CSK ತೊರೆಯುವ ಬಗ್ಗೆ ಅಶ್ವಿನ್ ಹೇಳಿದ್ದೇನು?
18ನೇ ಆವೃತ್ತಿಯ ಐಪಿಎಲ್ ಇತಿಹಾಸದ ಪುಟ ಸೇರಿದೆ. ಈಗ ಮುಂದಿನ ವರ್ಷದ ಐಪಿಎಲ್‌ಗೆ ತಯಾರಿಗಳು ನಡೆದಿವೆ. ಈ ವೇಳೆ ಟ್ರೇಡ್ ವಿಂಡೋ ಸಹ ಓಪನ್ ಆಗಿದೆ. ಆಟಗಾರರ ಬದಲಾವಣೆಗೆ ಇದು ಸಮಯವಾಗಿದೆ. ಇನ್ನು ಹಲವು ಆಟಗಾರರು ತಮ್ಮ ತಂಡವನ್ನು ಬಿಟ್ಟು ಬೇರೆ ತಂಡಗಳತ್ತ ಮುಖ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಮಧ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಸಂಜು ಸ್ಯಾಮ್ಸನ್ ಸಿಎಸ್‌ಕೆ ತಂಡದ ಪರ ಮುಂದಿನ ಆವೃತ್ತಿಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ದಟ್ಟವಾದಂತೆ ಕಾಣುತ್ತಿದೆ. ಇನ್ನು ಸ್ಪಿನ್ ಮಾಂತ್ರಿಕ ಆರ್ ಅಶ್ವಿನ್ ಸಹ ಸಿಎಸ್‌ಕೆ ತಂಡವನ್ನು ಬಿಡುವ ಸಾಧ್ಯತೆ ಇದೆ. ಈ ಬಗ್ಗೆ ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ್ದಾರೆ.
ಕಳೆದ ಬಾರಿಯ ಐಪಿಎಲ್ ಮೆಗಾ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಭಾರೀ ಮೊತ್ತವನ್ನು ನೀಡಿ ರವಿಚಂದ್ರನ್ ಅಶ್ವಿನ್ ಅವರಿಗೆ ತಮ್ಮ ತಂಡಕ್ಕೆ ಸೇರಿಸಿಕೊಂಡಿತ್ತು. ಆದರೆ ಅಶ್ವಿನ್ ತಮ್ಮ ಕ್ಷಮತೆಗೆ ತಕ್ಕ ಪ್ರದರ್ಶನ ನೀಡಲಿಲ್ಲ. ಇವರು 18ನೇ ಆವೃತ್ತಿಯಲ್ಲಿ ಕೇವಲ 9 ಪಂದ್ಯಗಳನ್ನು ಆಡಿದ್ದಾರೆ. ಇದು ಅಶ್ವಿನ್ ಅವರ ಐಪಿಎಲ್ ವೃತ್ತಿ ಬದುಕಿನಲ್ಲಿ ಇದೇ ಮೊದಲ ಬಾರಿಗೆ ಸಂಭವಿಸಿದೆ. ಇದಕ್ಕೂ ಮೊದಲು ಅವರು ಯಾವುದೇ ತಂಡದ ಪರ ಆಡಿದ್ರೂ ಸಹ ಎಲ್ಲ ಪಂದ್ಯಗಳನ್ನು ಆಡಿದ್ದಾರೆ.

ಅಶ್ವಿನ್ ಈಗ ಈ ಬಗ್ಗೆ ಮೌನ ಮುರಿದಿದ್ದಾರೆ. ಅಲ್ಲದೆ ಕಳೆದ ಆವೃತ್ತಿಯಲ್ಲಿ ತಂಡ ತಮಗೆ ನೀಡಿದ ಪಾತ್ರ ಏನಾಗಿತ್ತು ಎಂಬುದನ್ನು ಫ್ರಾಂಚೈಸಿಯಿಂದ ಸ್ಪಷ್ಟನೆ ಕೇಳಿದ್ದಾರೆ. 14 ಪಂದ್ಯಗಳಲ್ಲಿ ಕೇವಲ 9 ಪಂದ್ಯಗಳನ್ನು ಆಡುವುದು ನಿಜಕ್ಕೂ ಹೊಸ ಅನುಭವವಾಗಿದೆ. ನನ್ನ ಸಂಪೂರ್ಣ ವೃತ್ತಿಜೀವನದಲ್ಲಿ ಈ ರೀತಿ ಆಗಿದ್ದು ಮೊದಲ ಬಾರಿಗೆ. ನಾನು ಯಾವಾಗಲೂ ನನ್ನ ತಂಡಕ್ಕಾಗಿ ಪ್ರತಿ ಪಂದ್ಯವನ್ನು ಆಡುತ್ತಿದ್ದೇ. ಆದರೆ ಈ ಬಾರಿ ಅದು ಸಂಭವಿಸಲಿಲ್ಲ ಎಂದು ಅಶ್ವಿನ್ ತಿಳಿಸಿದ್ದಾರೆ.
ಕೈ ಬಿಟ್ಟಿದ್ದು ಏಕೆ?
ಆಟಗಾರ ಈಗ ತನ್ನ ಒಪ್ಪಂದವನ್ನು ಮುಂದುವರೆಸುತ್ತಾನೋ ಇಲ್ಲವೋ ಎಂಬುದನ್ನು ನೇರವಾಗಿ ಫ್ರಾಂಚೈಸಿಗೆ ಹೇಳಬಹುದು. ಹೀಗಾಗಿ ಕಳೆದ ಆವೃತ್ತಿಯಲ್ಲಿ ಕೇವಲ 9 ಪಂದ್ಯಗಳನ್ನು ಆಡಿದ್ದಕ್ಕಾಗಿ ನಾನು ಸಿಎಸ್‌ಕೆ ಬಳಿ ಉತ್ತರ ಕೇಳಿದ್ದೇನೆ. ನನ್ನ ಕೈಯಲ್ಲಿ ಏನು ಇಲ್ಲ ಎಂದು ಅಶ್ವಿನ್ ಹೇಳಿದ್ದಾರೆ.

ಸಂಜು ಸ್ಯಾಮ್ಸನ್ ಟ್ರೇಡ್ ಆಗುವ ಬಗ್ಗೆಯೂ ಮಾತನಾಡಿರುವ ಅಶ್ವಿನ್, ಈ ಬಗ್ಗೆ ಸಂಜು ಏನನ್ನು ಹೇಳಿಲ್ಲ. ಬರೀ ವದಂತಿಗಳು ಅಷ್ಟೇ ಎಂದು ಉತ್ತರಿಸಿದ್ದಾರೆ.
ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಅಶ್ವಿನ್ ಕೇಲವ 9 ಪಂದ್ಯಗಳನ್ನು ಆಡಿ 9.12 ರ ಎಕಾನಮಿಯಲ್ಲಿ ಕೇವಲ 7 ವಿಕೆಟ್‌ಗಳನ್ನು ಪಡೆದರು. ಅಲ್ಲದೆ ಇವರು ಬ್ಯಾಟಿಂಗ್‌ನಲ್ಲೂ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು. ಹೀಗಾಗಿಯೇ ಸಿಎಸ್‌ಕೆ ಅವರನ್ನು ಹಲವು ಪಂದ್ಯಗಳಲ್ಲಿ ಆಡುವ ಹನ್ನೊಂದರ ಬಳಗದಿಂದ ಕೈ ಬಿಟ್ಟಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications