Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

T20 Ranking: ಐಪಿಎಲ್ ಹರಾಜಿನಲ್ಲಿ ಯಾರಿಗೂ ಬೇಡವಾದ ಫಿಲ್ ಸಾಲ್ಟ್ ಈಗ ವಿಶ್ವ ನಂ.2 ಬ್ಯಾಟರ್; ಒಲಿಯುತ್ತಾ ಲಕ್!

2024ರ ಇಂಡಿಯನ್ ಪ್ರೀಮಿಯರ್ ಲೀಗ್‌ಗಾಗಿ (ಐಪಿಎಲ್) ಡಿಸೆಂಬರ್ 19ರಂದು ದುಬೈನಲ್ಲಿ ನಡೆದ ಮಿನಿ ಹರಾಜಿನಲ್ಲಿ ಯಾವ ಫ್ರಾಂಚೈಸಿಗಳೂ ಖರೀದಿಸದ ನಂತರ, ಇಂಗ್ಲೆಂಡ್‌ನ ಸ್ಟಾರ್ ಬ್ಯಾಟರ್ ಫಿಲ್ ಸಾಲ್ಟ್ ಐಸಿಸಿ ಟಿ20 ಬ್ಯಾಟಿಂಗ್ ಶ್ರೇಯಾಂಕದಲ್ಲಿ ಎರಡನೇ ಸ್ಥಾನಕ್ಕೆ ಜಿಗಿದಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧದ ಇಂಗ್ಲೆಂಡ್‌ನ ಟಿ20 ಸರಣಿಯಲ್ಲಿ ತನ್ನ ಪ್ರಭಾವಶಾಲಿ ಪ್ರದರ್ಶನದ ನಂತರ ಇಂಗ್ಲೆಂಡ್ ಆರಂಭಿಕ ಆಟಗಾರ ಫಿಲ್ ಸಾಲ್ಟ್ ಟಿ20 ಶ್ರೇಯಾಂಕದಲ್ಲಿ ಗಮನಾರ್ಹ ಏರಿಕೆ ಕಂಡರು.

IPL Teams Ignore This Player in the Mini Auction, Now Ranks 2nd in ICCT20Rankings

ಟ್ರಿನಿಡಾಡ್‌ನಲ್ಲಿ ಫಿಲ್ ಸಾಲ್ಟ್‌ ಅವರ 119 ಮತ್ತು 38 ರನ್‌ಗಳು ಅವರನ್ನು 18 ಸ್ಥಾನಗಳ ಏರಿಕೆಯಾಗುವಂತೆ ಮಾಡಿತು. 802 ವೃತ್ತಿಜೀವನದ ಅತ್ಯುತ್ತಮ ರೇಟಿಂಗ್ ಪಾಯಿಂಟ್‌ಗಳನ್ನು ತಲುಪಿತು. ಇದು ಐಸಿಸಿ ಶ್ರೇಯಾಂಕಗಳ ಪ್ರಕಾರ ಮೂರನೇ ಸ್ಥಾನದಲ್ಲಿರುವ ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್‌ಗಿಂತ 15 ರೇಟಿಂಗ್ ಪಾಯಿಂಟ್‌ಗಳನ್ನು ಮುಂದಿದ್ದಾರೆ.

ಆದರೆ, ಫಿಲ್ ಸಾಲ್ಟ್‌ನ ಏರಿಕೆಯ ಹೊರತಾಗಿಯೂ, 887ರ ರೇಟಿಂಗ್‌ನೊಂದಿಗೆ ಆರಾಮವಾಗಿ ಅಗ್ರಸ್ಥಾನವನ್ನು ಹೊಂದಿರುವ ಸೂರ್ಯಕುಮಾರ್ ಯಾದವ್ ನಡುವೆ ಇನ್ನೂ ಸಾಕಷ್ಟು ಅಂತರವಿದೆ.

ಮತ್ತೊಬ್ಬ ಇಂಗ್ಲೆಂಡ್ ಸ್ಫೋಟಕ ಬ್ಯಾಟರ್ ಲಿಯಾಮ್ ಲಿವಿಂಗ್‌ಸ್ಟೋನ್ ಕೂಡ ಟಿ20 ಶ್ರೇಯಾಂಕದಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯಗಳಲ್ಲಿ ಅಜೇಯ 54 ಮತ್ತು 28 ರನ್‌ಗಳ ಅವರ ಇನ್ನಿಂಗ್ಸ್ ಅವರನ್ನು 27 ಸ್ಥಾನಗಳ ಏರಿಕೆ ಕಂಡರು ಮತ್ತು ಬ್ಯಾಟಿಂಗ್ ಶ್ರೇಯಾಂಕದಲ್ಲಿ 38ನೇ ಸ್ಥಾನಕ್ಕೆ ತಲುಪಿದರು.

ಲಿಯಾಮ್ ಲಿವಿಂಗ್‌ಸ್ಟೋನ್ ಅವರ ಪ್ರದರ್ಶನ ಆಲ್-ರೌಂಡರ್ ವಿಭಾಗದ ಮೇಲೆ ಪ್ರಭಾವ ಬೀರಿತು, 175ರ ರೇಟಿಂಗ್‌ ಪಾಂಯಿಂಟ್ಸ್‌ನೊಂದಿಗೆ ಎಂಟನೇ ಸ್ಥಾನವನ್ನು ತಲುಪಲು ನಾಲ್ಕು ಸ್ಥಾನಗಳ ಏರಿಕೆ ಕಂಡರು.

ವೆಸ್ಟ್ ಇಂಡೀಸ್ ಅಂತಿಮ ಪಂದ್ಯದಲ್ಲಿ ಗೆಲ್ಲುವ ಮೂಲಕ ಐದು ಪಂದ್ಯಗಳ ಟಿ20 ಸರಣಿಯನ್ನು 3-2 ಅಂತರದಿಂದ ಗೆದ್ದುಕೊಂಡಿತು. ಎಡಗೈ ಸ್ಪಿನ್ನರ್ ಅಕೇಲ್ ಹೊಸೈನ್ ನಾಲ್ಕು ಓವರ್‌ಗಳಲ್ಲಿ 20 ರನ್ ನೀಡಿ 2 ವಿಕೆಟ್ ಪಡೆದರು. ಇದು ಶ್ರೀಲಂಕಾದ ವನಿಂದು ಹಸರಂಗಾ ಮತ್ತು ಮಹೇಶ್ ತೀಕ್ಷಣ ಕ್ರಮವಾಗಿ 679 ಮತ್ತು 677 ರೇಟಿಂಗ್ ಅಂಕಗಳ ಹೊಂದಿರುವ ಜೋಡಿಯನ್ನು ಹಿಂದಿಕ್ಕಿ 683 ರೇಟಿಂಗ್ ಪಾಯಿಂಟ್‌ನೊಂದಿಗೆ ನಾಲ್ಕನೇ ಸ್ಥಾನಕ್ಕೆ ಏರಿದರು.

ಗುಡಾಕೇಶ್ ಮೋಟಿ ಅದೇ ಪಂದ್ಯದಲ್ಲಿ 4 ಓವರ್‌ಗಳಲ್ಲಿ 24 ರನ್ ನೀಡಿ 3 ವಿಕೆಟ್ ಕಬಳಿಸಿದ ನಂತರ, 75 ಸ್ಥಾನಗಳ ಏರಿಕೆ ಕಂಡಿದ್ದಾರೆ. ಇನ್ನು ಇಂಗ್ಲೆಂಡ್‌ನ ರೀಸ್ ಟೋಪ್ಲಿ ಆಡಿದ ಎರಡು ಪಂದ್ಯಗಳಲ್ಲಿ ಐದು ವಿಕೆಟ್‌ಗಳನ್ನು ಪಡೆಯುವ ಮೂಲಕ 13 ಸ್ಥಾನಗಳ ಜಿಗಿತದೊಂದಿಗೆ ಬೌಲಿಂಗ್ ಶ್ರೇಯಾಂಕದಲ್ಲಿ ಅಗ್ರ 10ರಲ್ಲಿ ಸ್ಥಾನ ಪಡೆದರು.

Story first published: Wednesday, December 27, 2023, 19:02 [IST]
Other articles published on Dec 27, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+