Irani Cup 2023: ಮಧ್ಯಪ್ರದೇಶ vs ರೆಸ್ಟ್ ಆಫ್ ಇಂಡಿಯಾ ಪಂದ್ಯದ ಸಮಯ, ಸಂಪೂರ್ಣ ತಂಡಗಳ ವಿವರ

ಮಧ್ಯಪ್ರದೇಶದ ಇಂದೋರ್‌ನ ಹೋಳ್ಕರ್ ಕ್ರೀಡಾಂಗಣದಲ್ಲಿ ಬುಧವಾರ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮೂರನೇ ಟೆಸ್ಟ್ ಪಂದ್ಯಕ್ಕೆ ಸಿದ್ಧವಾಗಿದ್ದರೆ, ಮತ್ತೊಂದೆಡೆ ಅಲ್ಲಿಂದ 500 ಕಿಮೀ ದೂರದಲ್ಲಿರುವ ಗ್ವಾಲಿಯರ್‌ನಲ್ಲಿ ಮತ್ತೆರಡು ತಂಡಗಳು ಭಾರತೀಯ ದೇಶೀಯ ಕ್ರಿಕೆಟ್‌ನ ಅತ್ಯಂತ ಪ್ರತಿಷ್ಠಿತ ಟ್ರೋಫಿಗಾಗಿ ಸೆಣಸಾಡಲಿದ್ದಾರೆ.
ಕಳೆದ ವರ್ಷದ ರಣಜಿ ಟ್ರೋಫಿ ಚಾಂಪಿಯನ್ಸ್ (2021-22) ಮಧ್ಯಪ್ರದೇಶ ತಂಡವು ಗ್ವಾಲಿಯರ್‌ನ ಕ್ಯಾಪ್ಟನ್ ರೂಪ್ ಸಿಂಗ್ ಸ್ಟೇಡಿಯಂನಲ್ಲಿ 58ನೇ ಇರಾನಿ ಕಪ್ ಪಂದ್ಯದಲ್ಲಿ ಮಯಾಂಕ್ ಅಗರ್ವಾಲ್ ನಾಯಕತ್ವದ ಇತರೆ ಭಾರತ ತಂಡವನ್ನು ಎದುರಿಸಲಿದೆ.
ಪ್ರಸ್ತುತ ಆಸ್ಟ್ರೇಲಿಯಾ ವಿರುದ್ಧದ ಸರಣಿಯ ನಂತರ ಭಾರತ ತಂಡವು ಈ ವರ್ಷ ಹೆಚ್ಚಿನ ಟೆಸ್ಟ್ ಪಂದ್ಯಗಳನ್ನು ಆಡುವುದಿಲ್ಲವಾದರೂ, ಪ್ರಸಕ್ತ ರಣಜಿ ಟ್ರೋಫಿಯಲ್ಲಿ 990 ರನ್‌ಗಳೊಂದಿಗೆ ರನ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ರೆಸ್ಟ್ ಆಫ್ ಇಂಡಿಯಾ ತಂಡದ ನಾಯಕ ಮಯಾಂಕ್ ಅಗರ್ವಾಲ್ ಸೇರಿದಂತೆ ದೇಶೀಯ ಆಟಗಾರರ ಪ್ರದರ್ಶನವನ್ನು ನಿರ್ಣಯಿಸಲು ಆಯ್ಕೆಗಾರರಿಗೆ ಅವಕಾಶ ನೀಡುತ್ತದೆ.
ಕರ್ನಾಟಕದ ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ ಅವರನ್ನು ಕಳೆದ ವರ್ಷದಿಂದ ರಾಷ್ಟ್ರೀಯ ತಂಡದಿಂದ ಕೈಬಿಡಲಾಗಿದೆ. ಇದೀಗ ನಂತರ ದೇಶೀಯ ಕ್ರಿಕೆಟ್‌ನಲ್ಲಿ ಫಾರ್ಮ್ ಕಂಡುಕೊಂಡಿದ್ದಾರೆ.
ಮಯಾಂಕ್ ಅಗರ್ವಾಲ್ ಒಂದು ವೇಳೆ ಇಲ್ಲಿ ಉತ್ತಮ ಪ್ರದರ್ಶನ ನೀಡಿದರೆ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಭಾರತ ಅರ್ಹತೆ ಪಡೆದರೆ ಅಗರ್ವಾಲ್ ಅವರನ್ನು ಮರಳಿ ತಂಡಕ್ಕೆ ಕರೆತರಬಹುದು ಅಥವಾ ವರ್ಷದ ನಂತರ ವೆಸ್ಟ್ ಇಂಡೀಸ್‌ನಲ್ಲಿ ಎರಡು ಟೆಸ್ಟ್ ಪಂದ್ಯಗಳಿಗೂ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ.

ಇರಾನಿ ಕಪ್ ಪಂದ್ಯದ ವಿವರ
ಸ್ಥಳ: ಮಧ್ಯಪ್ರದೇಶ vs ರೆಸ್ಟ್ ಆಫ್ ಇಂಡಿಯಾ ಇರಾನಿ ಕಪ್ ಪಂದ್ಯವು ಗ್ವಾಲಿಯರ್‌ನ ಕ್ಯಾಪ್ಟನ್ ರೂಪ್ ಸಿಂಗ್ ಸ್ಟೇಡಿಯಂನಲ್ಲಿ ನಡೆಯಲಿದೆ.
ಸಮಯ: ಮಧ್ಯಪ್ರದೇಶ vs ರೆಸ್ಟ್ ಆಫ್ ಇಂಡಿಯಾ ಇರಾನಿ ಕಪ್ ಪಂದ್ಯವು ಬುಧವಾರ, ಮಾರ್ಚ್ 1ರಂದು ಭಾರತೀಯ ಕಾಲಮಾನ ಬೆಳಗ್ಗೆ 9.30ಕ್ಕೆ ಆರಂಭವಾಗಲಿದೆ.
ಟಿವಿ ಮತ್ತು ಲೈವ್ ಸ್ಟ್ರೀಮಿಂಗ್: ಇರಾನಿ ಕಪ್ 2023 ಪಂದ್ಯವು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ ಮತ್ತು ಡಿಸ್ನಿ+ ಹಾಟ್‌ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಪಂದ್ಯವನ್ನು ಲೈವ್-ಸ್ಟ್ರೀಮಗ ಆಗಿ ವೀಕ್ಷಿಸಬಹುದು.
ಮಧ್ಯಪ್ರದೇಶ vs ರೆಸ್ಟ್ ಆಫ್ ಇಂಡಿಯಾ ಸಂಪೂರ್ಣ ತಂಡಗಳು
ಮಧ್ಯಪ್ರದೇಶ: ಹಿಮಾಂಶು ಮಂತ್ರಿ (ನಾಯಕ/ ವಿಕೆಟ್ ಕೀಪರ್), ಯಶ್ ದುಬೆ, ಹರ್ಷ್ ಗಾವ್ಲಿ, ಶುಭಂ ಶರ್ಮಾ, ಅಕ್ಷತ್ ರಘುವಂಶಿ, ಅಮನ್ ಸೋಲಂಕಿ, ಕುಮಾರ್ ಕಾರ್ತಿಕೇಯ, ಸರಾಂಶ್ ಜೈನ್, ಅವೇಶ್ ಖಾನ್, ಅಂಕಿತ್ ಕುಶ್ವಾ, ಅನುಭವ್ ಅಗರ್ವಾಲ್, ಮಿಹಿರ್ ಹಿರ್ವಾನಿ, ಆರ್ಯನ್ ದೇಶ್‌ಮುಖ್, ಅರ್ಹಮ್ ಅಕ್ವೀಲ್, ಆರ್ಯನ್ ಪಾಂಡೆ
ಉಳಿದ ಭಾರತ: ಮಯಾಂಕ್ ಅಗರ್ವಾಲ್ (ನಾಯಕ), ಸುದೀಪ್ ಕುಮಾರ್ ಘರಾಮಿ, ಯಶಸ್ವಿ ಜೈಸ್ವಾಲ್, ಅಭಿಮನ್ಯು ಈಶ್ವರನ್, ಹಾರ್ವಿಕ್ ದೇಸಾಯಿ, ಮುಖೇಶ್ ಕುಮಾರ್, ಅತಿತ್ ಶೇತ್, ಚೇತನ್ ಸಕರಿಯಾ, ನವದೀಪ್ ಸೈನಿ, ಉಪೇಂದ್ರ ಯಾದವ್ (ವಿಕೆಟ್ ಕೀಪರ್), ಶಮ್ಸ್ ಮುಲಾನಿ, ಸೌರಭ್ ಕುಮಾರ್, ಆಕಾಶ್ ದೀಪ್, ಬಿ ಇಂದ್ರಜಿತ್, ಪುಲ್ಕಿತ್ ನಾರಂಗ್, ಯಶ್ ಧುಲ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications