ಟಿ20ಐ ವಿಶ್ವ ಚಾಂಪಿಯನ್ ವೆಸ್ಟ್ ಇಂಡೀಸ್ ದಂಗುಬಡಿಸಿದ ಐರ್ಲೆಂಡ್!

ಗ್ರೆನೆಡಾ, ಜನವರಿ 16: ಟಿ20 ವಿಶ್ವಕಪ್ ಹಾಲಿ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡವನ್ನು ಐರ್ಲೆಂಡ್ ದಂಗುಬಡಿಸಿದೆ. ವೆಸ್ಟ್ ಇಂಡೀಸ್-ಐರ್ಲೆಂಡ್ ಮೊದಲ ಟಿ20 ಪಂದ್ಯದಲ್ಲಿ ಐರ್ಲೆಂಡ್ ತಂಡ 4 ರನ್ ರೋಚಕ ಜಯ ಗಳಿಸಿದೆ. ಐರ್ಲೆಂಡ್ ಓಪನರ್ ಪೌಲ್ ಸ್ಟಿರ್ಲಿಂಗ್ ಸ್ಫೋಟಕ ಅರ್ಧ ಶತಕದ ನೆರವಿನೊಂದಿಗೆ ಪ್ರವಾಸಿಗರು ಆತಿಥೇಯರನ್ನೇ ಬೆರಗಾಗಿಸಿದ್ದಾರೆ.
ಗ್ರೆನೆಡಾದ ಸೇಂಟ್ ಜಾರ್ಜ್ಸ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಬುಧವಾರ (ಜನವರಿ 15) ನಡೆದ ಮೊದಲ ಟಿ20 ಪಂದ್ಯದಲ್ಲಿ ಬ್ಯಾಟಿಂಗ್ ಆಯ್ದುಕೊಂಡಿದ್ದ ಐರ್ಲೆಂಡ್, ಪೌಲ್ ಸ್ಟಿರ್ಲಿಂಗ್ 95 (47 ಎಸೆತ), ಕೆವಿನ್ ಓಬ್ರಿಯನ್ 48, ಗರೆಥ್ ಡೆಲಾನಿ 19, ಗ್ಯಾರಿ ವಿಲ್ಸನ್ 17 ರನ್ ಸೇರ್ಪಡೆಯೊಂದಿಗೆ 20 ಓವರ್‌ಗೆ 7 ವಿಕೆಟ್ ನಷ್ಟದಲ್ಲಿ 208 ರನ್ ಮಾಡಿತು.
ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್, ಲೆಂಡ್ಲ್ ಸಿಮನ್ಸ್ 22, ಎವಿನ್ ಯೂಯಿಸ್ 53 (29 ಎಸೆತ), ಶಿಮ್ರನ್ ಹೆಟ್ಮಾಯೆರ್ 28, ನಾಯಕ ಕೀರನ್ ಪೊಲಾರ್ಡ್ 31, ನಿಕೋಲಸ್ ಪೂರನ್ 26, ಶೆರ್ಫೇನ್ ರುದರ್ಫೋರ್ಡ್ 26 ರನ್ ಕೊಡುಗೆಯೊಂದಿಗೆ 20 ಓವರ್‌ಗೆ 7 ವಿಕೆಟ್ ಕಳೆದು 204 ರನ್ ಬಾರಿಸಿ ಶರಣಾಯಿತು.
ಐರ್ಲೆಂಡ್ ಇನ್ನಿಂಗ್ಸ್‌ನಲ್ಲಿ ವಿಂಡೀಸ್‌ನ ಶೆಲ್ಡನ್ ಕಾಟ್ರೆಲ್, ಖೇರಿ ಪಿಯರೆ, ಡ್ವೇನ್ ಬ್ರಾವೋ ತಲಾ 2 ವಿಕೆಟ್, ಹೇಡನ್ ವಾಲ್ಶ್ 1ವಿಕೆಟ್ ಪಡೆದರು. ವೆಸ್ಟ್ ಇಂಡೀಸ್ ಇನ್ನಿಂಗ್ಸ್‌ನಲ್ಲಿ ಐರ್ಲೆಂಡ್‌ನ ಜೋಶುವಾ ಲಿಟ್ಲ್ 3, ಕ್ರೇಗ್ ಯಂಗ್ 2, ಜಾರ್ಜ್ ಡಾಕ್ರೆಲ್ ಮತ್ತು ಸಿಮಿ ಸಿಂಗ್ ತಲಾ 1 ವಿಕೆಟ್ ಉರುಳಿಸಿ ಗಮನ ಸೆಳೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications