ಮತ್ತೆ ಎಲ್ಲರ ಗಮನಸೆಳೆದ ಸೂಪರ್ ಓವರ್ ಗರ್ಲ್

ದುಬೈನಲ್ಲಿ ಅ. 18ರಂದು ನಡೆದ ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಮುಂಬೈ ಇಂಡಿಯನ್ಸ್ ವಿರುದ್ಧದ ರೋಚಕ ಪಂದ್ಯವನ್ನು ಸ್ಟೇಡಿಯಂನಲ್ಲಿಯೇ ಕುಳಿತು ವೀಕ್ಷಿಸುತ್ತಿದ್ದ ಯುವತಿಯೊಬ್ಬಳು ಪಂದ್ಯದ ರೋಚಕ ಘಟ್ಟದಲ್ಲಿ ತಾನು ನೀಡಿದ ರಿಯಾಕ್ಷನ್ಗಳಿಂದ ಸದ್ಯ ಸೋಷಿಯಲ್ ಮಿಡಿಯಾದ ಸಖತ್ ಸುದ್ದಿಯಾಗಿದ್ದಳು. ಪಂದ್ಯ ಮುಗಿದ ಬಳಿಕ ಆಕೆಯು ಸೂಪರ್ ಓವರ್ ಗರ್ಲ್ ಎಂದೇ ಖ್ಯಾತಿಯಾಗಿದ್ದಳು.
ಇದೀಗ ಮತ್ತೆ ತನ್ನದೇ ಚಿತ್ರವಿರುವ ಮೀಮ್ಸ್ಗಳನ್ನು ಹಂಚಿಕೊಂಡಿರುವ ಈ ಬೆಡಗಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.

ಹೌದು ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದ ಎರಡು ಸೂಪರ್ ಓವರ್‌ಗಳನ್ನು ವೀಕ್ಷಿಸುತ್ತಿದ್ದ ರಿಯಾನಾ ಲಾಲ್ವಾನಿ ತನಗೆ ಅರಿವಿಲ್ಲದೆ ಅಚ್ಚರಿಯ ರಿಯಾಕ್ಷನ್ ನೀಡಿದ್ದರು. ರಿಯಾನರ ವಿಭಿನ್ನ ಚಿತ್ರಗಳು ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿತ್ತು. ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಕೂಡ ಆಗಿತ್ತು.

ಆದರೆ ಈಗ ರಿಯಾನ ತಮ್ಮದೇ ರಿಯಾಕ್ಷನ್ ಫೋಟೋ ಹೊಂದಿರುವ ಮೀಮ್ಸ್ಗಳನ್ನು ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡು ಎಂಜಾಯ್ ಮಾಡ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕೆಲವೊಮ್ಮೆ ಕ್ರಿಕೆಟ್ ಪಂದ್ಯಗಳಲ್ಲಿ ಮಿಂಚಿನ ಆಟವಾಡಿ ಅಭಿಮಾನಿಗಳ ಮನಗೆಲ್ಲುವ ಪ್ಲೇಯರ್ಸ್ಗಳಿಗಿಂತ, ಅಚ್ಚರಿಯ ರಿಯಾಕ್ಷನ್ ಕೊಟ್ಟು ದಿನಕಳೆಯುವುದರಲ್ಲಿ ಹೆಸರು ಮಾಡುವ ಚೆಲುವೆಯರೇ ಹೆಚ್ಚು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications