ವಿಶ್ರಾಂತಿ ನೀಡಿದರೆ ಫಾರ್ಮ್‌ಗೆ ಮರಳಲ್ಲ: ಹಿರಿಯ ಆಟಗಾರರ ವಿಶ್ರಾಂತಿಗೆ ಇರ್ಫಾನ್ ಪಠಾಣ್ ಅಸಮಾಧಾನ

ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಮೂರು ಪಂದ್ಯಗಳ ಏಕದಿನ ಸರಣಿಗೆ ಬಿಸಿಸಿಐ ಬುಧವಾರ 16 ಆಟಗಾರರ ಸ್ಕ್ವಾಡ್ ಘೋಷಣೆ ಮಾಡಿದೆ. ಈ ಸ್ಕ್ವಾಡ್ ಘೋಷಣೆಯ ಬಳಿಕ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಕುತೂಹಲಕಾರಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಸರಣಿಗೆ ಭಾರತದ ಪ್ರಮುಖ ಅನುಭವಿ ಆಟಗಾರರಿಗೆ ವಿಶ್ರಾಂತಿ ನೀಡಿರುವ ಬಗ್ಗೆ ಪಠಾಣ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಸೀಮಿತ ಓವರ್‌ಗಳ ಸರಣಿ ಮುಕ್ತಾಯವಾಗುತ್ತಿದ್ದಂತೆಯೇ ಭಾರತ ವೆಸ್ಟ್ ಇಂಡೀಸ್‌ಗೆ ಪ್ರಯಾಣ ಬೆಳೆಸಲಿದ್ದು ಸೀಮಿತ ಓವರ್‌ಗಳ ಸರಣಿಯಲ್ಲಿ ಭಾಗಿಯಾಗಲಿದೆ. ಮೊದಲಿಗೆ ಮೂರು ಪಂದ್ಯಗಳ ಏಕದಿನ ಸರಣಿಯನ್ನಾಡಲಿರುವ ಭಾರತ ಹಾಗೂ ವಿಂಡೀಸ್ ತಂಡಗಳು ನಂತರ ಟಿ20 ಸರಣಿಯನ್ನಾಡಲಿದೆ. ಏಕದಿನ ಸರಣಿಯ ತಂಡವನ್ನು ಇಂದು(ಬುಧವಾರ) ಪ್ರಕಟಿಸಲಾಗಿದೆ.

ರೋಹಿತ್ ಸೇರಿದಂತೆ ಪ್ರಮುಖ ಆಟಗಾರರಿಗೆ ವಿಶ್ರಾಂತಿ
ಭಾರತ ತಂಡದ ಖಾಯಂ ನಾಯಕ ರೋಹಿತ್ ಶರ್ಮಾ ಸೇರಿದಂತೆ ವಿರಾಟ್ ಕೊಹ್ಲಿ, ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ ರಿಷಭ್ ಪಂತ್‌ಗೆ ವಿಶ್ರಾಂತಿ ನೀಡಲಾಗಿದೆ. ರೋಹಿತ್ ಶರ್ಮಾ ಗೈರಿನಲ್ಲಿ ಭಾರತ ತಂಡವನ್ನು ಅನುಭವಿ ಆಟಗಾರ ಶಿಖರ್ ಧವನ್ ಮುನ್ನಡೆಸಲಿದ್ದು ರವೀಂದ್ರ ಜಡೇಕಾ ಉಪನಾಯಕನಾಗಿ ಸಾಥ್ ನೀಡಲಿದ್ದಾರೆ. 2022ರ ಬಳಿಕ ಭಾರತ ತಂಡವನ್ನು ಮುನ್ನಡೆಸುತ್ತಿರುವ 7ನೇ ನಾಯಕನಾಗಿದ್ದಾರೆ ಶಿಖರ್ ಧವನ್.

ಫಾರ್ಮ್‌ನಲ್ಲಿಲ್ಲ ರೋಹಿತ್, ಕೊಹ್ಲಿ
ಟೀಮ್ ಇಂಡಿಯಾದ ಪ್ರಮುಖ ಆಟಗಾರರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಇತ್ತೀಚೆಗೆ ಕಳಪೆ ಪ್ರದರ್ಶನ ನೀಡುತ್ತಿದ್ದು ಫಾರ್ಮ್‌ನಲ್ಲಿಲ್ಲ. ಇಬ್ಬರು ಆಟಗಾರರು ಕೂಡ ಕಳೆದ ಐಪಿಎಲ್‌ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದಾರೆ. ಇನ್ನು ನಾಯಕ ರೋಹಿತ್ ಶರ್ಮಾ ಸುದೀರ್ಘ ಕಾಲದಿಂದ ವಿಶ್ರಾಂತಿಯಲ್ಲಿದ್ದಾರೆ. ಐಪಿಎಲ್ ಬಳಿಕ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಿಂದಲೂ ವಿಶ್ರಾಂತಿ ಪಡೆದಿದ್ದ ರೋಹಿತ್ ಇತ್ತೀಚೆಗೆ ಮುಕ್ತಾಯವಾಗಿ ಇಂಗ್ಲೆಂಡ್ ವಿರುದ್ಧಧ ಅಂತಿಮ ಟೆಸ್ಟ್ ಪಂದ್ಯಕ್ಕೂ ಕೋವಿಡ್ ಕಾರಣದಿಂದಾಗಿ ಅಲಭ್ಯವಾಗಿದ್ದರು. ಮತ್ತೊಂದೆಡೆ ಐಪಿಎಲ್ ಬಳಿಕ ರಾಷ್ಟ್ರೀಯ ತಂಡದ ಪರವಾಗಿತಯೂ ಕೊಹ್ಲಿ ರನ್‌ಗಳಿಸಲು ವಿಫಲವಾಗುತ್ತಿದ್ದಾರೆ.

ಇರ್ಫಾನ್ ಪಠಾಣ್ ಅಸಮಾಧಾನ
ಇನ್ನು ಟೀಮ್ ಇಂಡಿಯಾದಲ್ಲಿ ಅನುಭವಿ ಆಟಗಾರರಿಗೆ ವಿಶ್ರಾಂತಿ ನೀಡಿರುವ ವಿಚಾರವಾಗಿ ಇರ್ಫಾನ್ ಪಠಾಣ್ ತಮ್ಮ ಅಸಮಾಧಾನವನ್ನು ಟ್ವಿಟ್ಟರ್‌ನಲ್ಲಿ ವ್ಯಕ್ತಪಪಡಿಸಿದ್ದಾರೆ. ತಮ್ಮ ಟ್ವೀಟ್‌ನಲ್ಲಿಯೂ ಯಾರನ್ನೂ ಉಲ್ಲೇಖಿಸಲಿದೆ ಪಠಾಣ್ ಟ್ವಿಟ್ ಮಾಡಿದ್ದರೂ ತಂಡದ ಬಿಸಿಸಿಐ ನಿರ್ಧಾರದ ಬಗ್ಗೆ ಈ ಟ್ವೀಟ್ ಎಂಬುದು ಸ್ಪಷ್ಟವಾಗಿದೆ. ಈ ಟ್ವೀಟ್‌ನಲ್ಲಿ ಪಠಾಣ್ "ಯಾರೂ ಕೂಡ ವಿಶ್ರಾಂತಿಯನ್ನು ಪಡೆದು ಫಾರ್ಮ್‌ಗೆ ಮರಳುವುದಿಲ್ಲ" ಎಂದು ಟ್ವೀಟ್ ಮಾಡಿದ್ದಾರೆ.

ವಿಂಡೀಸ್ ಸರಣಿಗೆ ಆಯ್ಕೆಯಾಗಿರುವ ಭಾರತದ ಏಕದಿನ ಸ್ಕ್ವಾಡ್
ಶಿಖರ್ ಧವನ್ (ನಾಯಕ), ಋತುರಾಜ್ ಗಾಯಕ್ವಾಡ್, ಶುಬ್ಮನ್ ಗಿಲ್, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ (ಉಪ ನಾಯಕ) ಶಾರ್ದೂಲ್ ಠಾಕೂರ್, ಯುಜ್ವೇಂದ್ರ ಚಾಹಲ್, ಅಕ್ಸರ್ ಪಟೇಲ್, ಅವೇಶ್ ಖಾನ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications