IRE vs IND: ಐರ್ಲೆಂಡ್ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾಗಬೇಕಿದ್ದ ಮೂವರು ಟೀಂ ಇಂಡಿಯಾ ಆಟಗಾರರು

ಐರ್ಲೆಂಡ್ ವಿರುದ್ಧ ನಡೆಯಲಿರುವ ಟಿ20 ಸರಣಿಗೆ ಟೀಂ ಇಂಡಿಯಾ ಪ್ರಕಟಗೊಂಡಿದ್ದು, 17 ಜನರ ತಂಡವನ್ನು ಟೀಂ ಇಂಡಿಯಾಗೆ ಸೆಲೆಕ್ಟ್ ಮಾಡಲಾಗಿದೆ. ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಮುನ್ನಡೆಯಲಿರುವ ತಂಡದಲ್ಲಿ ಭುವನೇಶ್ವರ್ ಕುಮಾರ್ ಉಪನಾಯಕನಾಗಿದ್ದು, ದಿನೇಶ್ ಕಾರ್ತಿಕ್‌ಗೆ ವಿಕೆಟ್ ಕೀಪಿಂಗ್ ಜವಾಬ್ದಾರಿ ನೀಡಲಾಗಿದೆ.
ರಿಷಭ್ ಪಂತ್ ಮತ್ತು ಶ್ರೇಯಸ್ ಅಯ್ಯರ್ ಇಂಗ್ಲೆಂಡ್ ಪ್ರವಾಸದಲ್ಲಿ ಬ್ಯುಸಿಯಾಗಿರುವುದರಿಂದ ಐರ್ಲೆಂಡ್ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾಗಿಲ್ಲ. ಐಪಿಎಲ್ 2022ರಲ್ಲಿ ಗಾಯಗೊಂಡಿದ್ದ ಸೂರ್ಯಕುಮಾರ್ ಚೇತರಿಸಿಕೊಳ್ಳುತ್ತಿದ್ದು ಮುಂಬರುವ ಟಿ20 ಸರಣಿಯಲ್ಲಿ ಆಡಲಿದ್ದಾರೆ. ಇದರ ಜೊತೆಗೆ ರಾಹುಲ್ ತ್ರಿಪಾಠಿಗೆ ಚೊಚ್ಚಲ ಅವಕಾಶವೂ ಕೂಡ ಲಭಿಸಿದೆ.
ಇನ್ನುಳಿದಂತೆ ಸನ್‌ರೈಸರ್ಸ್ ಹೈದರಾಬಾದ್ ತಂಡವು ವೇಗಿ ಉಮ್ರಾನ್ ಮಲಿಕ್‌ಗೂ ತಂಡದಲ್ಲಿ ಅವಕಾಶ ನೀಡಲಾಗಿದೆ. ಇವರೊಂದಿಗೆ ಪಂಜಾಬ್ ಕಿಂಗ್ಸ್ ಡೆತ್ ಬೌಲಿಂಗ್ ಸ್ಪೆಷಲಿಸ್ಟ್ ಅರ್ಷದೀಪ್ ಸಿಂಗ್ ಕೂಡ ಆಯ್ಕೆಯಾದರು. ಇದರ ಜೊತೆಗೆ ಐರ್ಲೆಂಡ್ ಪ್ರವಾಸವನ್ನು ಮಿಸ್ ಮಾಡಿಕೊಂಡ ಮೂರು ಪ್ರಮುಖ ಆಟಗಾರರನ್ನು ಈ ಕೆಳಗೆ ತಿಳಿಸಲಾಗಿದೆ.

ಶಿಖರ್ ಧವನ್
ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿ ಮಿಸ್ ಮಾಡಿಕೊಂಡಿದ್ದ ಎಡಗೈ ಬ್ಯಾಟ್ಸ್‌ಮನ್ ಶಿಖರ್ ಧವನ್‌ಗೆ ಐರ್ಲೆಂಡ್ ವಿರುದ್ಧದ ಸರಣಿಯಲ್ಲೂ ಆಡುವ ಅವಕಾಶ ಸಿಗದೇ ಇರುವುದು ಬೇಸರ ತರಿಸಿದೆ. ಕೆ.ಎಲ್ ರಾಹುಲ್ ಇಂಜ್ಯುರಿ ಹಾಗೂ ರೋಹಿತ್ ಶರ್ಮಾ ಅನುಪಸ್ಥಿತಿಯ ನಡುವೆಯು ಧವನ್‌ಗೆ ಅವಕಾಶ ಸಿಗಲಿಲ್ಲ. ಆದ್ರೀಗ ಮುಂದಿನ ಸರಣಿಗೂ ಧವನ್‌ಗೆ ಕೊಕ್ ನೀಡಲಾಗಿದೆ.
ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಎಡಗೈ ಬ್ಯಾಟರ್ ಮತ್ತು ವಿಕೆಟ್ ಕೀಪರ್ ಇಶಾನ್ ಕಿಶನ್ ಪಂದ್ಯದಿಂದ ಪಂದ್ಯಕ್ಕೆ ಉತ್ತಮಗೊಳ್ಳುತ್ತಿರುವುದು, ಧವನ್‌ಗೆ ಮುಳುವಾಗಿದೆ. ಆಯ್ಕೆಗಾರರು ದೀರ್ಘಾವಧಿ ಯೋಜನೆಯಿಂದ ಇಶಾನ್ ಕಿಶನ್‌ಗೆ ಅವಕಾಶ ನೀಡಿದ್ದು, ಧವನ್ ಫಾರ್ಮ್‌ನಲ್ಲಿದ್ದರೂ ಸಹ ಪರಿಗಣಿಸಲಿಲ್ಲ.
ಐಪಿಎಲ್ 2022ರ ಸೀಸನ್‌ನಲ್ಲಿ ಶಿಖರ್ ಧವನ್ 14 ಪಂದ್ಯಗಳಲ್ಲಿ 460 ರನ್ ಕಲೆಹಾಕಿದರು. ಪಂಜಾಬ್ ಕಿಂಗ್ಸ್ ಪರ ಟಾಪ್ ಸ್ಕೋರರ್ ಆಗಿದ್ರೂ ಅವಕಾಶ ಸಿಗಲಿಲ್ಲ.

ರಾಹುಲ್ ತೆವಾಟಿಯಾ
ಐಪಿಎಲ್ 2022ರ ಸೀಸನ್‌ನಲ್ಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ತಂಡದ ಪರ ಫಿನಿಷರ್ ರೋಲ್‌ನಲ್ಲಿ ಮಿಂಚಿದ ಆಲ್‌ರೌಂಡರ್ ರಾಹುಲ್ ತೆವಾಟಿಯಾ ಕೂಡ ಐರ್ಲೆಂಡ್ ಸರಣಿಯನ್ನ ಮಿಸ್ ಮಾಡಿಕೊಂಡಿದ್ದಾರೆ.
ಗುಜರಾತ್ ಟೈಟನ್ಸ್ ಪರ ಕೆಳಕ್ರಮಾಂಕದಲ್ಲಿ ಕಣಕ್ಕಿಳಿಯುತ್ತಿದ್ದ ರಾಹುಲ್ ತೆವಾಟಿಯಾ ಸಿಕ್ಸರ್‌ಗಳ ಸಿಡಿಸಿ ತಂಡಕ್ಕೆ ರೋಚಕ ಗೆಲುವನ್ನು ತಂದುಕೊಟ್ಟಿದ್ದಾರೆ. ಈತನ ಫಿನಿಷಿಂಗ್ ಕೌಶಲ್ಯವು ಟೀಂ ಇಂಡಿಯಾಗೆ ಆಯ್ಕೆ ಮಾಡಬಹುದೆಂದು ಅಂದಾಜಿಸಲಾಗಿತ್ತು.
ಐಪಿಎಲ್ 2022ರ ಸೀಸನ್‌ನಲ್ಲಿ 147.61ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿರುವ ರಾಹುಲ್ ತೆವಾಟಿಯಾ 16 ಇನ್ನಿಂಗ್ಸ್‌ಗಳಲ್ಲಿ 217 ರನ್ ದಾಖಲಿಸಿದ್ದಾರೆ. ಐರ್ಲೆಂಡ್ ವಿರುದ್ಧ ಆಡಲಿರುವ ಟೀಂ ಇಂಡಿಯಾದಲ್ಲಿ ಈಗಾಗಲೇ ಆಲ್‌ರೌಂಡರ್‌ಗಳಾದ ಹಾರ್ದಿಕ್ ಪಾಂಡ್ಯ, ವೆಂಕಟೇಶ್ ಅಯ್ಯರ್, ದೀಪಕ್ ಹೂಡಾ ಮತ್ತು ಅಕ್ಷರ್ ಪಟೇಲ್ ಸ್ಥಾನ ಪಡೆದಿರುವುದರಿಂದ ತೆವಾಟಿಯಾರನ್ನ ಕಡೆಗಣಿಸಲಾಗಿದೆ.
ಭಾರತ vs ಇಂಗ್ಲೆಂಡ್ 5ನೇ ಟೆಸ್ಟ್: ಕೆಎಲ್ ರಾಹುಲ್ ಇಲ್ಲದೆ ಯುಕೆಗೆ ಪ್ರಯಾಣ ಬೆಳೆಸಿದ ಭಾರತೀಯ ಟೆಸ್ಟ್ ತಂಡ

ಟಿ. ನಟರಾಜನ್
ಟೀಂ ಇಂಡಿಯಾ ಜೆರ್ಸಿ ತೊಟ್ಟು ಗಾಯಾಳುವಾಗಿ ತಂಡದಿಂದ ಹೊರಬಿದ್ದ ಟಿ. ನಟರಾಜನ್ ಮತ್ತೆ ತಂಡ ಸೇರಲು ಸಾಕಷ್ಟು ಪ್ರಯತ್ನ ನಡೆಸುತ್ತಿದ್ದಾರೆ. ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದ್ರಾಬಾದ್ ಪರ ಡೆತ್ ಓವರ ಸ್ಪೆಷಲಿಸ್ಟ್ ಆಗಿರುವ ನಟರಾಜನ್ ಸತತವಾಗಿ ಯಾರ್ಕರ್ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ.
ಐಪಿಎಲ್ 2022ರ ಸೀಸನ್‌ನಲ್ಲಿ 11 ಪಂದ್ಯಗಳಲ್ಲಿ 22.55ರ ಸರಾಸರಿಯಲ್ಲಿ 18 ವಿಕೆಟ್‌ಗಳನ್ನ ಕಬಳಿಸಿರುವ ನಟರಾಜನ್ ಉತ್ತಮ ಪ್ರದರ್ಶನದ ಮೂಲಕ ಮಿಂಚಿದ್ದಾರೆ. ಆದ್ರೆ ತಂಡದಲ್ಲಿ ಉಮ್ರಾನ್ ಮಲ್ಲಿಕ್, ಅರ್ಷ್‌ದೀಪ್ ಸಿಂಗ್‌ರಂತಹ ಯುವ ಬೌಲರ್‌ಗಳು ತಂಡದಲ್ಲಿರುವ ಕಾರಣ ನಟರಾಜನ್‌ರನ್ನು ಐರ್ಲೆಂಡ್ ಪ್ರವಾಸಕ್ಕೆ ಆಯ್ಕೆ ಮಾಡಲಾಗಿಲ್ಲ.
ಹಾರ್ದಿಕ್ ಪಾಂಡ್ಯಗೆ ಏನು ಮಾಡಬೇಕೆಂಬುದು ತಿಳಿದಿದೆ, ಕೋಚ್‌ಗಳ ಸಲಹೆ ಬೇಕಿಲ್ಲ ಎಂದ ಮೆಗ್ರಾತ್!

ಐರ್ಲೆಂಡ್ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾ
ಹಾರ್ದಿಕ್ ಪಾಂಡ್ಯ (ನಾಯಕ), ಭುವನೇಶ್ವರ್ ಕುಮಾರ್ (ಉಪನಾಯಕ), ಇಶಾಂತ್ ಕಿಶನ್, ರುತುರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್, ವೆಂಕಟೇಶ್ ಅಯ್ಯರ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಯುಜವೇಂದ್ರ ಚಾಹಲ್, ಅಕ್ಷರ್ ಪಟೇಲ್, ಹರ್ಷಲ್ ಪಟೇಲ್ , ಅವೇಶ್ ಖಾನ್, ಅರ್ಷ್‌ದೀಪ್ ಸಿಂಗ್, ಉಮ್ರಾನ್ ಮಲಿಕ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications