಲೀಗ್ 6ರ ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಜುಲೈ 30. 2013 ರಂದು ಪ್ರಕರಣ ದಾಖಲಿಸಿಕೊಂಡಿದ್ದರು. ಭೂಗತ ಪಾತಕಿ ದಾವೂದ್ ಇಬ್ರಾಹಿಂ, ಛೋಟಾ ಶಕೀಲ್ ಮೇಲೆ ಎಫ್ ಐ ಆರ್ ದಾಖಲು ಮಾಡಿಕೊಳ್ಳಲಾಗಿತ್ತು. 6 ಸಾವಿರ ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿತ್ತು. [ಕೊಲ್ಲೂರಿನಲ್ಲಿ ಶ್ರೀಶಾಂತ್ ಮನದಾಸೆ ಬಹಿರಂಗ]

ಆದರೆ, ಎಸ್ ಶ್ರೀಶಾಂತ್, ಅಜೀತ್ ಚಂಡೀಲಾ ಮತ್ತು ಅಂಕಿತ್ ಚೌಹಾಣ್ ಅವರು ಆರೋಪಪಟ್ಟಿ ರದ್ದು ಮಾಡುವಂತೆ ಕೋರಿ ಮನವಿ ಸಲ್ಲಿಸಿದ್ದರು. ಮೂವರ ಮನವಿ ಪುರಸ್ಕರಿಸಿದ ನ್ಯಾ. ನೀನಾ ಬನ್ಸಾಲ್ ಅವರು ಮೂವರು ಕ್ರಿಕೆಟರ್ಸ್ ಸೇರಿ ಒಟ್ಟು 25 ಮಂದಿ ವಿರುದ್ಧದ ಚಾರ್ಜ್ ಶೀಟ್ ರದ್ದು ಪಡಿಸಿದ್ದಾರೆ.

ಆಟಗಾರರ ಪ್ರತಿಕ್ರಿಯೆಗಳು

ಆಟಗಾರರ ಪ್ರತಿಕ್ರಿಯೆಗಳು

ಕಳೆದ ಮೂರು ವರ್ಷಗಳ ಕಾಲ ಕಂಡ ಕೆಟ್ಟ ಕನಸು ಈಗ ಕೊನೆಗೊಂಡೆ. ಕಷ್ಟಕಾಲದಲ್ಲಿ ನನ್ನ ಕುಟುಂಬ ನನ್ನ ಜೊತೆಯಲ್ಲಿತ್ತು. ನನ್ನ ಅಭಿಮಾನಿಗಳಿಗೆ ನಾನು ಥ್ಯಾಂಕ್ಸ್ ಹೇಳುತ್ತೇನೆ ಎಂದು ಅಜಿತ್ ಚಂಡೀಲಾ ಪ್ರತಿಕ್ರಿಯಿಸಿದ್ದಾರೆ.

ಅತ್ಯಂತ ಭಾವನಾತ್ಮಕ ದಿನ ಇದಾಗಿದೆ. ನನ್ನ ಕುಟುಂಬ ಹಾಗೂ ಆಪ್ತರಿಗೆ ಸಂತಸಮಯ ದಿನ, ಎಲ್ಲರಿಗೂ ನನ್ನ ಧನ್ಯವಾದಗಳು, ಮತ್ತೆ ಟೀಂ ಇಂಡಿಯಾ ಪರ ಆಡುವ ಕನಸಿದೆ ಎಂದು ಶ್ರೀಶಾಂತ್ ಅವರು ಪ್ರತಿಕ್ರಿಯಿಸಿದ್ದಾರೆ

ಮೂವರು ಜಾಮೀನು ಪಡೆದುಕೊಂಡಿದ್ದಾರೆ

ಮೂವರು ಜಾಮೀನು ಪಡೆದುಕೊಂಡಿದ್ದಾರೆ

ಈ ಹಿಂದೆ ಈ ಮೂವರು ಕ್ರಿಕೆಟರ್ಸ್ ವಿರುದ್ಧ ಮಹಾರಾಷ್ಟ್ರದ MCOCA ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪ ಪಟ್ಟಿ ಸಲ್ಲಿಸಲಾಗಿತ್ತು. ಅದರೆ, ಸರಿಯಾದ ಸಾಕ್ಷಿ ಆಧಾರ ಇಲ್ಲದ ಕಾರಣ ಬಂಧನಕ್ಕೊಳಗಾದರೂ ಎಲ್ಲಾ ಮೂವರು ಕ್ರಿಕೆಟರ್ಸ್ ಗಳು ಜಾಮೀನು ಪಡೆದು ಹೊರ ಬಂದಿದ್ದರು.

ಚಾರ್ಜ್ ಶೀಟ್ ನಲ್ಲಿ ದಾವೂದ್ ಹೆಸರು

ಚಾರ್ಜ್ ಶೀಟ್ ನಲ್ಲಿ ದಾವೂದ್ ಹೆಸರು

ಪಾಕಿಸ್ತಾನ, ದುಬೈ ಹಾಗೂ ಇಂಗ್ಲೆಂಡ್ ನಿಂದ ದಾವೂದ್ ಇಬ್ರಾಹಿಂ ಹಾಗೂ ಛೋಟಾ ಶಕೀಲ್ ಸ್ಪಾಟ್ ಫಿಕ್ಸಿಂಗ್ ನಿಯಂತ್ರಿಸುತ್ತಿದ್ದರು. ಪಾಕಿಸ್ತಾನ ಬುಕ್ಕಿ ಸಲ್ಮಾನ್, ದುಬೈ ಬುಕ್ಕಿ ಜಾವೇದ್ aka ಡಾಕ್ಟರ್ aka ಜಾವೇದ್ ಛೂಟನಿ ಅವರು ಭಾರತದ ಬುಕ್ಕಿಗಳಾದ ರಮೇಶ್ ವ್ಯಾಸ್ ಹಾಗೂ ಟಿಂಕು ಮಂಡಿ ಮೂಲಕ ಫಿಕ್ಸಿಂಗ್ ಮಾಡುತ್ತಿದ್ದರು ಎಂದು ಅರೋಪಪಟ್ಟಿಯಲ್ಲಿ ಹೇಳಲಾಗಿತ್ತು. [ದಾವೂದ್ ಜತೆ ಶ್ರೀಶಾಂತ್ ಮೇಲೂ ಚಾರ್ಜ್ ಶೀಟ್]

ಆರ್.ಎಂ. ಲೋಧಾ ಸಮಿತಿ ನೀಡಿದ ತೀರ್ಪು

ಆರ್.ಎಂ. ಲೋಧಾ ಸಮಿತಿ ನೀಡಿದ ತೀರ್ಪು

ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಮ್ಯಾಚ್ ಫಿಕ್ಸಿಂಗ್, ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಮೂರ್ತಿ ಆರ್.ಎಂ. ಲೋಧಾ ನೇತೃತ್ವದ ತ್ರಿಸದಸ್ಯ ಪೀಠ ಜುಲೈ 14ರಂದು ತೀರ್ಪು ನೀಡಿ ಚೆನೈ ಸೂಪರ್ ಕಿಂಗ್ಸ್ , ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಐಪಿಎಲ್ ನಿಂದ 2 ವರ್ಷ ನಿಷೇಧ ಹೇರಿದ್ದಲ್ಲದೆ, ರಾಜ್ ಕುಂದ್ರಾ ಹಾಗೂ ಗುರುನಾಥ್ ಮೇಯಪ್ಪನ್ ಅವರಿಗೆ ಅಜೀವ ನಿಷೇಧ ಹಾಕಲಾಗಿದೆ.[ವಿವರ ಇಲ್ಲಿ ಓದಿ]

ಶ್ರೀಶಾಂತ್ ಅವರ ತಾಯಿ ನೀಡಿದ ಪ್ರತಿಕ್ರಿಯೆ

ಶ್ರೀಶಾಂತ್ ಅವರ ತಾಯಿ ಸಾವಿತ್ರಿ ದೇವಿ ಅವರು ನೀಡಿದ ಪ್ರತಿಕ್ರಿಯೆ ಹೀಗಿದೆ...

ಇನ್ನೂ ಕ್ರಿಕೆಟ್ ಆಡುವ ಹಸಿವಿದೆ: ಶ್ರೀಶಾಂತ್.

ಇನ್ನೂ ಕ್ರಿಕೆಟ್ ಆಡುವ ಹಸಿವಿದೆ, ಇಂದಿನಿಂದಲೇ ಮತ್ತೆ ತರಬೇತಿ ಶುರು ಮಾಡುತ್ತೇನೆ. ಬಿಸಿಸಿಐ ಪ್ರತಿಕ್ರಿಯೆಗೆ ಕಾದಿದ್ದೇನೆ: ಶ್ರೀಶಾಂತ್.

ಅಂಕಿತ್ ಚೌಹಾಣ್ ನೀಡಿದ ಪ್ರತಿಕ್ರಿಯೆ

ತೀರ್ಪು ಹೊರ ಬಂದ ಮೇಲೆ ಕ್ರಿಕೆಟರ್ ಅಂಕಿತ್ ಚೌಹಾಣ್ ನೀಡಿದ ಪ್ರತಿಕ್ರಿಯೆ ಹೀಗಿದೆ

Story first published: Wednesday, January 3, 2018, 10:03 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+