ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL ಟೈಟಲ್ ಸ್ಪಾನ್ಸರ್‌ ಶುಲ್ಕ: 2008 ರಿಂದ 2022ರವರೆಗೆ ಎಷ್ಟು ಕೋಟಿ ರೂಪಾಯಿ?

IPL

ಮನೋರಂಜನ್ ಕಾ ಬಾಪ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ವೀಕ್ಷಣೆಯ ಸಂಖ್ಯೆಯಲ್ಲಿ ನೋಡುವುದಾದ್ರೆ, ವಿಶ್ವದ ನಂಬರ್ ಒನ್ ಟಿ20 ಲೀಗ್ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ. 2008ರಲ್ಲಿ ಪ್ರಾರಂಭಗೊಂಡ ಟಿ20 ಲೀಗ್ ಬರೋಬ್ಬರಿ 14 ಆವೃತ್ತಿಗಳನ್ನ ಯಶಸ್ವಿಯಾಗಿ ಮುಗಿಸಿದೆ.

ಐಪಿಎಲ್‌ನಲ್ಲಿ ಪ್ರಾಯೋಜಕರಿಗೇನು ಕೊರತೆಯಿಲ್ಲ. ಹಲವಾರು ಅಂತರಾಷ್ಟ್ರೀಯ ಮಟ್ಟದ ಬ್ರ್ಯಾಂಡ್‌ಗಳು ಐಪಿಎಲ್‌ ಪ್ರಾಯೋಜಕತ್ವಕ್ಕೆ ಸಾಲು ನಿಂತಿರುತ್ತವೆ. ಇದರಲ್ಲಿ ಬಹುಮುಖ್ಯವಾದದ್ದು ಐಪಿಎಲ್ ಟೈಟಲ್ ಪ್ರಾಯೋಜಕತ್ವ.

ಭಾರತದ ಟೆಸ್ಟ್ ಕ್ರಿಕೆಟ್ ನಾಯಕತ್ವಕ್ಕೆ ನಾನು ರೆಡಿ ಇದ್ದೇನೆ ಎಂದ ಬುಮ್ರಾ!ಭಾರತದ ಟೆಸ್ಟ್ ಕ್ರಿಕೆಟ್ ನಾಯಕತ್ವಕ್ಕೆ ನಾನು ರೆಡಿ ಇದ್ದೇನೆ ಎಂದ ಬುಮ್ರಾ!

ಹೌದು ಐಪಿಎಲ್ ಟೈಟಲ್ ಪ್ರಾಯೋಜಕತ್ವಕ್ಕೆ ದೊಡ್ಡ ದೊಡ್ಡ ಕಂಪನಿಗಳು ಬಿಡ್ ಮಾಡುತ್ತವೆ. ಈ ಬಾರಿ ಟೈಟಲ್ ಪ್ರಾಯೋಜಕತ್ವವನ್ನ ಭಾರತ ಮೂಲದ 'ಟಾಟಾ ಗ್ರೂಪ್' ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಈ ಬಗ್ಗೆ ಮಾಹಿತಿ ನೀಡಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಚೇರ್ಮನ್ ಬ್ರಿಜೇಶ್ ಪಟೇಲ್ ಅವರು, ಮುಂಬರುವ ಆವೃತ್ತಿಯ ಐಪಿಎಲ್ ಪಂದ್ಯಾವಳಿಗೆ ಮುಖ್ಯ ಪ್ರಾಯೋಜಕರಾಗಿ ಟಾಟಾ ಗ್ರೂಪ್ ಆಯ್ಕೆಯಾಗಿದೆ ಎಂದು ಇತ್ತೀಚೆಗಷ್ಟೇ ದೃಢಪಡಿಸಿದ್ದಾರೆ. ಈ ಹಿಂದೆ ಟೂರ್ನಿ ಪ್ರಾಯೋಜಕತ್ವ ಚೀನಾ ಮೂಲದ ಮೊಬೈಲ್ ಸಂಸ್ಥೆ ವಿವೋ ಹೆಸರಿನಲ್ಲಿತ್ತು. ಆದರೆ ಈ ಬಾರಿ ಟಾಟಾ ಗ್ರೂಪ್ ಶೀರ್ಷಿಕೆ ಪ್ರಾಯೋಕತ್ವ ಬಿಡ್ ಗೆದ್ದಿದೆ.

ಹಲವು ವರ್ಷಗಳಲ್ಲಿ, ಟೈಟಲ್ ಪ್ರಾಯೋಜಕತ್ವದ ಹಕ್ಕುಗಳನ್ನು ಪಡೆಯಲು ಹಲವಾರು ಉದ್ಯಮಿಗಳು ಬಿಸಿಸಿಐಗೆ ಭಾರಿ ಮೊತ್ತವನ್ನು ನೀಡಲು ಮುಂದಾಗಿದ್ದಾರೆ. 2008 ರಲ್ಲಿ IPL ಪ್ರಾರಂಭದೊಂದಿಗೆ, DLF T20 ಲೀಗ್‌ನ ಟೈಟಲ್ ಪ್ರಾಯೋಜಕರಾದರು. 2012 ರವರೆಗೆ ಹಕ್ಕುಗಳನ್ನು ಹೊಂದಿದ್ದ DLF ಬಿಸಿಸಿಐಗೆ 40 ಕೋಟಿ ರೂ.ಗಳನ್ನು ನೀಡಿತು.

2013 ರ ಋತುವಿನ ಪ್ರಾರಂಭದೊಂದಿಗೆ, ಪೆಪ್ಸಿ ಪ್ರಾಯೋಜಕತ್ವ ಪಡೆಯಿತು. 2013ರಿಂದ 2015ರವರೆಗಿನ ಸೀಸನ್‌ನಲ್ಲಿ ಬರೋಬ್ಬರಿ 79.2 ಕೋಟಿ ರೂಪಾಯಿಗೆ ಒಪ್ಪಂದವನ್ನು ಮಾಡಿಕೊಂಡಿತು.

ವರ್ಷ ಕಳೆದಂತೆ ಐಪಿಎಲ್ ಬೆಳೆಯುತ್ತಲೇ ಹೋದಂತೆ, ಲೀಗ್ ಅನ್ನು ಅನುಸರಿಸುವ ಅಭಿಮಾನಿಗಳ ಸಂಖ್ಯೆಯೂ ಹೆಚ್ಚುತ್ತಲೇ ಇತ್ತು. ಜೊತೆಗೆ ಬಿಸಿಸಿಐ ಲಾಭ ಹೆಚ್ಚುತ್ತಿದೆ. 2016 ರ ವರ್ಷ ಪ್ರಾರಂಭವಾದ ತಕ್ಷಣ, ಚೀನೀ ವ್ಯಾಪಾರದ ದೈತ್ಯ ವಿವೋ 2017 ರ ಸೀಸನ್‌ವರೆಗೆ ಟೈಟಲ್ ಹಕ್ಕುಗಳನ್ನು 100 ಕೋಟಿ ರೂ.ಗೆ ಪಡೆದುಕೊಂಡಿದೆ. ಐಪಿಎಲ್‌ನ 2018 ಮತ್ತು 2019 ರ ಸೀಸನ್ ನಲ್ಲೂ ಮುಂದುವರಿಯಿತು. ಹೀಗೆ ಪ್ರಾಯೋಜಕತ್ವ ಶುಲ್ಕಗಳು ಗಗನಕ್ಕೇರಿದವು, ಏನಿಲ್ಲವೆಂದರೂ ವಿವೋ ಬಿಸಿಸಿಐಗೆ 440 ಕೋಟಿ ರೂ. ರೂಪಾಯಿ ಕೊಟ್ಟಿರಬಹುದು ಎನ್ನಲಾಗಿದೆ.

IPLನಲ್ಲಿ ಈ ನೂತನ ತಂಡದ captain Hardik Pandya | Oneindia Kannada

ಭಾರತ-ಚೀನಾ ಗಡಿ ವಿವಾದದಿಂದಾಗಿ ವಿವೊ 2020ರ ಸೀಸನ್‌ನಲ್ಲಿ ಕಮರ್ಷಿಯಲ್‌ನಿಂದ ಹಿಂದೆ ಸರಿಯಿತು. ಪರಿಣಾಮ ಡ್ರೀಮ್ ಇಲೆವೆನ್ 222 ಕೋಟಿ ರೂಪಾಯಿಗೆ ಏಕೈಕ ವರ್ಷದ ಫ್ರಾಂಚೈಸಿ ಪಡೆದಿತ್ತು. 2021ಕ್ಕೆ ಒಂದು ವರ್ಷದ ಬಾಕಿ ಉಳಿಸಿಕೊಂಡಿದ್ದ ವಿವೊ ಟೈಟಲ್ ಪ್ರಾಯೋಜಕತ್ವ ಹೊಂದಿತ್ತು. ಆದ್ರೆ ಈ ಬಾರಿ ಟಾಟಾ ಗೆದ್ದಿತ್ತು, ಸುಮಾರು 300 ಕೋಟಿಗಳನ್ನ ಟೈಟಲ್ ಪ್ರಾಯೋಜಕತ್ವಕ್ಕೆ ನೀಡಿರಬಹುದು ಎಂದು ಅಂದಾಜಿಸಲಾಗಿದೆ.

Story first published: Tuesday, January 18, 2022, 14:19 [IST]
Other articles published on Jan 18, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X