ಅಂತಿಮ ಪಂದ್ಯದಲ್ಲೂ ವಿಂಡೀಸ್‌ಗೆ ಸೋಲುಣಿಸಿದ ಐರ್ಲೆಂಡ್: ಐತಿಹಾಸಿಕ ಏಕದಿನ ಸರಣಿ ಗೆದ್ದ ಐರಿಷ್ ಪಡೆ

ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡು ಏಕದಿನ ಸರಣಿಯನ್ನು ಆಡಿದ್ದ ಐರ್ಲೆಂಡ್ ಐತಿಹಾಸಿಕ ಸಾಧನೆ ಮಾಡಿದೆ. ಕೆರೀಬಿಯನ್ ನಾಡಿನಲ್ಲಿ ಐರ್ಲೆಂಡ್ ಪಡೆ ಚೊಚ್ಚಲ ಏಕದಿನ ಸರಣಿ ಗೆದ್ದ ಸಾಧನೆ ಮಾಡಿದೆ. ಸರಣಿಯ ನಿರ್ಣಾಯಕ ಪಂದ್ಯದಲ್ಲಿ ರೋಚಕ ಗೆಲುವು ಸಾಧಿಸುವ ಮೂಲಕ ಐರ್ಲೆಂಡ್ ಈ ಮಹತ್ತರ ಸಾಧನೆ ಮಾಡಿ ಬೀಗಿದೆ. ಜಮೈಕಾದ ಸಬೀನಾ ಪಾರ್ಕ್‌ನಲ್ಲಿ ನಡೆದ ಪಂದ್ಯದಲ್ಲಿ 2 ವಿಕೆಟ್‌ಗಳ ಅಂತರದ ಗೆಲುವು ಸಾಧಿಸಿದೆ ಐರ್ಲೆಂಡ್. ಈ ಮೂಲಕ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿದೆ.
ಇದು ಐಸಿಸಿ ಪೂರ್ಣ ಮಾನ್ಯತೆ ಪಡೆದ ತಂಡಗಳ ವಿರುದ್ಧ ವಿದೇಶಿ ನೆಲದಲ್ಲಿ ಐರ್ಲೆಂಡ್ ತಂಡ ಸಾಧಿಸಿದ ಮೊದಲ ಗೆಲುವಾಗಿದೆ. 2019ರಲ್ಲಿ ಜಿಂಬಾಬ್ವೆ ವಿರುದ್ಧ ತವರಿನಲ್ಲಿ ಗೆದ್ದ ಬಳಿಕ ಯರ್ಲೆಂಡ್ ಪಾಲಿನ ಎರಡನೇ ಸರಣಿ ಗೆಲುವು ಇದಾಗಿದೆ. ಈ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಮಹತ್ತರ ಹೆಜ್ಜೆಯಿಟ್ಟಿದೆ ಐರಿಷ್ ಪಡೆ.
ಅಂತಿಮ ಹಾಗೂ ನಿರ್ಣಾಯಕ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲಿಗೆ ಎದುರಾಳಿ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದ ಐರ್ಲೆಂಡ್ 44.4 ಓವರ್‌ಗಳಲ್ಲಿ 212 ರನ್‌ಗಳಿಗೆ ವೆಸ್ಟ್ ಇಂಡೀಸ್ ತಂಡವನ್ನು ಆಲೌಟ್ ಮಾಡುವಲ್ಲಿ ಯಶಸ್ವಿಯಾಗಿತ್ತು. ಈ ಸ್ಕೋರ್‌ಅನ್ನು ಬೆನ್ನಟ್ಟಿದ ಐರ್ಲೆಂಡ್ 45ನೇ ಓವರ್‌ನಲ್ಲಿಯೇ ಎರಡು ವಿಕೆಟ್‌ಗಳು ಉಳಿಸಿಕೊಂಡು ಗೆಲುವು ಸಾಧಿಸಿದೆ.
ಇನ್ನು ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡದ ಪರವಾಗಿ ವಿಕೆಟ್ ಕೀಪರ್ ಬ್ಯಾಟರ್ ಶಾಯ್ ಹೋಪ್ 53 ರನ್‌ಗಳನ್ನು ಸಿಡಿಸಿ ತಂಡದ ಪರ ಗರಿಷ್ಠ ಕೊಡುಗೆ ನೀಡಿದರು. ಉಳಿದಂತೆ ಜೇಸನ್ ಹೋಲ್ಡರ್ 44 ರನ್‌ಗಳಿಸಿದ್ದು ಅತಿ ಹೆಚ್ಚಿನ ಸ್ಕೋರ್ ಎನಿಸಿದೆ. ಹೋಲ್ಡರ್ 44 ರನ್ ಗಳಿಸಿದರು. ಉಳಿದ ಆಟಗಾರರಿಂದ ನಿರ್ಣಾಯಕ ಕೊಡುಗೆ ಬಾರಲಿಲ್ಲ. ಹೀಗಾಗಿ ವೆಸ್ಟ್ ಇಂಡೀಸ್ ತಂಡ ಸವಾಲಿನ ಮೊತ್ತ ಪೇರಿಸಲು ವಿಫಲವಾಯಿತು. ಇನ್ನು ಐರ್ಲೆಂಡ್ ತಂಡದ ಪರವಾಗಿ ಆಂಡಿ ಮೆಕ್‌ಬ್ರೈನ್ ನಾಲ್ಕು ವಿಕೆಟ್ ಕಿತ್ತು ಮಿಂಚಿದರೆ ಕ್ರೇಗ್ ಯಂಗ್ 3 ವಿಕೆಟ್ ಪಡೆದರು.
ಇನ್ನು ವೆಸ್ಟ್ ಇಂಡೀಸ್ ನೀಡಿದ 213 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಐರ್ಲೆಂಡ್ ಮೊದಲ ಎಸೆತದಲ್ಲಿಯೇ ಆರಂಭಿಕ ಆಟಗಾರ ವಿಲಿಯಮ್ ಫೋರ್ಟರ್ಫೀಲ್ಡ್ ವಿಕೆಟ್ ಕಳೆದುಕೊಂಡಿತು. ಆದರೆ ನಂತರ ಅದ್ಭುತ ಪ್ರದರ್ಶನ ಐರ್ಲೆಂಡ್ ಕಡೆಯಿಂದ ಬಂದಿತ್ತು. ನಾಯಕ ಪೌಲ್ ಸ್ಟಿರ್ಲಿಂಗ್, ಆಂಡಿ ಮೆಕ್‌ಬ್ರೈನ್ ಹಾಗೂ ಹ್ಯಾರಿ ಟೆಕ್ಟರ್ ಅದ್ಭುತ ಪ್ರದರ್ಶನ ನೀಡಿದರು. ಇದರಲ್ಲಿ ಆಂಡಿ ಮೆಕ್‌ಬ್ರೈನ್ ಹಾಗೂ ಹ್ಯಾರಿ ಟೆಕ್ಟರ್ ಇಬ್ಬರು ಕುಡ ಅರ್ಧ ಶತಕವನ್ನು ಗಳಿಸಿ ಮಿಂಚಿದರು. ಈ ಜೊತೆಯಾಟದಿಂದ ಐರ್ಲೆಂಡ್ ಗೆಲುವಿನ ಸನಿಹಕ್ಕೆ ತಲುಪಿತ್ತು. ಆದರೆ ಈ ಆಟಗಾರರು ವಿಕೆಟ್ ಕಳೆದುಕೊಂಡ ನಂತರ ಐರ್ಲೆಂಡ್ ಕುಸಿತವನ್ನು ಕಂಡಿತು. ಆದರೆ ಅಂತಿಮವಾಗಿ 2 ವಿಕೆಟ್‌ಗಳ ಅಂತರದಿಂದ ಗೆಲುವು ಸಾಧಿಸುವಲ್ಲಿ ತಂಡ ಯಶಸ್ವಿಯಾಯಿತು.
ಮೂರು ಪಂದ್ಯಗಳ ಈ ಸರಣಿ ಮೊದಲ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ 24 ರನ್‌ಗಳ ಅಂತರದಿಂದ ಗೆಲುವು ಸಾಧಿಸಿತ್ತು. ನಂತರ ಕೊರೊನಾವೈರಸ್‌ನ ಕಾರಣದಿಂದ ಮುಂದೂಡಿಕೆಯಾಗಿ ಬಳಿಕ ಮಳೆಯಿಂದ ಅಡ್ಡಿಯಾದ ಪಂದ್ಯದಲ್ಲಿ ಐರ್ಲೆಂಡ್ 5 ವಿಕೆಟ್‌ಗಳ ಅಂತರದಿಂದ ಗೆಲುವು ಸಾಧಸಿತ್ತು. ಈ ಮೂಲಕ ಸರಣಿಯನ್ನು ಸಮಬಲಗೊಳಿಸುವಲ್ಲಿ ಯಶಸ್ವಿಯಾಗಿತ್ತು. ಇದೀಗ ಅಂತಿಮ ಪಂದ್ಯವನ್ನು ಭರ್ಜರಿಯಾಗಿ ಗೆದ್ದುಕೊಂಡಿದೆ.
ವೆಸ್ಟ್ ಇಂಡೀಸ್ ಪ್ಲೇಯಿಂಗ್ XI: ಶಾಯ್ ಹೋಪ್ (ವಿಕೆಟ್ ಕೀಪರ್), ಜಸ್ಟಿನ್ ಗ್ರೀವ್ಸ್, ನಿಕೋಲಸ್ ಪೂರನ್, ಶಮರ್ ಬ್ರೂಕ್ಸ್, ರೋಸ್ಟನ್ ಚೇಸ್, ಕೀರಾನ್ ಪೊಲಾರ್ಡ್ (ನಾಯಕ), ಜೇಸನ್ ಹೋಲ್ಡರ್, ಅಕೇಲ್ ಹೊಸೈನ್, ಅಲ್ಜಾರಿ ಜೋಸೆಫ್, ರೊಮಾರಿಯೋ ಶೆಫರ್ಡ್, ಓಡಿಯನ್ ಸ್ಮಿತ್
ಬೆಂಚ್: ಜೇಡನ್ ಸೀಲ್ಸ್, ಡೆವೊನ್ ಥಾಮಸ್, ಗುಡಾಕೇಶ್ ಮೋಟಿ
ಐರ್ಲೆಂಡ್ ಪ್ಲೇಯಿಂಗ್ XI: ವಿಲಿಯಂ ಪೋರ್ಟರ್‌ಫೀಲ್ಡ್, ಪಾಲ್ ಸ್ಟಿರ್ಲಿಂಗ್ (ನಾಯಕ), ಆಂಡಿ ಮ್ಯಾಕ್‌ಬ್ರೈನ್, ಹ್ಯಾರಿ ಟೆಕ್ಟರ್, ಕರ್ಟಿಸ್ ಕ್ಯಾಂಫರ್, ಜಾರ್ಜ್ ಡಾಕ್ರೆಲ್, ನೀಲ್ ರಾಕ್ (ವಿಕೆಟ್ ಕೀಪರ್), ಗರೆಥ್ ಡೆಲಾನಿ, ಮಾರ್ಕ್ ಅಡೇರ್, ಕ್ರೇಗ್ ಯಂಗ್, ಜೋಶುವಾ ಲಿಟಲ್
ಬೆಂಚ್: ಬ್ಯಾರಿ ಮೆಕಾರ್ಥಿ, ಶೇನ್ ಗೆಟ್ಕೇಟ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications