Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

BCCI ಜೊತೆ ದೊಡ್ಡ ಒಪ್ಪಂದ ಮಾಡಿಕೊಳ್ಳಲು ECB ಚಿಂತನೆ

ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ)ಯೊಂದಿಗೆ ದೊಡ್ಡ ಡೀಲ್ ಮಾಡಿಕೊಳ್ಳುವ ಸಾಧ್ಯತೆ ಇದೆ. ಇದರಿಂದ ಅರ್ಧಕ್ಕೆ ನಿಂತ ಟೂರ್ನಿಯನ್ನು ತನ್ನಲ್ಲಿ ಆಯೋಜಿಸುವಂತೆ ಬೇಡಿಕೆ ಇಟ್ಟಿದೆ. ಆ ಟೂರ್ನಿಯಾವುದು ಎಂಬ ಬಗ್ಗೆ ವರದಿ ಇಲ್ಲಿದೆ.

ಭಾರತ ಹಾಗೂ ಪಾಕಿಸ್ತಾನ ನಡುವಣ ಉದ್ವಿಗ್ನತೆ ದಿನೇ ದಿನೇ ಹೆಚ್ಚಾಗುತ್ತಿದೆ. ಭಾರತದ ಜಮ್ಮು ಕಾಶ್ಮೀರ್‌ನ ಪಹಲ್ಗಾಮ್‌ನಲ್ಲಿ ಉಗ್ರರರು 26 ಪ್ರಯಾಣಿಕರ ನರ ಭೇಧವನ್ನು ನಡೆಸಿದರು. ಇದಕ್ಕೆ ಪ್ರತಿಯಾಗಿ ಭಾರತ ಸಹ ದಾಳಿ ನಡೆಸುತ್ತಿದ್ದೆ. ಇನ್ನು ಪಾಕ್‌ ಸಹ ಭಾರತದ ಗಡಿ ರಾಜ್ಯಗಳಲ್ಲಿ ಗುಂಡಿನ ದಾಳಿಯನ್ನು ನಡೆಸುತ್ತಲೇ ಇರುತ್ತದೆ. ಇದರಿಂದ ಉಭಯ ದೇಶಗಳ ನಡುವನ ವ್ಯತರಿಕ್ತ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ನೇರ ಪರಿಣಾಮ ಐಪಿಎಲ್‌ಗೂ ತಟ್ಟಿದೆ. ಧರ್ಮಶಾಲಾದಲ್ಲಿ ನಡೆಯುತ್ತಿದ್ದ ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಪಂದ್ಯವನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ. ಲೈಟ್‌ ಆಫ್‌ ಮಾಡಿ ಅಭಿಮಾನಿಗಳನ್ನು ಮನೆಗೆ ಕಳುಹಿಸಲಾಗಿದೆ.

IPL Suspended Amid India-Pakistan Tensions England Offers to Host Remaining Matches

ಈ ಮಹತ್ವದ ತೀರ್ಮಾನದ ಬಳಿಕ ಶುಕ್ರವಾರ ಬಿಸಿಸಿಐ ಹಾಗೂ ಐಪಿಎಲ್ ಆಡಳಿತ ಮಂಡಳಿಯ ಸಭೆ ನಡೆದಿದೆ. ಈ ವೇಳೆ ಐಪಿಎಲ್‌ನ್ನು ಒಂದು ವಾರ ಮುಂದೂಡಲು ಬಿಸಿಸಿಐ ಅಧಿಕಾರಿಗಳು ಸಭೆಯಲ್ಲಿ ತೀರ್ಮಾನಿಸಿದ್ದಾರೆ. ಮುಂದಿನ ಸ್ಥಿತಿಗತಿಗಳನ್ನು ಗಮನಿಸಿದ ಬಳಿಕ ತೀರ್ಮಾನವನ್ನು ತೆಗೆದುಕೊಳ್ಳುವುದಾಗಿ ಬಿಸಿಸಿಐ ತಿಳಿಸಿದೆ. ಹೀಗಾಗಿಯೇ ವಿದೇಶಿ ಹಾಗೂ ದೇಶೀಯ ಆಟಗಾರರು ತಮ್ಮ ತಮ್ಮ ತವರಿನತ್ತ ಮುಖ ಮಾಡಿದ್ದಾರೆ.

ಐಪಿಎಲ್‌ ಒಂದು ವಾರ ಸ್ಥಗಿತ

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಈಗಾಗಲೇ 58 ಪಂದ್ಯಗಳನ್ನು ನಡೆಸಲಾಗಿದೆ. ಇನ್ನು 16 ಪಂದ್ಯಗಳು ಆಡುವುದು ಬಾಕಿ ಇದೆ. ಇದರಲ್ಲಿ ಎರಡು ಕ್ವಾಲಿಫೈಯರ್, ಎಲಿಮಿನೇಟರ್ ಹಾಗೂ ಫೈನಲ್‌ ಪಂದ್ಯಗಳು ಸೇರಿವೆ. ಇನ್ನು ಲೀಗ್‌ ಹಂತದಲ್ಲಿ 12 ಪಂದ್ಯಗಳನ್ನು ಆಡುವುದು ಬಾಕಿ ಇದೆ.

ಇಸಿಬಿಯಿಂದ ದೊಡ್ಡ ಆಫರ್‌

ಇನ್ನು ಐಪಿಎಲ್‌ ಉಳಿದ ಪಂದ್ಯಗಳಿಗೆ ಆತಿಥ್ಯವನ್ನು ನೀಡಲು ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿ (ECB) ಬಿಸಿಸಿಐಗೆ (BCCI) ಸಹಾಯವನ್ನು ನೀಡಲು ನಿರ್ಧರಿಸಿದೆ. ಐಪಿಎಲ್‌ ಉಳಿದ ಪಂದ್ಯಗಳನ್ನು ಇಂಗ್ಲೆಂಡ್‌ನಲ್ಲಿ ಆಯೋಜಿಸಲು ಮತ್ತು ಅದಕ್ಕೆ ಅಗತ್ಯವಿರುವ ಎಲ್ಲ ವ್ಯವಸ್ಥೆಗಳನ್ನು ಮಾಡುವುದಾಗಿ ತಿಳಿಸಿದೆ. ಇನ್ನು ಇಸಿಬಿ ಈ ರೀತಿಯ ಆಫರ್‌ ನೀಡಿರುವುದು ಇದೇ ಮೊದಲೇನಲ್ಲ. ಇದಕ್ಕೂ ಮೊದಲು ಇಸಿಬಿ, ಬಿಸಿಸಿಐಗೆ ಈ ರೀತಿಯ ಆಫರ್‌ ನೀಡಿತ್ತು. ಕೋವಿಡ್‌-19 ಸಮಯದಲ್ಲೂ ಐಪಿಎಲ್‌ ಪಂದ್ಯಗಳನ್ನು ಇಂಗ್ಲೆಂಡ್‌ನಲ್ಲಿ ನಡೆಸಲು ತಿಳಿಸಿತ್ತು.

ಭಾರತ ಮತ್ತು ಪಾಕಿಸ್ತಾನ ನಡುವಿನ ಮಿಲಿಟರಿ ಉದ್ವಿಗ್ನತೆ ಕೈ ಮೀರಿ ಹೋಗುವ ಲಕ್ಷಣಗಳು ಕಾಣುತ್ತಿವೆ. ಹೀಗಾಗಿ ಒಂದು ವಾರ ಟೂರ್ನಿಯನ್ನು ಬಿಸಿಸಿಐ ಮುಂದೂಡಿ ಆದೇಶ ನೀಡಲಾಗಿದೆ. ಇನ್ನು ಬಿಸಿಸಿಐ ಇನ್ನು ಯಾವುದೇ ಅಧಿಕೃತ ಘೋಷಣೆಯನ್ನು ಮಾಡಿಲ್ಲ. ಆದರೆ ಈ ಬಾರಿಯ ಐಪಿಎಲ್‌ ಪಂದ್ಯಗಳ ಮುಂದಿನ ಪಂದ್ಯಗಳನ್ನು ನಡೆಯುವುದು ಯಾವಾಗ? ವೇಳಾ ಪಟ್ಟಿ ಏನು ಎಂಬ ಬಗ್ಗೆ ಮಾಹಿತಿ ಇನ್ನೇನು ಕೆಲವೇ ದಿನಗಳಲ್ಲಿ ಹೊರ ಬೀಳುವ ಸಾಧ್ಯತೆ ಇದೆ.

Story first published: Saturday, May 10, 2025, 15:01 [IST]
Other articles published on May 10, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+