Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಈತನಂಥಾ ಬೌಲರ್ ವಿಶ್ವದಲ್ಲೇ ಸಿಗಲ್ಲ: ಭಾರತೀಯ ಬೌಲರ್ ಬಗ್ಗೆ ಇರ್ಫಾನ್ ಪಠಾಣ್ ಗುಣಗಾನ

ಬುಧವಾರ ದೆಹಲಿಯಲ್ಲಿ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಗೆಲುವು ಸಾಧಿಸಿತು. ಈ ಪಂದ್ಯದಲ್ಲಿ ಬ್ಯಾಟಿಂಗ್‌ನಲ್ಲಿ ನಾಯಕ ರೋಹಿತ್ ಶರ್ಮಾ ಅಬ್ಬರಿಸಿದರೆ ಬೌಲಿಂಗ್‌ನಲ್ಲಿ ಮಿಂಚಿದ್ದು ವೇಗಿ ಜಸ್ಪ್ರೀತ್ ಬೂಮ್ರಾ. ದೆಹಲಿಯ ನೂತನ ಬ್ಯಾಟಿಂಗ್ ಸ್ನೇಹಿ ಪಿಚ್‌ನಲ್ಲಿಯೂ ಬೂಮ್ರಾ ಅದ್ಭುತ ಯಶಸ್ಸು ಸಾಧಿಸಿದ್ದು ನಾಲ್ಕು ವಿಕೆಟ್ ಕಬಳಿಸಿದರು. ಈ ಪ್ರದರ್ಶನದ ಬಳಿಕ ಟೀಮ್ ಇಂಡಿಯಾದ ಮಾಜಿ ಆಟಗಾರ ಇರ್ಪಾನ್ ಪಠಾಣ್ ಬೂಮ್ರಾ ಬಗ್ಗೆ ಭಾರೀ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಬೂಮ್ರಾ ಅವರ ಪ್ರದರ್ಶನ ವಿಶ್ವಕಪ್‌ನಲ್ಲಿ ಅವರ ವೈಯಕ್ತಿಕವಾಗಿ ಅತ್ಯುತ್ತಮ ಪ್ರದರ್ಶನ ಎನಿಸಿಕೊಂಡಿದೆ. ಈ ಪಂದ್ಯದಲ್ಲಿ ಅವರು 39 ರನ್‌ಗಳಿಗೆ 4 ವಿಕೆಟ್ ಕಬಳಿಸುವ ಮೂಲಕ ಮಿಂಚಿದ್ದಾರೆ. ಇನ್ನು 2019ರ ವಿಶ್ವಕಪ್‌ನಲ್ಲಿ ಬಾಂಗ್ಲಾದೇಶದ ವಿರುದ್ಧ 4/55 ಬೂರ್ಮಾ ಅವರ ಈ ಹಿಂದಿನ ಅತ್ಯುತ್ತಮ ಪ್ರದರ್ಶನವಾಗಿತ್ತು. ಇದೀಗ ಅಫ್ಘಾನಿಸ್ತಾನದ ವಿರುದ್ಧದ ಅವರ ಬೌಲಿಂಗ್ ಪ್ರದರ್ಶನದಿಂದಾಗಿ 272 ರನ್‌ಗಳಿಗೆ ಅಫ್ಘನ್ ಪಡೆಯನ್ನು ನಿಯಂತ್ರಿಸಲು ಕಾರಣವಾಯಿತು.

Irfan Pathan praises Jasprit Bumrah said Wont get a better bowler than him in the entire world

ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡಿದ ಇರ್ಫಾನ್ ಪಠಾಣ್ ಭಾರತದ ವೇಗಿ ಜಸ್ಪ್ರೀತ್ ಬೂಮ್ರಾ ಅವರನ್ನು ವಿಶ್ವದ ಅತ್ಯುತ್ತಮ ವೇಗಿ ಎಂದು ಶ್ಲಾಘಿಸಿದ್ದಾರೆ. ತನ್ನ ಬೌಲಿಂಗ್‌ನಲ್ಲಿ ಏರಿಳಿತಗಳನ್ನು ಪ್ರಯೊಗಿಸಿಕೊಂಡು ಬ್ಯಾಟರ್‌ಗಳನ್ನು ಹೊಂದಿಸಿಕೊಂಡು ನಂತರ ಅವರ ವಿಕೆಟ್ ಪಡೆಯುವುದರಲ್ಲಿ ಆತ ನಿಷ್ಣಾತ ಎಂದು ಕೊಂಡಾಡಿದ್ದಾರೆ.

"ಇಡೀ ಜಗತ್ತಿನಲ್ಲಿ ನಿಮಗೆ ಬೂಮ್ರಾಗಿಂತ ಉತ್ತಮ ಬೌಲರ್ ಸಿಗುವುದಿಲ್ಲ. ನೀವು ಅವರ ಆಕ್ಷನ್ ಅನ್ನು ಗಮನದಲ್ಲಿಟ್ಟುಕೊಂಡರೆ ಆತ ತನ್ನ ಬೌಲಿಂಗ್‌ನಲ್ಲಿ ಹೇಗೆ ಬದಲಾವಣೆಗಳನ್ನು ಮಾಡಿಕೊಳ್ಳುತ್ತಾರೆ ಎನ್ನುವುದು ತಿಳಿಯುತ್ತದೆ. ತನ್ನ ಚಾಣಾಕ್ಷತನದ ಮೂಲಕ ವಿಕೆಟ್ ಪಡೆಯುತ್ತಾರೆ" ಎಂದು ಇರ್ಫಾನ್ ಪಠಾಣ್ ಬೂಮ್ರಾ ಸಾಮರ್ಥ್ಯದ ಬಗ್ಗೆ ವಿಶೇಷ ಮಾತುಗಳನ್ನಾಡಿದ್ದಾರೆ.

ಭಾರತ ತನ್ನ ಮುಂದಿನ ಪಂದ್ಯವನ್ನು ಪಾಕಿಸ್ತಾನದ ವಿರುದ್ಧ ಆಡಲಿದ್ದು ಅಹ್ಮದಾಬಾದ್‌ನಲ್ಲಿ ಈ ಪಂದ್ಯ ಮುಂದಿನ ಶನಿವಾರ ಆಯೋಜನೆಯಾಗಲಿದೆ. ಈ ಪಂದ್ಯಕ್ಕಾಗಿ ಭಾರತ ಹಾಗೂ ಪಾಕಿಸ್ತಾನ ಎರಡು ತಂಡಗಳು ಕೂಡ ಇದೀಗ ಗುಜರಾತ್‌ನ ಅಹ್ಮದಾಬಾದ್‌ಗೆ ಬಂದಿಳಿದಿದೆ.

Story first published: Thursday, October 12, 2023, 17:57 [IST]
Other articles published on Oct 12, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+