ಇದೇ ಫೆಬ್ರವರಿ 28ರಿಂದ ಆರಂಭವಾಗಲಿರುವ ಅಫ್ಘಾನಿಸ್ತಾನ ವಿರುದ್ಧದ ಮುಂಬರುವ ಏಕೈಕ ಟೆಸ್ಟ್ ಸರಣಿ ಸೇರಿದಂತೆ ಏಕದಿನ ಮತ್ತು ಟಿ20 ಸರಣಿಗಳಿಗೆ ಐರ್ಲೆಂಡ್ ತನ್ನ ಬಲಿಷ್ಠ ತಂಡವನ್ನು ಮಂಗಳವಾರ, ಜನವರಿ 6ರಂದು ಪ್ರಕಟಿಸಿದೆ.
ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್ ಸರಣಿಗೆ ಐರ್ಲೆಂಡ್ ತನ್ನ ಅನ್‌ಕ್ಯಾಪ್ಡ್ ವೇಗಿ ಮ್ಯಾಥ್ಯೂ ಫೋಸ್ಟರ್‌ಗೆ ಚೊಚ್ಚಲ ಕರೆ ನೀಡಿದೆ. ಬ್ಯಾರಿ ಮೆಕ್‌ಕಾರ್ಥಿ, ಥಿಯೋ ವ್ಯಾನ್ ವೋರ್‌ಕಾಮ್ ಮತ್ತು ಕ್ರೇಗ್ ಯಂಗ್ ಕೂಡ ತಂಡದ ಯೋಜನೆಯ ಭಾಗವಾಗಿದ್ದಾರೆ.

ಇವರು ತಮ್ಮ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯಕ್ಕಾಗಿ ಐರ್ಲೆಂಡ್ ಕ್ಯಾಪ್ ಗಳಿಸಬಹುದು. ಇನ್ನು ಆಂಡ್ರ್ಯೂ ಬಾಲ್ಬಿರ್ನಿ ಅವರು ಕ್ರಿಕೆಟ್‌ನ ದೀರ್ಘ ಸ್ವರೂಪದಲ್ಲಿ ಐರಿಷ್ ತಂಡವನ್ನು ಮುನ್ನಡೆಸಲಿದ್ದಾರೆ.
ಒಂದೇ ಟೆಸ್ಟ್ ಪಂದ್ಯದ ಬಳಿಕ ಐರ್ಲೆಂಡ್ ಮತ್ತು ಅಫ್ಘಾನಿಸ್ತಾನ ಉಭಯ ತಂಡಗಳು ಮೂರು ಪಂದ್ಯಗಳ ಏಕದಿನ ಸರಣಿ ಮತ್ತು ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡಲಿವೆ.
ಸರಣಿಯ ಎಲ್ಲಾ ಪಂದ್ಯಗಳನ್ನು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನಲ್ಲಿ ಆಡಲಾಗುತ್ತದೆ. ಐರ್ಲೆಂಡ್ ತನ್ನ ಅನುಭವಿ ಆಟಗಾರ ಪಾಲ್ ಸ್ಟಿರ್ಲಿಂಗ್ ಅವರನ್ನು ವೈಟ್-ಬಾಲ್ ಸರಣಿಗಳಿಗೆ ನಾಯಕನಾಗಿ ನೇಮಿಸಿದೆ.

ಇದೇ ವೇಳೆ, ಐರ್ಲೆಂಡ್ ತಂಡದ ಮುಖ್ಯ ಆಯ್ಕೆಗಾರ ಆಂಡ್ರ್ಯೂ ವೈಟ್ ಅವರು ಎಲ್ಲಾ ಆಟಗಾರರು ಯುಎಇಯಲ್ಲಿನ ಪರಿಸ್ಥಿತಿಗಳ ಬಗ್ಗೆ ಹೆಚ್ಚು ಕಡಿಮೆ ಪರಿಚಿತರಾಗಿರುವ ಕಾರಣ, ತಂಡವು ಉತ್ತಮ ಪ್ರದರ್ಶನವನ್ನು ನೀಡುತ್ತದೆ ಎಂದು ನಿರೀಕ್ಷಿಸಿದ್ದಾರೆ.
ಜೂನ್ 1ರಂದು ಪ್ರಾರಂಭವಾಗಲಿರುವ ಟಿ20 ವಿಶ್ವಕಪ್‌ಗೆ ಮುಂಚಿತವಾಗಿ ಸರಣಿಯು ಐರ್ಲೆಂಡ್ ತಂಡಕ್ಕೆ ಉತ್ತಮ ತಯಾರಿಯ ಮೈದಾನವಾಗಿರುವುದರಿಂದ, ಜಿಂಬಾಬ್ವೆಯಲ್ಲಿ ಅವರ ಇತ್ತೀಚಿನ ಅದ್ಭುತ ಪ್ರದರ್ಶನದ ನಂತರ, ತಂಡವು ಸ್ವಲ್ಪ ವಿಶ್ವಾಸವನ್ನು ಹೊಂದಿದೆ ಎಂದು ತಿಳಿಸಿದ್ದಾರೆ.
"ಪ್ರಪಂಚದ ಎಲ್ಲಾ ಭಾಗದಲ್ಲಿ ಕಳೆದ ದಶಕದಲ್ಲಿ ನಾವು ಸಾಕಷ್ಟು ಕ್ರಿಕೆಟ್ ಆಡಿದ್ದೇವೆ. ಆದ್ದರಿಂದ ಪರಿಸ್ಥಿತಿಗಳು ಆಟಗಾರರಿಗೆ ಸ್ವಲ್ಪ ಪರಿಚಿತವಾಗಿರಬೇಕು. 12 ವಾರಗಳ ಅಂತರವಿದ್ದರೂ, ತಂಡವು ಡಿಸೆಂಬರ್‌ನಲ್ಲಿ ಜಿಂಬಾಬ್ವೆಯ ಯಶಸ್ವಿ ಪ್ರವಾಸದಿಂದ ಈ ಸರಣಿಯಲ್ಲಿ ಸ್ವಲ್ಪ ಆತ್ಮವಿಶ್ವಾಸ ಮತ್ತು ಆವೇಗವನ್ನು ಕೊಂಡೊಯ್ಯಲಿದೆ," ಎಂದು ಆಂಡ್ರ್ಯೂ ವೈಟ್ ಹೇಳಿದ್ದಾರೆ.
"ಸಿದ್ಧತೆಗಳು ಉತ್ತಮವಾಗಿ ನಡೆಯುತ್ತಿವೆ, ತಂಡವು ಕಳೆದ ವಾರ ಸ್ಪೇನ್‌ನಲ್ಲಿ ದೊಡ್ಡ ತರಬೇತಿ ಶಿಬಿರವನ್ನು ಹೊಂದಿತ್ತು ಮತ್ತು ಮುಂಬರುವ ಸರಣಿಯ ಐದು ದಿನಗಳ ಮೊದಲು ನಾವು ಮಧ್ಯಪ್ರಾಚ್ಯ ಪರಿಸ್ಥಿತಿಗಳಲ್ಲಿ ಒಗ್ಗಿಕೊಳ್ಳಲು ಮತ್ತು ತರಬೇತಿ ನೀಡಲು ಆಟಗಾರರನ್ನು ಯುಎಇಗೆ ಕಳುಹಿಸುತ್ತೇವೆ".
"ಟಿ20 ವಿಶ್ವಕಪ್ ಪಂದ್ಯಾವಳಿಯನ್ನು ಒಳಗೊಂಡಿರುವ ಬೇಸಿಗೆಯ ಮೊದಲು ನಮ್ಮ ಸಿದ್ಧತೆಗಳಿಗೆ ಈ ಸರಣಿಯು ನಿರ್ಣಾಯಕವಾಗಿದೆ. ಇದು ಯಾವಾಗಲೂ ಹೆಚ್ಚು ನಿರೀಕ್ಷಿತ ಸ್ಪರ್ಧೆಯಾಗಿದೆ ಮತ್ತು ಇದು ಕಠಿಣ ಹೋರಾಟದ ಸರಣಿ ಎಂದು ನಾನು ನಿರೀಕ್ಷಿಸುತ್ತೇನೆ, ನಾನು ತುಂಬಾ ಎದುರು ನೋಡುತ್ತಿದ್ದೇನೆ," ಎಂದು ಆಂಡ್ರ್ಯೂ ವೈಟ್ ಅಭಿಪ್ರಾಯಪಟ್ಟಿದ್ದಾರೆ.
ಮಾರ್ಕ್ ಅಡೇರ್, ಆಂಡ್ರ್ಯೂ ಬಾಲ್ಬಿರ್ನಿ (ನಾಯಕ), ಕರ್ಟಿಸ್ ಕ್ಯಾಂಫರ್, ಜಾರ್ಜ್ ಡಾಕ್ರೆಲ್, ಮ್ಯಾಥ್ಯೂ ಫೋಸ್ಟರ್, ಗ್ರಹಾಂ ಹ್ಯೂಮ್, ಆಂಡಿ ಮೆಕ್‌ಬ್ರೈನ್, ಬ್ಯಾರಿ ಮೆಕ್‌ಕಾರ್ಥಿ, ಜೇಮ್ಸ್ ಮೆಕ್‌ಕಾಲಮ್, ಪಿಜೆ ಮೂರ್, ಪಾಲ್ ಸ್ಟಿರ್ಲಿಂಗ್, ಹ್ಯಾರಿ ಟೆಕ್ಟರ್, ಲೋರ್ಕನ್ ಟಕರ್, ಥಿಯೋ ವ್ಯಾನ್ ವೋರ್‌ಕಾಮ್, ಕ್ರೇಗ್ ಯಂಗ್.
ಮಾರ್ಕ್ ಅಡೇರ್, ಆಂಡ್ರ್ಯೂ ಬಾಲ್ಬಿರ್ನಿ, ಕರ್ಟಿಸ್ ಕ್ಯಾಂಫರ್, ಗರೆಥ್ ಡೆಲಾನಿ, ಜಾರ್ಜ್ ಡಾಕ್ರೆಲ್, ಮ್ಯಾಥ್ಯೂ ಫೋಸ್ಟರ್, ಗ್ರಹಾಂ ಹ್ಯೂಮ್, ಆಂಡಿ ಮೆಕ್‌ಬ್ರೈನ್, ಬ್ಯಾರಿ ಮೆಕಾರ್ಥಿ, ನೀಲ್ ರಾಕ್, ಪಾಲ್ ಸ್ಟಿರ್ಲಿಂಗ್ (ನಾಯಕ), ಹ್ಯಾರಿ ಟೆಕ್ಟರ್, ಲೋರ್ಕನ್ ಟಕರ್, ಥಿಯೋ ವ್ಯಾನ್ ವೋರ್‌ಕಾಮ್, ಕ್ರೇಗ್ ಯಂಗ್.
ಮಾರ್ಕ್ ಅಡೇರ್, ರಾಸ್ ಅಡೇರ್, ಆಂಡ್ರ್ಯೂ ಬಾಲ್ಬಿರ್ನಿ, ಕರ್ಟಿಸ್ ಕ್ಯಾಂಫರ್, ಗರೆಥ್ ಡೆಲಾನಿ, ಜಾರ್ಜ್ ಡಾಕ್ರೆಲ್, ಗ್ರಹಾಂ ಹ್ಯೂಮ್, ಜೋಶ್ ಲಿಟಲ್, ಬ್ಯಾರಿ ಮೆಕಾರ್ಥಿ, ನೀಲ್ ರಾಕ್, ಪಾಲ್ ಸ್ಟಿರ್ಲಿಂಗ್ (ನಾಯಕ), ಹ್ಯಾರಿ ಟೆಕ್ಟರ್, ಲೋರ್ಕನ್ ಟಕರ್, ಬೆನ್ ವೈಟ್, ಕ್ರೇಗ್ ಯಂಗ್.