ಐರ್ಲೆಂಡ್ vs ಅಫ್ಘಾನಿಸ್ತಾನ: 2ನೇ ಟಿ20 Live ಸ್ಕೋರ್ ಹಾಗೂ ಆಡುವ ಬಳಗ

ಐರ್ಲೆಂಡ್ ಹಾಗೂ ಅಫ್ಘಾನಿಸ್ತಾನ ತಂಡಗಳ ನಡುವಿನ ಟಿ20 ಸರಣಿಯ ಎರಡನೇ ಪಂದ್ಯ ಆರಂಭವಾಗಿದೆ. ಐದು ಪಂದ್ಯಗಳ ಈ ಸರಣಿಯಲ್ಲಿ ಎರಡನೇ ಪಂದ್ಯದಲ್ಲಿ ಪ್ರವಾಸಿ ಅಫ್ಘಾನಿಸ್ತಾನ ತಂಡ ಟಾಸ್ ಗೆದ್ದಿದ್ದು ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ಆತಿಥೇಯ ಐರ್ಲೆಂಡ್ ತಂಡ ಗುರಿ ಬೆನ್ನಟ್ಟುವ ಸವಾಲು ಸ್ವೀಕರಿಸಿದೆ.
ಮೊದಲ ಪಂದ್ಯದಲ್ಲಿ ಆತಿಥೇಯ ಐರ್ಲೆಂಡ್ ಹಾಗೂ ಪ್ರವಾಸಿ ಅಫ್ಘಾನಿಸ್ತಾನ ಎರಡು ತಂಡಗಳು ಕೂಡ ಅದ್ಭುತ ಪ್ರದರ್ಶನ ನೀಡಿದ್ದವು. ರೋಚಕವಾಗಿ ನಡೆದ ಈ ಕಾದಾಟದಲ್ಲಿ ಆತಿಥೆಯ ಐರ್ಲೆಂಡ್ ಕೇವಲ ಒಂದು ಎಸೆತ ಉಳಿದುಕೊಂಡಿರುವಂತೆ ಗೆಲುವು ಸಾಧಿಸಿತ್ತು. 7 ವಿಕೆಟ್‌ಗಳಿಂದ ಮೊದಲ ಪಂದ್ಯ ಗೆದ್ದಿರುವ ಕಾರಣ ಆತಿಥೆಯ ಐರ್ಲೆಂಡ್ ತಂಡ ಸರಣಿಯಲ್ಲಿ ಮುನ್ನಡೆಯಲ್ಲಿದೆ. ಹೀಗಾಗಿ ಈ ಪಂದ್ಯದಲ್ಲಿ ಗೆಲುವು ಸಾಧಿಸಿ ಸರಣಿಯನ್ನು ಸಮಬಲ ಗೊಳಿಸುವ ಪ್ರಯತ್ನದಲ್ಲಿದೆ ಅಫ್ಘಾನಿಸ್ತಾನ.
Live ಸ್ಕೋರ್‌ಕಾರ್ಡ್ ಹೀಗಿದೆ
ಐರ್ಲೆಂಡ್ ಆಡುವ ಬಳಗ: ಪಾಲ್ ಸ್ಟಿರ್ಲಿಂಗ್, ಆಂಡ್ರ್ಯೂ ಬಾಲ್ಬಿರ್ನಿ (ನಾಯಕ), ಲೋರ್ಕನ್ ಟಕರ್ (ವಿಕೆಟ್ ಕೀಪರ್), ಹ್ಯಾರಿ ಟೆಕ್ಟರ್, ಕರ್ಟಿಸ್ ಕ್ಯಾಂಫರ್, ಗರೆಥ್ ಡೆಲಾನಿ, ಜಾರ್ಜ್ ಡಾಕ್ರೆಲ್, ಆಂಡಿ ಮ್ಯಾಕ್‌ಬ್ರೈನ್, ಮಾರ್ಕ್ ಅಡೇರ್, ಬ್ಯಾರಿ ಮೆಕಾರ್ಥಿ, ಜೋಶುವಾ ಲಿಟಲ್
ಬೆಂಚ್: ಫಿಯಾನ್ ಹ್ಯಾಂಡ್, ಸ್ಟೀಫನ್ ಡೊಹೆನಿ, ಕ್ರೇಗ್ ಯಂಗ್
ಅಫ್ಘಾನಿಸ್ತಾನ ಆಡುವ ಬಳಗ: ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಉಸ್ಮಾನ್ ಘನಿ, ಹಶ್ಮತುಲ್ಲಾ ಶಾಹಿದಿ, ನಜೀಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ (ನಾಯಕ), ಇಬ್ರಾಹಿಂ ಜದ್ರಾನ್, ಅಜ್ಮತುಲ್ಲಾ ಒಮರ್ಜಾಯ್, ರಶೀದ್ ಖಾನ್, ನವೀನ್-ಉಲ್-ಹಕ್, ಮುಜೀಬ್ ಉರ್ ರೆಹಮಾನ್, ಫಜಲ್ಹಕ್ ಫಾರೂಕಿ
ಬೆಂಚ್: ಅಫ್ಸರ್ ಝಜೈ, ಫರೀದ್ ಅಹ್ಮದ್ ಮಲಿಕ್, ಶರಫುದ್ದೀನ್ ಅಶ್ರಫ್, ಕರೀಂ ಜನತ್, ಹಜರತುಲ್ಲಾ ಝಜೈ, ದರ್ವಿಶ್ ರಸೂಲಿ, ನೂರ್ ಅಹ್ಮದ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications