For Quick Alerts
ALLOW NOTIFICATIONS  
For Daily Alerts
 

ಪಾಕ್ ಹುಡುಗಿ ಹಾಕಿದ ಬೌನ್ಸರ್ ಗೆ ಇರ್ಫಾನ್ ಪಠಾಣ್ ಸಿಕ್ಸರ್

ಭಾರತದ ಆಲ್ ರೌಂಡರ್ ಇರ್ಫಾನ್ ಪಠಾಣ್ ಗೆ ಪಾಕಿಸ್ತಾನದ ಹುಡುಗಿಯೊಬ್ಬಳು ಕೇಳಿದ ಪ್ರಶ್ನೆಯನ್ನು ಅವರು ಯಾವತ್ತೂ ಮರೆಯೋದೇ ಇಲ್ವಂತೆ. ಅರೇ ಆ ಹಡುಗಿ ಕೇಳಿದ ಪ್ರಶ್ನೆಯಾದರೂ ಏನು? ಆ ಪ್ರಶ್ನೆಗೆ ಪಠಾಣ್ ಕೊಟ್ಟ ಉತ್ತರ ಇಲ್ಲಿದೆ.

ಹೈದರಾಬಾದ್, ಫೆಬ್ರವರಿ. 14 : ಕ್ರಿಕೆಟಿಗರು ಎಲ್ಲೇ ಹೋದರೂ ಅವರ ಅಭಿಮಾನಿಗಳು ಬೆಂಬಿಡದೇ ಇರುವುದಿಲ್ಲ. ಹಲವು ಕುತೂಹಲಗಳು, ಪ್ರಶ್ನೆಗಳು ಎದುರಾಗುತ್ತಲೇ ಇರುತ್ತವೆ.

ಅದರಂತೆ ಟೀಂ ಇಂಡಿಯಾದ ಆಲ್ ರೌಂಡರ್ ಇರ್ಫಾನ್ ಪಠಾಣ್ ಗೆ ಪಾಕಿಸ್ತಾನದ ಹುಡುಗಿಯೊಬ್ಬಳು ಕೇಳಿದ ಪ್ರಶ್ನೆಯನ್ನು ಅವರು ಯಾವತ್ತೂ ಮರೆಯೋದೇ ಇಲ್ವಂತೆ. ಅರೇ ಆ ಹಡುಗಿ ಕೇಳಿದ ಪ್ರಶ್ನೆಯಾದರೂ ಏನು? ಆ ಪ್ರಶ್ನೆಗೆ ಪಠಾಣ್ ಕೊಟ್ಟ ಉತ್ತರ ಇಲ್ಲಿದೆ.[ಇರ್ಫಾನ್ ಪಠಾಣ್- ಸಫಾ ಶಾದಿ ಮುಬಾರಕ್!]

Irfan Pathan response when Pakistani girl asked why he plays india muslim

ಲಾಹೋರ್ ನಲ್ಲಿ ಹುಡುಗಿಯೊಬ್ಬಳು ಅವರ ಬಳಿ ಬಂದು, ನೀವು ಮುಸ್ಲಿಂ ಧರ್ಮದವರು. ಆದರೂ ಭಾರತದ ಪರ ಆಡುತ್ತಿರುವುದೇಕೆ ಎಂದು ಅವರ ಬಳಿ ಕೇಳಿದ್ದಳಂತೆ.

ಈ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ ಇಂತಹದ್ದೊಂದು ಕುತೂಹಲಕಾರಿ ಘಟನೆಯನ್ನು ಇರ್ಫಾನ್ ಪಠಾಣ್ ನೆನಪಿಸಿಕೊಂಡಿದ್ದಾರೆ.

ನಾಗಪುರದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಈ ಘಟನೆಯನ್ನು ನೆನಪಿಸಿಕೊಂಡು ಮಾತನಾಡಿದ ಪಠಾಣ್, ನನಗೆ ಭಾರತದ ಪರ ಆಡುವುದೆಂದರೆ ಹೆಮ್ಮೆ.

ಈ ಭಾವನೆ ನನ್ನನ್ನು ಮತ್ತಷ್ಟು ಹುರಿದುಂಬಿಸುತ್ತದೆ ಎಂದರಂತೆ. ನನ್ನ ವೃತ್ತಿ ಜೀವನದಲ್ಲಿ ಹಲವು ನೆನಪುಗಳಿದ್ದರೂ, ಈ ಘಟನೆಯನ್ನು ಯಾವತ್ತೂ ಮರೆಯೋಲ್ಲ ಎಂದು ಪಠಾಣ್ ಹೇಳಿದ್ದಾರೆ.

ಇದೇ ವೇಳೆ ಮಾಜಿ ಟೀಂ ಇಂಡಿಯಾ ಕ್ಯಾಪ್ಟನ್ ಸೌರವ್ ಗಂಗೂಲಿ ಅವರಿಂದ ಕ್ಯಾಪ್ ಪಡೆದ ಮಧುರ ಕ್ಷಣಗಳನ್ನು ಪಠಾಣ್ ಸ್ಮರಿಸಿದ್ದಾರೆ.

ಈ ವರೆಗೆ ಪಠಾಣ್ ಭಾರತದ ಪರವಾಗಿ 29 ಟೆಸ್ಟ್ ಪಂದ್ಯ, 120 ಏಕದಿನ ಹಾಗೂ 24 ಟಿ20 ಪಂದ್ಯಗಳನ್ನು ಆಡಿದ್ದಾರೆ.

Story first published: Wednesday, January 3, 2018, 10:04 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+