Bangladesh vs Ireland T20 : ಸರಣಿಯ ಕೊನೆಯ ಪಂದ್ಯ ಗೆದ್ದ ಐರ್ಲೆಂಡ್
ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಯ ಕೊನೆಯ ಪಂದ್ಯದಲ್ಲಿ ಐರ್ಲೆಂಡ್ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ವೈಟ್ ವಾಶ್ ಮುಖಭಂಗವನ್ನು ತಪ್ಪಿಸಿಕೊಂಡಿದೆ. ಮೊದಲ ಎರಡು ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಬಾಂಗ್ಲಾದೇಶ ಮೂರನೇ ಪಂದ್ಯದಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ಸೋಲನುಭವಿಸಿತು. ಪೌಲ್ ಸ್ಟರ್ಲಿಂಗ್ ಅತ್ಯುತ್ತಮ ಬ್ಯಾಟಿಂಗ್ ಮಾಡುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು.
ಚತ್ತೋಗ್ರಾಮ್‌ನ ಜಹುರ್ ಅಹ್ಮದ್ ಚೌಧುರಿ ಸ್ಟೇಡಿಯಂನಲ್ಲಿ ನಡೆದ ಸರಣಿಯ ಕೊನೆಯ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲ ಎರಡು ಪಂದ್ಯಗಳಲ್ಲಿ ಅಬ್ಬರಿಸಿದ್ದ ಬಾಂಗ್ಲಾದೇಶ ಬ್ಯಾಟರ್ ಗಳು ಕೊನೆಯ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾದರು. ಸ್ಫೋಟಕ ಬ್ಯಾಟರ್ ಲಿಟ್ಟನ್ ದಾಸ್ ಕೇವಲ 5 ರನ್ ಗಳಿಸಿ ಔಟಾದರು.

ಮತ್ತೊಬ್ಬ ಸ್ಫೋಟಕ ಬ್ಯಾಟರ್ ರೋನಿ ತಾಲುಕ್ದಾರ್ 10 ಎಸೆತಗಳಲ್ಲಿ 14 ರನ್ ಗಳಿಸಿ ಔಟಾದರು. ನಜ್ಮುಲ್ ಹೊಸೈನ್ ಶಾಂಟೋ 4 ರನ್ ಗಳಿಸಿದರೆ, ನಾಯಕ ಶಕೀಬ್ ಅಲ್ ಹಸನ್ 6 ರನ್ ಗಳಿಸಿದರು. ಟೋವ್ರಿದ್ ಹೃದೋಯ್ 12 ರನ್ ಗಳಿಸಿ ಔಟಾದರು. 61 ರನ್ ಗಳಿಸುವಷ್ಟರಲ್ಲಿ 7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಬಾಂಗ್ಲಾದೇಶಕ್ಕೆ ಶಮೀಮ್ ಹೊಸೈನ್ ಆಸರೆಯಾದರು. 42 ಎಸೆತಗಳಲ್ಲಿ 5 ಬೌಂಡರಿ 2 ಸಿಕ್ಸರ್ ಸಹಿತ 51 ರನ್ ಗಳಿಸಿದರು.
ರಿಷದ್ ಹೊಸೈನ್ 8, ನಸುನ್ ಅಹ್ಮದ್ 13, ಶೋರಿಫುಲ್ ಇಸ್ಲಾಂ 5 ರನ್ ಗಳಿಸಿದರೆ, ಟಸ್ಕಿನ್ ಅಹ್ಮದ್ ಶೂನ್ಯಕ್ಕೆ ಔಟಾದರು. 19.2 ಓವರ್ ಗಳಲ್ಲಿ 124 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಯಿತು. ಮಾರ್ಕ್ ಅಡೈರ್ 4 ಓವರ್ ಗಳಲ್ಲಿ 25 ರನ್ ನೀಡಿ 3 ವಿಕೆಟ್ ಪಡೆದರು. ಮ್ಯಾಥ್ಯೂ ಹಮ್‌ಪ್ರೇಸ್ 2 ವಿಕೆಟ್ ಪಡೆದು ಮಿಂಚಿದರು. ಫಿನ್ ಹ್ಯಾಂಡ್, ಹ್ಯಾರಿ ಟೆಕ್ಟರ್, ಕರ್ಟಿಸ್ ಕ್ಯಾಂಪರ್, ಬೆಂಜಮಿನ್ ವೈಟ್ ಮತ್ತು ಡೆಲಾನಿ ತಲಾ ಒಂದು ವಿಕೆಟ್ ಪಡೆದರು.

ಯಶಸ್ವಿಯಾಗಿ ಚೇಸ್ ಮಾಡಿದ ಐರ್ಲೆಂಡ್
ಸಾಧಾರಣ ಮೊತ್ತವನ್ನು ಬೆನ್ನತ್ತಿದ ಐರ್ಲೆಂಡ್ ತಂಡಕ್ಕೆ ನಾಯಕ ಪೌಲ್ ಸ್ಟರ್ಲಿಂಗ್ ಆಸರೆಯಾದರು. ರಾಸ್ ಅಡೈರ್ ಕೇವಲ 7 ರನ್ ಗಳಿಸಿದರೆ, ಲೋರ್ಕನ್ ಟಕರ್ 4 ರನ್ ಗಳಿಸಿ ಔಟಾದರು. ಹ್ಯಾರಿ ಟೆಕ್ಟರ್ ಅಜೇಯ 14 ರನ್ ಗಳಿಸಿದರೆ, ಕರ್ಟಿಸ್ ಕ್ಯಾಂಫರ್ 9 ಎಸೆತಗಳಲ್ಲಿ 2 ಬೌಂಡರಿ ಒಂದು ಸಿಕ್ಸರ್ ಸಹಿತ ಅಜೇಯ 16 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಪೌಲ್ ಸ್ಟಲಿಂಗ್ ಏಕಾಂಗಿಯಾಗಿ ಸ್ಫೋಟಕ ಇನ್ನಿಂಗ್ಸ್ ಆಡಿಸಿದರು. 41 ಎಸೆತಗಳಲ್ಲಿ 10 ಬೌಂಡರಿ 4 ಸಿಕ್ಸರ್ ಸಹಿತ 77 ರನ್ ಗಳಿಸಿ ಮಿಂಚಿದರು.
ಅತ್ಯುತ್ತಮ ಬ್ಯಾಟಿಂಗ್ ಮಾಡಿದ ಪೌಲ್ ಸ್ಟಲಿಂಗ್ ಪಂದ್ಯ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದುಕೊಂಡರು. ಸರಣಿಯಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಟಸ್ಕಿನ್ ಅಹ್ಮದ್ ಅವರು ಸರಣಿ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದುಕೊಂಡರು. ಈ ಸರಣಿಯ ನಂತರ ಐರ್ಲೆಂಡ್ ಮತ್ತು ಬಾಂಗ್ಲಾದೇಶ ಏಕೈಕ ಟೆಸ್ಟ್ ಪಂದ್ಯವನ್ನು ಆಡಲಿವೆ. ಏಪ್ರಿಲ್ ಮೂರರಿಂದ ಟೆಸ್ಟ್ ಪಂದ್ಯ ಆರಂಭವಾಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications