IPL 2023: ಮಿನಿ ಹರಾಜಿನಲ್ಲಿ ಈ 3 ಆಟಗಾರರ ಮೇಲೆ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ಕಣ್ಣು

ಡಿಸೆಂಬರ್ 23ರಂದು ಕೇರಳದ ಕೊಚ್ಚಿಯಲ್ಲಿ ನಡೆಯಲಿರುವ 2023ರ ಐಪಿಎಲ್ ಟೂರ್ನಿಗಾಗಿ ಮಿನಿ ಹರಾಜು ಪ್ರಕ್ರಿಯೆಗೆ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ಸಜ್ಜಾಗಿದ್ದು, ಅದಕ್ಕೂ ಮುನ್ನ ಯಾವ ಆಟಗಾರರನ್ನು ಖರೀದಿಸಬೇಕೆಂಬ ಯೋಚನೆಯಲ್ಲಿ ತೊಡಗಿದೆ.
ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟನ್ಸ್ ತಂಡ 2022ರಲ್ಲಿ ತಮ್ಮ ಚೊಚ್ಚಲ ಋತುವಿನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪ್ರಶಸ್ತಿಯನ್ನು ಗೆದ್ದುಕೊಂಡಿತು ಮತ್ತು ಇದೀಗ ಮುಂದಿನ ವರ್ಷ ಐಪಿಎಲ್ 2023ರ ಋತುವಿನಲ್ಲಿ ಟ್ರೋಫಿ ಉಳಿಸಿಕೊಳ್ಳಲು ಪ್ರಯತ್ನಿಸಲಿದೆ.
ತಮ್ಮ ಉದ್ಘಾಟನಾ ಐಪಿಎಲ್ ಋತುವಿನಲ್ಲಿ ರಾಜಸ್ಥಾನ್ ರಾಯಲ್ಸ್ ನಂತರ ಗುಜರಾತ್ ಟೈಟನ್ಸ್ ತಂಡ ಚೊಚ್ಚಲ ಟೂರ್ನಿಯಲ್ಲೇ ಈ ಸಾಧನೆ ಮಾಡಿದ ಮೊದಲ ತಂಡವಾಯಿತು. ಐಪಿಎಲ್ 2022ರಲ್ಲಿ ಗುಜರಾತ್ ಟೈಟನ್ಸ್ ತನ್ನ 14 ಲೀಗ್ ಹಂತದ ಪಂದ್ಯಗಳಲ್ಲಿ 10 ಪಂದ್ಯಗಳನ್ನು ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.

ಕೊಚ್ಚಿಯಲ್ಲಿ ಶುಕ್ರವಾರ (ಡಿಸೆಂಬರ್ 23) ನಡೆಯಲಿರುವ ಮಿನಿ ಹರಾಜು
ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಐಪಿಎಲ್ 2022ರಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಮುನ್ನಡೆಸಲು ಮರಳಿದ ನಂತರ ವೃತ್ತಿಜೀವನದ ಉತ್ತುಂಗದಲ್ಲಿದ್ದಾರೆ. ಏಕೆಂದರೆ ಈಗ ರೋಹಿತ್ ಶರ್ಮಾ ಅವರನ್ನು ಬದಲಿಸಿ ಭಾರತದ ಟಿ20 ನಾಯಕನ ಜವಾಬ್ದಾರಿ ವಹಿಸಿಕೊಳ್ಳುವ ನೆಚ್ಚಿನ ಆಟಗಾರನಾಗಿದ್ದಾರೆ.
ಗುಜರಾತ್ ಟೈಟನ್ಸ್ 3 ಸಾಗರೋತ್ತರ ಸ್ಲಾಟ್‌ಗಳನ್ನು ಹೊಂದಿದೆ ಮತ್ತು ಹರಾಜಿಗಾಗಿ ತನ್ನ ಪರ್ಸ್‌ನಲ್ಲಿ 19.25 ಕೋಟಿ ರೂಪಾಯಿಗಳನ್ನು ಹೊಂದಿದೆ. ಕೊಚ್ಚಿಯಲ್ಲಿ ಶುಕ್ರವಾರ (ಡಿಸೆಂಬರ್ 23) ನಡೆಯಲಿರುವ ಐಪಿಎಲ್ 2023ಗಾಗಿ ಹರಾಜಿನಲ್ಲಿ ಹಾಲಿ ಚಾಂಪಿಯನ್‌ಗಳು ಕಣ್ಣಿಟ್ಟಿರುವ ಮೂರು ಆಟಗಾರರ ಪಟ್ಟಿ ಇಲ್ಲಿದೆ.

ಮಯಾಂಕ್ ಅಗರ್ವಾಲ್ (ಮೂಲ ಬೆಲೆ 1 ಕೋಟಿ ರೂ.)
ಕರ್ನಾಟಕ ಮೂಲದ ಕ್ರಿಕೆಟಿಗ ಮಯಾಂಕ್ ಅಗರ್ವಾಲ್ ಕಳೆದ ಋತುವಿನಲ್ಲಿ ಪಂಜಾಬ್ ಕಿಂಗ್ಸ್ ನಾಯಕರಾಗಿದ್ದರು. ಆದರೆ ಪ್ರೀತಿ ಜಿಂಟಾ ಸಹ-ಮಾಲೀಕತ್ವದ ಫ್ರಾಂಚೈಸಿ ಪರ ಮತ್ತೊಂದು ನಿರಾಶಾದಾಯಕ ಪ್ರದರ್ಶನ ನೀಡಿದ ಕಾರಣ, ಆ ತಂಡದಿಂದ ಕೈಬಿಡಲಾಗಿದೆ.
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮಯಾಂಕ್ ಅಗರ್ವಾಲ್ ಯಶಸ್ವಿಯಾಗಿದ್ದಾರೆ. ಈವರೆಗೆ ಆಡಿದ 113 ಪಂದ್ಯಗಳಲ್ಲಿ ಮಯಾಂಕ್ 22.63 ಸರಾಸರಿಯಲ್ಲಿ ಒಂದು ಶತಕ ಮತ್ತು 12 ಅರ್ಧಶತಕಗಳೊಂದಿಗೆ 2331 ರನ್ ಗಳಿಸಿದ್ದಾರೆ. ಇನ್ನು ಕರ್ನಾಟಕ ಪರ ರಣಜಿ ಸೇರಿದಂತೆ ಇತರ ಟೂರ್ನಿಯಲ್ಲಿ ಆಡುತ್ತಿದ್ದಾರೆ.

ಜೋಶುವಾ ಲಿಟಲ್ (ಮೂಲ ಬೆಲೆ 50 ಲಕ್ಷ ರೂ.)
ಐರ್ಲೆಂಡ್ ವೇಗಿ ಜೋಶುವಾ ಲಿಟಲ್ ಈ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದ 2022ರ ಟಿ20 ವಿಶ್ವಕಪ್‌ನಲ್ಲಿ ಬಹಳ ಪ್ರಭಾವಶಾಲಿ ಪ್ರದರ್ಶನ ನೀಡಿದ್ದರು. ಲ್ಯೂಕಿ ಫರ್ಗುಸನ್ ಅನುಪಸ್ಥಿತಿಯಲ್ಲಿ ಗುಜರಾತ್ ಟೈಟನ್ಸ್ ಮ್ಯಾಚ್ ಫಿನಿಶಿಂಗ್ ವೇಗಿಗಳ ಹುಡುಕಾಟದಲ್ಲಿದೆ.
ಟಿ20 ವಿಶ್ವಕಪ್ 2022ರಲ್ಲಿ ಜೋಶುವಾ ಲಿಟಲ್ 7 ಪಂದ್ಯಗಳಲ್ಲಿ ಆಡಿದ್ದಾರೆ ಮತ್ತು ಅತ್ಯುತ್ತಮ 3/22 ಮತ್ತು ಕೇವಲ 7ರ ಎಕಾನಮಿ ದರದೊಂದಿಗೆ ಒಟ್ಟು 11 ವಿಕೆಟ್‌ಗಳನ್ನು ಪಡೆದಿದ್ದಾರೆ.

ಡೇವಿಡ್ ಮಲಾನ್ (ಮೂಲ ಬೆಲೆ 1.5 ಕೋಟಿ ರೂ.)
ಮಾಜಿ ವಿಶ್ವ ನಂ.1 ಟಿ20 ಆಟಗಾರ ಡೇವಿಡ್ ಮಲಾನ್ ಕೂಡ ಪಂಜಾಬ್ ಕಿಂಗ್ಸ್ ತಂಡದ ಭಾಗವಾಗಿದ್ದರು. ಆದರೆ 2023ರ ಋತುವಿನಲ್ಲಿ ಅವರನ್ನು ಉಳಿಸಿಕೊಳ್ಳಲಾಗಲಿಲ್ಲ.
2022ರಲ್ಲಿ ಮಲಾನ್ 37 ಟಿ20 ಪಂದ್ಯಗಳನ್ನು ಆಡಿದ್ದು, 142. 22 ಸ್ಟ್ರೈಕ್‌ರೇಟ್‌ನಲ್ಲಿ 1,120 ರನ್ ಗಳಿಸಿದ್ದರು ಮತ್ತು ಔಟಾಗದೆ 98 ಸ್ಕೋರ್ ದಾಖಲಿಸಿದ್ದಾರೆ. 2022ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಗಾಯದ ಕಾರಣದಿಂದಾಗಿ ಡೇವಿಡ್ ಮಲಾನ್ ಆಡಲಿಲ್ಲ. ಆದರೆ ಟ್ರೋಫಿಯನ್ನು ಇಂಗ್ಲೆಂಡ್ ಗೆದ್ದುಕೊಂಡಿತು.

2023ರ ಮಿನಿ ಹರಾಜಿಗೆ ಮುನ್ನ ಗುಜರಾತ್ ಟೈಟನ್ಸ್ ತಂಡದ ಆಟಗಾರರು
ಉಳಿಸಿಕೊಂಡ ಆಟಗಾರರು: ಹಾರ್ದಿಕ್ ಪಾಂಡ್ಯ (ನಾಯಕ), ಶುಭಮನ್ ಗಿಲ್, ಡೇವಿಡ್ ಮಿಲ್ಲರ್, ಅಭಿನವ್ ಮನೋಹರ್, ಸಾಯಿ ಸುದರ್ಶನ್, ವೃದ್ಧಿಮಾನ್ ಸಹಾ, ಮ್ಯಾಥ್ಯೂ ವೇಡ್, ರಶೀದ್ ಖಾನ್, ರಾಹುಲ್ ತೆವಾಟಿಯಾ, ವಿಜಯ್ ಶಂಕರ್, ಮೊಹಮ್ಮದ್ ಶಮಿ, ಅಲ್ಜಾರಿ ಜೋಸೆಫ್, ಯಶ್ ದಯಾಳ್, ಪ್ರದೀಪ್ ಸಾಂಗ್ವಾನ್, ದರ್ಶನ್ ನಲ್ಕಂಡೆ, ಜಯಂತ್ ಯಾದವ್, ಆರ್ ಸಾಯಿ ಕಿಶೋರ್, ನೂರ್ ಅಹ್ಮದ್
ಬಿಡುಗಡೆಯಾದ ಆಟಗಾರರು: ರಹಮಾನುಲ್ಲಾ ಗುರ್ಬಾಜ್ (50 ಲಕ್ಷ), ಲಾಕಿ ಫರ್ಗುಸನ್ (10 ಕೋಟಿ ರೂ.), ಡೊಮಿನಿಕ್ ಡ್ರೇಕ್ಸ್ (1.1 ಕೋಟಿ ರೂ.), ಗುರುಕೀರತ್ ಸಿಂಗ್ (50 ಲಕ್ಷ ರೂ.), ಜೇಸನ್ ರಾಯ್ (2 ಕೋಟಿ ರೂ.), ವರುಣ್ ಆರೋನ್ (50 ಲಕ್ಷ ರೂ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications