Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತದ ಮಾಜಿ ಆಲ್ ರೌಂಡರ್ ಇರ್ಫಾನ್ ಪಠಾಣ್‌ಗೆ ಕೊರೊನಾ ಪಾಸಿಟಿವ್

Irfan Pathan tests positive for Covid-19 after Sachin Tendulkar, Yusuf Pathan

ನವದೆಹಲಿ: ಟೀಮ್ ಇಂಡಿಯಾದ ಮಾಜಿ ಆಲ್ ರೌಂಡರ್ ಇರ್ಫಾನ್ ಪಠಾಣ್‌ಗೆ ಕೊರೊನಾವೈರಸ್ ಪಾಸಿಟಿವ್ ಬಂದಿದೆ. ಟ್ವೀಟ್ ಮಾಡಿರುವ ಪಠಾಣ್ ಈ ವಿಚಾರ ಖಾತರಿಪಡಿಸಿದ್ದಾರೆ. ಪಠಾಣ್‌ಗೆ ಪಾಸಿಟಿವ್ ಬಂದಿದೆಯಾದರೂ ಕೊರೊನಾದ ಯಾವುದೇ ಗುಣಲಕ್ಷಣಗಳು ಕಾಣಿಸಿಕೊಂಡಿಲ್ಲ.

ಇತ್ತೀಚೆಗಷ್ಟೇ ಭಾರತದ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್‌ಗೆ ಕೋವಿಡ್-19 ಪಾಸಿಟಿವ್ ಬಂದಿತ್ತು. ಅದರ ಬೆನ್ನಲ್ಲೇ ಭಾರತದ ಮಾಜಿ ಆಲ್ ರೌಂಡರ್, ಇರ್ಫಾನ್ ಪಠಾಣ್ ಅವರ ಅಣ್ಣ ಯೂಸುಫ್ ಪಠಾಣ್‌ಗೂ ಕೊರೊನಾ ಇರುವುದು ಕಂಡು ಬಂದಿತ್ತು. ಮಾಜಿ ಕ್ರಿಕೆಟಿಗ ಎಸ್‌ ಬದ್ರಿನಾಥ್‌ಗೂ ಕೊರೊನಾ ಸೋಂಕು ತಗುಲಿತ್ತು.

'ನನಗೆ ಕೊರೊನಾ ಪಾಸಿಟಿವ್ ಆಗಿದೆ. ಆದರೆ ಯಾವುದೇ ಗುಣಲಕ್ಷಣಗಳಿಲ್ಲ. ನಾನೀಗ ಮನೆಯಲ್ಲಿ ಸೆಲ್ಫ್ ಐಸೊಲೇಶನ್‌ನಲ್ಲಿದ್ದೇನೆ. ಇತ್ತೀಚೆಗೆ ನನ್ನೊಂದಿಗೆ ಯಾರು ಸಂಪರ್ಕದಲ್ಲಿದ್ದಾರೋ ಅವರು ಪರೀಕ್ಷೆ ಮಾಡಿಕೊಳ್ಳಿ' ಎಂದು ಪಠಾಣ್ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

ಇತ್ತೀಗಷ್ಟೇ ಮುಕ್ತಾಯಗೊಂಡ ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ ಟಿ20 ಟೂರ್ನಿಯಲ್ಲಿ ಭಾರತೀಯ ಈ ಎಲ್ಲಾ ಆಟಗಾರರೂ ಇಂಡಿಯಾ ಲೆಜೆಂಡ್ಸ್‌ ಪರ ಸ್ಪರ್ಧಿಸಿದ್ದರು. ಫೈನಲ್‌ ಪಂದ್ಯದಲ್ಲಿ ಶ್ರೀಲಂಕಾ ಲೆಜೆಂಡ್ಸ್ ಮತ್ತು ಇಂಡಿಯಾ ಲೆಜೆಂಡ್ಸ್‌ ಕಾದಾಡಿತ್ತು. ಇದರಲ್ಲಿ ಇಂಡಿಯನ್ ಲೆಜೆಂಡ್ಸ್‌ ಚಾಂಪಿಯನ್ಸ್ ಪಟ್ಟ ಅಲಂಕರಿಸಿತ್ತು.

Story first published: Tuesday, March 30, 2021, 8:05 [IST]
Other articles published on Mar 30, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+