ಐಪಿಎಲ್ ಮೆಗಾ ಹರಾಜಿನಲ್ಲಿ ಮಾರಾಟವಾಗದಿದ್ದರೂ, ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಆಯ್ಕೆಯಾದ ಆಟಗಾರರು ಇವರು!
ಐಪಿಎಲ್ ಮಿನಿ ಹರಾಜಿಗೆ ದಿನಗಣನೆ ಆರಂಭವಾಗಿದೆ. ಐಪಿಎಲ್ ಮಿನಿ ಹರಾಜಿಗೆ ಮುನ್ನ ಪಾಕಿಸ್ತಾನ ಸೂಪರ್ ಲೀಗ್ 2023ಕ್ಕೆ ಡ್ರಾಫ್ಟ್ ಮುಕ್ತಾಯವಾಗಿದೆ. ಹರಾಜಿನ ಬದಲಾಗಿ ಡ್ರಾಫ್ಟ್ ಮೂಲಕ ಪಿಎಸ್‌ಎಲ್‌ನ ಆರು ಫ್ರಾಂಚೈಸಿಗಳು ಆಟಗಾರರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತವೆ.
ಪಾಕಿಸ್ತಾನ ಸೂಪರ್ ಲೀಗ್ ಫ್ರಾಂಚೈಸಿಗಳು ಖಾಲಿ ಸ್ಥಾನಗಳನ್ನು ಭರ್ತಿ ಮಾಡುವ ಮೂಲಕ ತಮ್ಮ ತಂಡವನ್ನು ಪೂರ್ಣಗೊಳಿಸಿದ್ದಾರೆ. ಹೊಸ ಋತುವಿನ ಮೊದಲು ಪ್ರತಿ ತಂಡಕ್ಕೆ ಕೆಲವು ಆಟಗಾರರನ್ನು ಉಳಿಸಿಕೊಳ್ಳಲು ಸಂಘಟಕರು ಅವಕಾಶ ಮಾಡಿಕೊಟ್ಟರು. ಹಾಲಿ ಚಾಂಪಿಯನ್ ಲಾಹೋರ್ ಖಲಂದರ್ಸ್, ಕರಾಚಿ ಕಿಂಗ್ಸ್, ಮುಲ್ತಾನ್ ಸುಲ್ತಾನ್ಸ್, ಇಸ್ಲಾಮಾಬಾದ್ ಯುನೈಟೆಡ್, ಪೇಶಾವರ್ ಝಲ್ಮಿ ಮತ್ತು ಕ್ವೆಟ್ಟಾ ಗ್ಲಾಡಿಯೇಟರ್ಸ್ ಆಟಗಾರರನ್ನು ಸೇರ್ಪಡೆ ಮಾಡಿಕೊಂಡವು.
ಆರು ತಂಡಗಳು ಡ್ರಾಫ್ಟ್ ಸಿಸ್ಟಮ್ ಮೂಲಕ ತಮ್ಮ ಆಯ್ಕೆಗಳನ್ನು ಮಾಡುತ್ತವೆ, ಇದರಲ್ಲಿ ಆಟಗಾರರನ್ನು ಪ್ಲಾಟಿನಂ, ಡೈಮಂಡ್, ಸಿಲ್ವರ್, ಗೋಲ್ಡ್ ಮತ್ತು ಸಪ್ಲಿಮೆಂಟರಿಗಳಂತಹ ವಿವಿಧ ವಿಭಾಗಗಳಾಗಿ ವಿಂಗಡಿಸಲಾಗಿದೆ. ಪ್ಲಾಟಿನಂ ಮತ್ತು ಡೈಮಂಡ್ ಎನ್ನುವ ಅಗ್ರ ವಿಭಾಗಗಳಿವೆ.
2022ರ ಐಪಿಎಲ್ ಮೆಗಾ ಹರಾಜಿನಲ್ಲಿ ಮಾರಾಟವಾಗದೆ ಉಳಿದ ಪ್ರಮುಖ ಐದು ಆಟಗಾರರಿಗೆ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಅಗ್ರ ಆಯ್ಕೆಯಾಗಿದ್ದಾರೆ.

ಪ್ಲಾಟಿನಂ ವಿಭಾಗದಲ್ಲಿ ಆಯ್ಕೆಯಾದ ಇಮ್ರಾನ್ ತಾಹಿರ್
ದಕ್ಷಿಣ ಆಫ್ರಿಕಾದ ಲೆಗ್-ಸ್ಪಿನ್ನರ್ ಇಮ್ರಾನ್ ತಾಹಿರ್ ಪಾಕಿಸ್ತಾನ ಸೂಪರ್ ಲೀಗ್ 2023 ರಲ್ಲಿ ಕರಾಚಿ ಕಿಂಗ್ಸ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಪ್ಲಾಟಿನಂ ವಿಭಾಗದಲ್ಲಿ ಅವರು ತಂಡಕ್ಕೆ ಡ್ರಾಫ್ಟ್ ಮಾಡಿದ್ದಾರೆ. 43 ವರ್ಷದ ಲೆಗ್ ಸ್ಪಿನ್ನರ್ ಪಾಕಿಸ್ತಾನದ ಸ್ಪಿನ್ನರ್ ಸ್ನೇಹಿ ಪಿಚ್‌ಗಳಲ್ಲಿ ಪರಿಣಾಮಕಾರಿಯಾಗಬಲ್ಲರು ಎಂದು ನಂಬಲಾಗಿದೆ. 2021ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ ಆಡಿದ್ದ ಇಮ್ರಾನ್ ತಾಹಿರ್ 2022ರ ಐಪಿಎಲ್ ಮೆಗಾಹರಾಜಿನಲ್ಲಿ ಹರಾಜಾಗದೆ ಉಳಿದಿಕೊಂಡಿದ್ದರು.
ಇಮ್ರಾನ್ ತಾಹಿರ್ ಮತ್ತು ಮ್ಯಾಥ್ಯೂ ವೇಡ್ ಕರಾಚಿ ಕಿಂಗ್ಸ್‌ನಿಂದ ಎರಡು ಪ್ಲಾಟಿನಂ ಆಯ್ಕೆಯಾಗಿದ್ದರು. ಪಿಎಸ್ಎಲ್ 2023 ರಲ್ಲಿ ಹೈದರ್ ಅಲಿ, ಇಮಾದ್ ವಾಸಿಂ, ಮೊಹಮ್ಮದ್ ಅಮೀರ್ ಮತ್ತು ಶೋಯೆಬ್ ಮಲಿಕ್ ಅವರ ಜೊತೆ ತಂಡದಲ್ಲಿ ಆಡಲಿದ್ದಾರೆ.
IPL 2023: ಮಿನಿ ಹರಾಜಿನಲ್ಲಿ ಈ 3 ಆಟಗಾರರ ಮೇಲೆ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ಕಣ್ಣು

ಎಡಗೈ ವೇಗಿ ಜೋಶ್ ಲಿಟಲ್
ಐರ್ಲೆಂಡ್‌ನ ಎಡಗೈ ವೇಗದ ಬೌಲರ್ ಜೋಶ್ ಲಿಟಲ್ ಐಪಿಎಲ್ 2022 ಹರಾಜಿನಲ್ಲಿ ಮಾರಾಟವಾಗದೆ ನಿರಾಸೆ ಅನುಭವಿಸಿದ್ದರು. ಆದರೆ, 2023ರ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಅವರು ಪ್ಲಾಟಿನಂ ವಿಭಾಗದಲ್ಲಿ ಮುಲ್ತಾನ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಡೇವಿಡ್ ಮಿಲ್ಲರ್ ಕೂಡ ಪ್ಲಾಟಿನಂ ವಿಭಾಗದಲ್ಲಿ ಮುಲ್ತಾನ್ ಸುಲ್ತಾನ್ಸ್ ತಂಡಕ್ಕೆ ಆಯ್ಕೆಯಾದರು.
2022ರ ಐಪಿಎಲ್ ಮೆಗಾ ಹರಾಜಿನಲ್ಲಿ ಯಾವುದೇ ತಂಡಕ್ಕೆ ಆಯ್ಕೆಯಾಗ ಜೋಶ್ ಲಿಟಲ್, ಕಳೆದ ಸೀಸನ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ನ ನೆಟ್ ಬೌಲರ್‌ಗಳಲ್ಲಿ ಒಬ್ಬರಾಗಿದ್ದರು.

ಇಂಗ್ಲೆಂಡ್‌ನ ಸ್ಫೋಟಕ ಬ್ಯಾಟರ್ ಜೇಮ್ಸ್ ವಿನ್ಸ್
ಇಂಗ್ಲೆಂಡ್ ಬ್ಯಾಟರ್ ಜೇಮ್ಸ್ ವಿನ್ಸ್ ಉತ್ತಮ ಟಿ20 ಬ್ಯಾಟರ್‌ಗಳಲ್ಲಿ ಒಬ್ಬರು. ಆದರೂ, 2022ರ ಮೆಗಾ ಹರಾಜಿನಲ್ಲಿ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಯಾವುದೇ ತಂಡ ಆಸಕಗ್ತಿ ತೋರಲಿಲ್ಲ.
ಆದರೆ, 2023ರ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಅವರು ಡೈಮೆಂಡ್ ವಿಭಾಗದಲ್ಲಿ ಕರಾಚಿ ಕಿಂಗ್ಸ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಕರಾಚಿ ಕಿಂಗ್ಸ್ ಜೇಮ್ಸ್ ಫುಲ್ಲರ್ ಅವರನ್ನು ಅದೇ ವಿಭಾಗದಲ್ಲಿ ಆಯ್ಕೆ ಮಾಡಲಾಗಿದೆ.

ಅಫ್ಘಾನಿಸ್ತಾನ ಸ್ಪಿನ್ನರ್ ಮುಜೀಬ್
ಪಂಜಾಬ್ ಕಿಂಗ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್‌ಗಾಗಿ ಆಡಿದ್ದ ಅಫ್ಘಾನಿಸ್ತಾನದ ಲೆಗ್ ಸ್ಪಿನ್ನರ್ ಮುಜೀಬ್ ಉರ್ ರೆಹಮಾನ್ 2022ರ ಐಪಿಎಲ್ ಮೆಗಾ ಹರಾಜಿನಲ್ಲಿ ಅವರು ಹರಾಜಾಗದೆ ಉಳಿದುಕೊಂಡಿದ್ದರು.
2023ರ ಪಾಕಿಸ್ತಾನ ಸೂಪರ್ ಲೀಗ್‌ಗಾಗಿ ಅವರು ಪೇಶಾವರ್ ಝಲ್ಮಿ ತಂಡಕ್ಕೆ ಡೈಮಂಡ್ ವಿಭಾಗದಲ್ಲಿ ಆಯ್ಕೆಯಾಗಿದ್ದಾರೆ. ಬಾಬರ್ ಅಜಮ್, ವಹಾಬ್ ರಿಯಾಜ್ ಮತ್ತು ಶೆರ್ಫಾನೆ ರುದರ್‌ಫೋರ್ಡ್ ಅವರಂತಹ ಉತ್ತಮ ಆಟಗಾರರಿರುವ ಪೇಶಾವರ್ ಝಲ್ಮಿ ತಂಡಕ್ಕೆ ಮುಜೀಬ್ ಆಯ್ಕೆ ತಂಡದ ಬೌಲಿಂಗ್ ವಿಭಾಗಕ್ಕೆ ಹೆಚ್ಚಿನ ಶಕ್ತಿ ತುಂಬಿದೆ.

ವಿಕೆಟ್ ಕೀಪರ್ ರಹಮಾನುಲ್ಲಾ ಗುರ್ಬಾಜ್
ಅಫ್ಘಾನಿಸ್ತಾನ ಆಟಗಾರ ವಿಕೆಟ್ ಕೀಪರ್ ಬ್ಯಾಟರ್ ರಹಮಾನುಲ್ಲಾ ಗುರ್ಬಾಜ್. ಇಸ್ಲಾಮಾಬಾದ್ ಯುನೈಟೆಡ್ ಪಿಎಸ್ಎಲ್ ಡ್ರಾಫ್ಟ್ 2023 ರಲ್ಲಿ ಪ್ಲಾಟಿನಂ ವಿಭಾಗದಲ್ಲಿ ಯುವ ಆಟಗಾರ ರಹಮಾನುಲ್ಲಾ ಗುರ್ಬಾಜ್ ಅವರನ್ನು ಆಯ್ಕೆ ಮಾಡಿದೆ.
ಐಪಿಎಲ್ 2022ರ ಮೆಗಾ ಹರಾಜಿನಲ್ಲಿ ಅವರು ಮಾರಾಟವಾಗಲಿಲ್ಲ. ಆದರೆ, ನಂತರ ಗುಜರಾತ್ ಟೈಟನ್ಸ್ ತಂಡದಲ್ಲಿ ಜೇಸನ್ ರಾಯ್ ಅವರ ಬದಲಿಯಾಗಿ ಆಯ್ಕೆಯಾದರು. ತಂಡಕ್ಕೆ ಆಯ್ಕೆಯಾದರೂ ಅವರು ಆಡುವ ಅವಕಾಶವನ್ನು ಪಡೆಯಲಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications