For Quick Alerts
ALLOW NOTIFICATIONS  
For Daily Alerts
 

IPL 2025: ಐಪಿಎಲ್‌ ಮತ್ತೆ ಆರಂಭವಾಗುವುದು ಯಾವಾಗ? ಫೈನಲ್‌ ನಡೆಯುವುದು ಎಲ್ಲಿ?

ಭಾರತ ಹಾಗೂ ಪಾಕಿಸ್ತಾನ ನಡುವಣ ಉದ್ವಿಗ್ನತೆ ಹೆಚ್ಚಾಗಿದ್ದರಿಂದ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್‌ ಟೂರ್ನಿಯನ್ನು ಒಂದು ವಾರಗಳ ಕಾಲ ಸ್ಥಗಿತಗೊಳಿಸಲಾಗಿತ್ತು. ಈಗ ಈ ಲೀಗ್‌ ಮತ್ತೆ ಆರಂಭವಾಗುವುದಕ್ಕೆ ಮೂಹುರ್ತ ಫಿಕ್ಸ್ ಆದಂತೆ ಕಾಣುತ್ತಿದೆ. ಭಾರತ, ಪಾಕ್‌ ನಡುವೆ ಕದನ ವಿರಾಮ ಘೋಷಣೆ ಆದ ಬೆನ್ನಲ್ಲೆ ಬಿಸಿಸಿಐ ಹಾಗೂ ಐಪಿಎಲ್‌ ಕಾರ್ಯಕಾರಣಿ ಮಂಡಳಿ ಐಪಿಎಲ್‌ ಆರಂಭದ ಬಗ್ಗೆ ಮಾತುಕತೆ ನಡೆಸಿದೆ. ಈ ವೇಳೆ ಮತ್ತೆ ಐಪಿಎಲ್‌ ಟೂರ್ನಿ ಮೇ 16 ರಂದು ಆರಂಭವಾಗುವ ಸಾಧ್ಯತೆ ಇದೆ.

ಐಪಿಎಲ್‌ ವೇಳಾ ಪಟ್ಟಿಯ ಬಗ್ಗೆ ಇನ್ನು ಅಧಿಕೃತವಾಗಿ ಯಾವುದೇ ಮಾಹಿತಿ ಬಂದಿಲ್ಲ. ಆದರೆ ಮೂಲಗಳ ಪ್ರಕಾರಣ ಐಪಿಎಲ್‌ ಫೈನಲ್‌ ಪಂದ್ಯ ಮೇ 30 ಅಥವಾ ಜೂನ್‌ 1 ರಂದು ನಡೆಯುವ ಸಾಧ್ಯತೆ ಇದೆ. ಮುಂದಿನ ಐಪಿಎಲ್ ಬೇರೆ ಬೇರೆ ಸ್ಥಳಗಳಲ್ಲಿ ನಡೆಯುವ ಸಾಧ್ಯತೆ ಇದೆ. ಐಪಿಎಲ್‌ ಪಂದ್ಯಗಳು ಲಕ್ನೋ ಸೂಪರ್ ಜೈಂಟ್ಸ್‌ ಹಾಗೂ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ನಡುವಿನ ಪಂದ್ಯದ ಜೊತೆ ಆರಂಭವಾಗಲಿದೆ ಎಂದು ತಿಳಿದು ಬಂದಿದೆ.

IPL to Resume on May 16 After India-Pakistan Tensions Ease Final Likely on June 1

ಐಪಿಎಲ್‌ ಆರಂಭವಾಗುವುದು ಯಾವಾಗ?

ಈಗಾಗಲೇ ಈ ಬಗ್ಗೆ ಐಪಿಎಲ್‌ ಫ್ರಾಂಚೈಸಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ಬಿಸಿಸಿಐ ಮೂಲಗಳಿಂದ ಸ್ಪಷ್ಟವಾಗಿದೆ. ತಮ್ಮ ಸಿಬ್ಬಂದಿಗಳು ಹಾಗೂ ಆಟಗಾರರನ್ನು ಪುನಃ ಕರೆಸಿಕೊಳ್ಳಲು ಬಿಸಿಸಿಐ ಸಂದೇಶವನ್ನು ಮಾಲೀಕರಿಗೆ ರವಾನಿಸಿದೆ. ಏಕಾನ ಮೈದಾನ ಮೊದಲ ಪಂದ್ಯಕ್ಕೆ ಆತಿಥ್ಯ ವಹಿಸಲಿದ್ದು, ಆಟಗಾರರು ಮೇ 13 ರಂದು ಸೇರುವ ಸಾಧ್ಯತೆ ಇದೆ. ಇನ್ನು ಹೈದರಬಾದ್‌ ಕ್ವಾಲಿಫೈಯರ್‌ 1 ಹಾಗೂ ಎಲಿಮಿನೇಟರ್‌ ಪಂದ್ಯಗಳನ್ನು ನಡೆಸುವ ಸಾಧ್ಯತೆ ಇದೆ. ಕೋಲ್ಕತ್ತಾದಲ್ಲಿ ಕ್ವಾಲಿಫೈಯರ್ 2 ಹಾಗೂ ಫೈನಲ್‌ ಪಂದ್ಯಗಳು ನಡೆಯುವ ಸಾಧ್ಯತೆ ಇದೆ. ಇನ್ನು ಈಗ ಬರುತ್ತಿರುವ ಮಾಹಿತಿಯ ಪ್ರಕಾರ ಕೋಲ್ಕತ್ತಾದಿಂದ ಪಂದ್ಯಗಳು ಶಿಫ್ಟ್ ಆಗುವ ಸಾಧ್ಯತೆ ಹೆಚ್ಚಿದೆ. ಫೈನಲ್‌ ಪಂದ್ಯಕ್ಕೆ ಅಹಮದಾಬಾದ್ ಮೈದಾನ ಆತಿಥ್ಯ ನೀಡಬಹುದಾಗಿದೆ.

ಯಾವ ಪಂದ್ಯದಿಂದ ಟೂರ್ನಿ ಆರಂಭ?

ಭಾರತ, ಪಾಕ್‌ ನಡುವಿನ ಉದ್ವಿಗ್ನತೆಯಿಂದಾಗಿ, ಮೇ 9 ರಂದು ಬಿಸಿಸಿಐ ಐಪಿಎಲ್‌ ಪಂದ್ಯಗಳನ್ನು ಸ್ಥಗಿತಗೊಳಿಸಿ ಆದೇಶವನ್ನು ಹೊರಡಿಸಿತ್ತು. ಜಮ್ಮು ಕಾಶ್ಮೀರ್‌ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯ ಬಳಿಕ ಭಾರತ ಪ್ರತಿ ಉತ್ತರ ನಡೆಸಿದೆ. ಇದರಿಂದಾಗಿ ಧರ್ಮಶಾಲಾದಲ್ಲಿ ನಡೆದಿದ್ದ ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಪಂದ್ಯ ರದ್ದಾಗಿತ್ತು. ರದ್ದಾದ ಪಂದ್ಯವನ್ನು ನಡೆಸುವ ಬಗ್ಗೆ ಬಿಸಿಸಿಐ ಯಾವುದೇ ಯೋಚನೆ ಹಾಕಿಕೊಂಡಿಲ್ಲ. ಉಭಯ ತಂಡಗಳಿಗೂ ಒದೊಂದು ಅಂಕವನ್ನು ನೀಡಿ ಆರ್‌ಸಿಬಿ ಹಾಗೂ ಎಲ್‌ಎಸ್‌ಜಿ ಪಂದ್ಯದಿಂದ ಸ್ಥಗಿತ ಗೊಂಡಿರುವ ಟೂರ್ನಿಯನ್ನು ಆರಂಭಿಸಲು ತೀರ್ಮಾನಿಸಲಾಗಿದೆ.

IPL to Resume on May 16 After India-Pakistan Tensions Ease Final Likely on June 1

ಐಪಿಎಲ್‌ನಲ್ಲಿ ಈಗಾಗಲೇ 58 ಪಂದ್ಯಗಳು ಮುಗಿದಿದ್ದು, ಇನ್ನು 16 ಪಂದ್ಯಗಳನ್ನು ಆಡುವುದು ಬಾಕಿ ಇದೆ. ಈ ವೇಳೆ 1 ಎಲಿಮೇನೆಟರ್‌, 2 ಕ್ವಾಲಿಫೈರ್‌, 1 ಫೈನಲ್‌ ಪಂದ್ಯ ಸಹ ಸೇರಿದೆ.

Story first published: Sunday, May 11, 2025, 22:09 [IST]
Other articles published on May 11, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+