For Quick Alerts
ALLOW NOTIFICATIONS  
For Daily Alerts
 

ಐರ್ಲೆಂಡ್ vs ಅಫ್ಘಾನಿಸ್ತಾನ: 3ನೇ ಟಿ20 ಪಂದ್ಯ Live ಸ್ಕೋರ್ ಹಾಗೂ ಆಡುವ ಬಳಗ

Ireland vs Afghanistan, 3rd t20I match, Live score and playing XI, Belfast

ಐರ್ಲೆಂಡ್ ಹಾಗೂ ಅಫ್ಘಾನಿಸ್ತಾನ ತಂಡಗಳ ನಡುವಿನ ಟಿ20 ಸರಣಿಯ ಮೂರನೇ ಪಂದ್ಯ ಆರಂಭವಾಗಿದೆ. ಐದು ಪಂದ್ಯಗಳ ಈ ಸರಣಿಯಲ್ಲಿ ಮೂರನೇ ಪಂದ್ಯದಲ್ಲಿ ಆತಿಥೇಯ ಐರ್ಲೆಂಡ್ ತಂಡ ಟಾಸ್ ಗೆದ್ದಿದ್ದು ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ಪ್ರವಾಸಿ ಅಫ್ಘಾನಿಸ್ತಾನ ತಂಡ ಮೊದಲಿಗೆ ಬ್ಯಾಟಿಂಗ್ ನಡೆಸುವ ಸವಾಲು ಸ್ವೀಕರಿಸಿದೆ.

ಐದು ಪಂದ್ಯಗಳ ಈ ಟಿ20 ಸರಣಿಯ ಮೊದಲ ಎರಡು ಪಂದ್ಯದಲ್ಲಿಯೂ ಆತಿಥೇಯ ಐರ್ಲೆಂಡ್ ತಂಡ ಗೆಲುವು ಸಾಧಿಸಿದೆ. ಮೊದಲ ಪಂದ್ಯದಲ್ಲಿ ಆತಿಥೇಯ ಐರ್ಲೆಂಡ್ ಹಾಗೂ ಪ್ರವಾಸಿ ಅಫ್ಘಾನಿಸ್ತಾನ ಎರಡು ತಂಡಗಳು ಕೂಡ ಅದ್ಭುತ ಪ್ರದರ್ಶನ ನೀಡಿದ್ದವು. ರೋಚಕವಾಗಿ ನಡೆದ ಈ ಕಾದಾಟದಲ್ಲಿ ಆತಿಥೆಯ ಐರ್ಲೆಂಡ್ ಕೇವಲ ಒಂದು ಎಸೆತ ಉಳಿದುಕೊಂಡಿರುವಂತೆ ಗೆಲುವು ಸಾಧಿಸಿತ್ತು. 7 ವಿಕೆಟ್‌ಗಳಿಂದ ಮೊದಲ ಪಂದ್ಯ ಗೆದ್ದುಕೊಂಡಿತ್ತು.

ನಂತರ ಎರಡನೇ ಎರಡನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡ ಬ್ಯಾಟಿಂಗ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿ ಸುಲಭ ಸವಾಲನ್ನು ನೀಡಿತು. ಈ ಪಂದ್ಯದಲ್ಲಿಯೂ ಐರ್ಲೆಂಡ್ ಐದು ವಿಕೆಟ್‌ಗಳ ಅಂತರದ ಗೆಲುವು ಸಾಧಿಸಿ ಸರಣಿಯಲ್ಲಿ 2-0 ಅಂತರದಿಂದ ಮುನ್ನಡೆಯಲ್ಲಿದೆ. ಸರಣಿಯಲ್ಲಿ ಜೀವಂತವಾಗುಳಿತಬೇಕಾದರೆ ಅಂತಿಮ ಮೂರು ಪಂದ್ಯಗಳನ್ನು ಕೂಡ ಗೆಲ್ಲಲೇಬೇಕಾದ ಒತ್ತಡದಲ್ಲಿದೆ ಪ್ರವಾಸಿ ಅಫ್ಘಾನಿಸ್ತಾನ ತಂಡ

Live ಸ್ಕೋರ್‌ಕಾರ್ಡ್ ಹೀಗಿದೆ

1
53756

ಐರ್ಲೆಂಡ್ ಆಡುವ ಬಳಗ: ಪಾಲ್ ಸ್ಟಿರ್ಲಿಂಗ್, ಆಂಡ್ರ್ಯೂ ಬಾಲ್ಬಿರ್ನಿ (ನಾಯಕ), ಲೋರ್ಕನ್ ಟಕರ್ (ವಿಕೆಟ್ ಕೀಪರ್), ಹ್ಯಾರಿ ಟೆಕ್ಟರ್, ಗರೆಥ್ ಡೆಲಾನಿ, ಜಾರ್ಜ್ ಡಾಕ್ರೆಲ್, ಕರ್ಟಿಸ್ ಕ್ಯಾಂಫರ್, ಫಿಯಾನ್ ಹ್ಯಾಂಡ್, ಮಾರ್ಕ್ ಅಡೈರ್, ಗ್ರಹಾಂ ಹ್ಯೂಮ್, ಜೋಶುವಾ ಲಿಟಲ್
ಬೆಂಚ್: ಆಂಡಿ ಮೆಕ್‌ಬ್ರೈನ್, ಬ್ಯಾರಿ ಮೆಕಾರ್ಥಿ, ಸ್ಟೀಫನ್ ಡೊಹೆನಿ, ಕ್ರೇಗ್ ಯಂಗ್

ಅಫ್ಘಾನಿಸ್ತಾನ ಆಡುವ ಬಳಗ: ಹಜರತುಲ್ಲಾ ಝಜೈ, ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಉಸ್ಮಾನ್ ಘನಿ, ನಜೀಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ (ನಾಯಕ), ಇಬ್ರಾಹಿಂ ಜದ್ರಾನ್, ಅಜ್ಮತುಲ್ಲಾ ಒಮರ್ಜಾಯ್, ರಶೀದ್ ಖಾನ್, ನವೀನ್-ಉಲ್-ಹಕ್, ಮುಜೀಬ್ ಉರ್ ರೆಹಮಾನ್, ಫಜಲ್ಹಕ್ ಫಾರೂಕಿ
ಬೆಂಚ್: ಹಶ್ಮತುಲ್ಲಾ ಶಾಹಿದಿ, ಅಫ್ಸರ್ ಝಜೈ, ಫರೀದ್ ಅಹ್ಮದ್ ಮಲಿಕ್, ಶರಫುದ್ದೀನ್ ಅಶ್ರಫ್, ಕರೀಂ ಜನತ್, ದರ್ವಿಶ್ ರಸೂಲಿ, ನೂರ್ ಅಹ್ಮದ್

Story first published: Friday, August 12, 2022, 21:08 [IST]
Other articles published on Aug 12, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+