"ವಿರಾಟ್ ಕೊಹ್ಲಿಗೆ ಸಚಿನ್ ತೆಂಡೂಲ್ಕರ್ ಅವರಿಂದ ಕಲಿಯುವ ಅವಶ್ಯಕತೆ ಇದೆ": ಇರ್ಫಾನ್ ಪಠಾಣ್
ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಬಾರ್ಡರ್ ಗವಾಸ್ಕರ್ ಸರಣಿ ಮುಗಿದಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದೆ. ಇವರು ವೈಫಲ್ಯ ನೇರವಾಗಿ ತಂಡದ ಫಲಿತಾಂಶದ ಮೇಲೆ ಪರಿಣಾಮ ಬೀರಿದೆ. ಈ ಹಿಂದೆ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ಅಬ್ಬರಿಸಿದ್ದರು. ಆದರೆ ಈ ಬಾರಿ ಅವರ ಬ್ಯಾಟ್ ಮೌನಕ್ಕೆ ಶರಣಾಗಿದೆ. ಹೀಗಾಗಿ ಟೀಮ್ ಇಂಡಿಯಾ ಸೋಲಿನ ಸುಳಿಯಲ್ಲಿ ಸಿಲುಕಿ ಒದ್ದಾಡಿತು. ವಿರಾಟ್ ಕೊಹ್ಲಿ ಅಷ್ಟೇ ಅಲ್ಲ ಟೀಮ್ ಇಂಡಿಯಾದ ಯಾವುದೇ ಸೂಪರ್ ಸ್ಟಾರ್ ರನ್ ಕಲೆ ಹಾಕುವಲ್ಲಿ ವಿಫಲರಾಗಿರುವುದು ತಂಡಕ್ಕೆ ಪೆಟ್ಟು ಬಿದ್ದಿದೆ.
ವಿರಾಟ್ ಕೊಹ್ಲಿ ಅವರ ಆಟಕ್ಕೆ ಹಲವು ಟೀಕೆಗಳು ಕೇಳಿ ಬಂದವು. ಆದರೆ ಈ ಎಲ್ಲ ನ್ಯೂನತೆಗಳನ್ನು ಮೆಟ್ಟಿನಿಂತು ಪುಟಿದೇಳುವ ಅವಾಶ್ಯಕತೆ ಇದೆ. ವಿರಾಟ್ ಪರ್ತ್‌ನಲ್ಲಿ ನಡೆದಿದ್ದ ಎರಡನೇ ಇನಿಂಗ್ಸ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ಶತಕ ಬಾರಿಸಿದ್ದರು. ಆ ಬಳಿಕ ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಬ್ಯಾಟರ್ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದರು. ಹೀಗಾಗಿ ಇವರ ಬ್ಯಾಟಿಂಗ್‌ಗೆ ಟೀಮ್ ಇಂಡಿಯಾದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಣಾ ಸಹ ಟೀಕಿಸಿದ್ದಾರೆ.

ಕಳಪೆ ಸಾಧನೆ
ವಿರಾಟ್ ಕೊಹ್ಲಿ 9 ಇನ್ನಿಂಗ್ಸ್‌ಗಳಲ್ಲಿ ಕೇವಲ 190 ರನ್ ಗಳಿಸಿದರು. ಮತ್ತು ನಾಲ್ಕನೇ ಮತ್ತು ಐದನೇ ಸ್ಟಂಪ್ ಮೇಲಿನ ಎಸೆತಗಳಲ್ಲೇ ಹಲವಾರು ಬಾರಿ ಔಟಾದರು. ಇದೆಲ್ಲದರ ಬಗ್ಗೆ ಇರ್ಫಾನ್ ಪಠಾಣ್ ತುಟಿ ಬಿಚ್ಚಿದ್ದಾರೆ. ಟೀಮ್ ಸೂಪರ್ ಸ್ಟಾರ್ ಸಂಸ್ಕೃತಿ ಇದ್ದಂತೆ ಕಾಣುತ್ತಿದೆ. ಈ ಸಂಸ್ಕೃತಿ ಇರುವುದು ಒಳ್ಳೆಯದು ಎಂದು ಇರ್ಫಾನ್ ಪಠಾಣ್ ತಿಳಿಸಿದ್ದಾರೆ.
ಇನ್ನು ವಿರಾಟ್ ಕೊಹ್ಲಿ ದೇಶೀಯ ಟೂರ್ನಿಯಲ್ಲಿ ಕೊನೆಯ ಬಾರಿಗೆ ಯಾವಾಗ ಆಡಿದ್ದರು? ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ತಮಗೆ ಸಮಯ ಸಿಕ್ಕಾಗಲೆಲ್ಲಾ, ದೇಶೀಯ ಪಂದ್ಯಗಳನ್ನು ಆಡುತ್ತಿದ್ದರು. ಇದಕ್ಕೆ ಕಾರಣ ಮ್ಯಾಚ್ ಪ್ರಾಕ್ಟೀಸ್ ಇರುತ್ತದೆ ಎಂದು. ಅವರು ಎಂದು ದೇಶೀಯ ಕ್ರಿಕೆಟ್ ಆಡುವುದನ್ನು ನಿಲ್ಲಿಸಲಿಲ್ಲ. ಮೈದಾನದಲ್ಲಿ ನಾಲ್ಕೈದು ದಿನಗಳನ್ನಾದ್ರೂ ಕಳೆಯ ಬಹುದು ಎಂದು ಅವರು ಆಡುತ್ತಿದ್ದರು ಎಂದು ಇರ್ಫಾನ್ ನೆನಪಿಸಿಕೊಂಡಿದ್ದಾರೆ.

ಸಲಹೆ ಪಡೆಯಿರಿ
ವಿರಾಟ್ ಕೊಹ್ಲಿ ಮಾಡಿದ ತಪ್ಪುಗಳನ್ನೇ ಪದೇ ಪದೇ ಮಾಡುತ್ತಿದ್ದಾರೆ. ಅವರು ತಮ್ಮ ತಪ್ಪಗಳನ್ನು ಸುಧಾರಿಸಿಕೊಂಡಿಲ್ಲ ಎಂಬುದೇ ಬೇಸರದ ಸಂಗತಿ. ಕಳೆದ ಐದು ವರ್ಷದಲ್ಲಿ ಅವರ ಸರಾಸರಿ 30 ಆಗಿದೆ. ಭಾರತ ತಂಡದಲ್ಲಿ ಅನುಭವಿ ಹಾಗೂ ಹಿರಿಯ ಆಟಗಾರರಿಗೆ ಮನ್ನಣೆ ನೀಡಲಾಗುತ್ತಿದೆಯಾ?, ಬದಲಗಿ ಯುವ ಆಟಗಾರರಿಗೆ ಅವಕಾಶ ನೀಡಿ, ಅವರು ಸಿಕ್ಕ ಅವಕಾಶದಲ್ಲಿ ಅಬ್ಬರಿಸುವ ಪ್ಲ್ಯಾನ್ ಹೊಂದಿರುತ್ತಾರೆ. ವಿರಾಟ್ ಕೊಹ್ಲಿ ಟೀಂ ಇಂಡಿಯಾಗಾಗಿ ಸಾಕಷ್ಟು ಸಾಧನೆ ಮಾಡಿದ್ದಾರೆ. ವಿರಾಟ್ ತಾಂತ್ರಿಕ ದೋಷಗಳನ್ನು ಸರಿಪಡಿಸಲು ಪ್ರಯತ್ನಿಸುತ್ತಿಲ್ಲ. ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲು ವಿರಾಟ್ ಹಿರಿಯರ ಸಲಹೆ ಪಡೆಯಬೇಕು ಎಂದು ಇರ್ಫಾನ್ ತಿಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications