ಐಪಿಎಲ್ 2020: ತಡವಾಗಿ ಯುಎಇಗೆ ಪ್ರಯಾಣಿಸಲಿವೆ ತಂಡಗಳು

ಮುಂಬೈ, ಆಗಷ್ಟ್ 3: ಕೊರೊನಾ ವೈರಸ್ ಭೀತಿಯಿರುವುದರಿಂದ ಮುನ್ನೆಚ್ಚರಿಕೆಯಾಗಿ ಕೊಂಚ ತಡವಾಗಿ ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ಪ್ರಯಾಣ ಬೆಳೆಸಬೇಕೆಂದರೆ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾವು ಇಂಡಿಯನ್ ಪ್ರೀಮಿಯರ್ ಲೀಗ್ ಫ್ರಾಂಚೈಸಿಗಳನ್ನು ಮತ್ತು ಮಧ್ಯಸ್ಥದಾರರನ್ನು ಕೇಳಿಕೊಂಡಿದೆ.
13ನೇ ಆವೃತ್ತಿಯ ಐಪಿಎಲ್‌ಗಾಗಿ ತಂಡಗಳು ಯುಎಇಗೆ ಆಗಸ್ಟ್ 20ರ ನಂತರವೇ ಹೊರಡಬೇಕು ಎಂದು ಬಿಸಿಸಿಐ, ಫ್ರಾಂಚೈಸಿಗಳಿಗೆ ಹೇಳಿದೆ ಎಂದು ತಿಳಿದುಬಂದಿದೆ. ಐಪಿಎಲ್ ಸಲುವಾಗಿ ತಂಡಗಳು ಆಗಸ್ಟ್ 20ಕ್ಕೆ ಒಂದು ವಾರ ಮುಂಚಿತವಾಗಿ ಹೊರಡಲಿದ್ದವು ಎಂಬ ಮಾಹಿತಿ ಲಭ್ಯವಾಗಿದೆ.
ಬಿಸಿಸಿಐಯು ಈ ವರ್ಷದ ಐಪಿಎಲ್ ಅನ್ನು ಯುಎಇಯಲ್ಲಿ ಸೆಪ್ಟೆಂಬರ್ 19ರಿಂದ ನವೆಂಬರ್ 8ರ ವರೆಗೆ ನಡೆಸುವುದಾಗಿ ಈ ಮೊದಲು ಹೇಳಿತ್ತು. ಆದರೆ ಈಗ ಫೈನಲ್ ದಿನಾಂಕ 2 ದಿನ ಮುಂದೂಡಲ್ಪಟ್ಟಿದೆ. ನವೆಂಬರ್ 10ರಂದು ಫೈನಲ್‌ನೊಂದಿಗೆ ನಗದು ಶ್ರೀಮಂತ ಟೂರ್ನಿ ಐಪಿಎಲ್‌ಗೆ ತೆರೆ ಎಳೆಯಲಾಗುತ್ತದೆ.
ಪ್ರಸಾರಕ ಸ್ಟಾರ್ ಇಂಡಿಯಾಕ್ಕೆ ದೀಪಾವಳಿಯಂದು ಎರಡು ಹೆಚ್ಚುವರಿ ದಿನಗಳನ್ನು ನೀಡುವ ಸಲುವಾಗಿ ಐಪಿಎಲ್ ಗವರ್ನಿಂಗ್ ಕೌನ್ಸಿಲ್, ಫೈನಲ್ ಅನ್ನು ನವೆಂಬರ್ 8ರಿಂದ 10ಕ್ಕೆ ಬದಲಾಯಿಸಿದೆ. ಪಂದ್ಯಗಳು ಭಾರತೀಯ ಕಾಲಮಾನ 3.30 pm, 7.30 pmಗೆ ಆರಂಭಗೊಳ್ಳಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications