ಸಚಿನ್ ತೆಂಡೂಲ್ಕರ್ ಸೃಷ್ಟಿಸಿದ ಈ 3 ದಾಖಲೆಗಳನ್ನು ಮುರಿಯಲು ವಿರಾಟ್ ಕೊಹ್ಲಿಗೆ ಅಸಾಧ್ಯ?
ಭಾರತದ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಅನೇಕ ದಾಖಲೆಗಳನ್ನು ಮಾಡಿದ್ದಾರೆ. ಅವರು ತಮ್ಮ ಕ್ರಿಕೆಟ್ ವೃತ್ತಿ ಜೀವನದಲ್ಲಿ ಸೃಷ್ಟಿಸಿದ ಹೊಸ ಹೊಸ ದಾಖಲೆಗಳಿಂದ 'ಕ್ರಿಕೆಟ್ ದೇವರು' ಎಂಬ ಬಿರುದನ್ನು ಅಭಿಮಾನಿಗಳಿಂದ ಪಡೆದಿದ್ದಾರೆ.
ಸಚಿನ್ ಮಾಡಿರುವ ದಾಖಲೆಗಳನ್ನು ಯಾರೂ ಮುರಿಯಲು ಸಾಧ್ಯವಾಗಿಲ್ಲ. ಆದರೆ ಈ ಎಲ್ಲಾ ದಾಖಲೆಗಳನ್ನು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ಮುರಿಯಬಲ್ಲ ಆಟಗಾರರಾಗಬಹುದು ಎಂದು ಕ್ರಿಕೆಟ್ ಪಂಡಿತರು ಭಾವಿಸಿದ್ದರು.

ಕೊಹ್ಲಿ ಈಗಾಗಲೇ ಸಚಿನ್ ಅವರ ಹಲವು ದಾಖಲೆಗಳನ್ನು ಮುರಿದಿದ್ದಾರೆ. ಕೆಲವನ್ನು ರೋಹಿತ್ ಕೂಡ ರೆಕಾರ್ಡ ಬ್ರೇಕ್ ಮಾಡಿದ್ದಾರೆ. ಆದರೆ ಈ ಇಬ್ಬರು ಸಚಿನ್ ಅವರ ಕೆಲವು ದಾಖಲೆಗಳಿಗೆ ಹತ್ತಿರವಾಗಿದ್ದರೂ ಸಹ ಮುರಿಯಲು ಸಾಧ್ಯವಾಗಿಲ್ಲ. ಅದರಲ್ಲೂ ಬಹಳ ಹತ್ತಿರವಿರುವ ಕೊಹ್ಲಿ ಮುರಿಯಲು ಸಾಧ್ಯವಾಗದ ಸಚಿನ್ ಅವರ ಕೆಲವು ದಾಖಲೆಗಳ ಬಗ್ಗೆ ಇಲ್ಲಿದೆ ಮಾಹಿತಿ.
ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ಗಳು
ಸಚಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ 15,921 ರನ್ ಗಳಿಸಿದ್ದಾರೆ. ಇಲ್ಲವರಗೂ ಇಷ್ಟೊಂದು ರನ್ ಕಲೆ ಹಾಕಲು ಸಾಧ್ಯವಾಗಿಲ್ಲ. ಆದರೆ ಈ ದಾಖಲೆ ಸನಿಹವಂತೂ ಇಂಗ್ಲೆಂಡ್ ಸ್ಟಾರ್ ಬ್ಯಾಟರ್ ಜೋ ರೂಟ್ ಇದ್ದಾರೆ.
ವರು ಟೆಸ್ಟ್ ಕ್ರಿಕೆಟ್‌ನಲ್ಲಿ 12,131 ರನ್ ಬಾರಿಸಿದ್ದಾರೆ.
ಈಗ ಸಚಿನ್ ದಾಖಲೆ ಮುರಿಯಲು ರೂಟ್‌ಗೆ 3,790 ರನ್‌ಗಳ ಅವಶ್ಯಕತೆ ಇದೆ. ಈ ರನ್ ಪೂರೈಸಲು ಕನಿಷ್ಠ 40 ಟೆಸ್ಟ್ ಪಂದ್ಯಗಳು ಬೇಕಾಗಬಹುದು. ಈ ಎಲ್ಲಾ ಪಂದ್ಯಗಳಲ್ಲಿ ರೂಟ್ ರನ್ ಗಳಿಸುವುದು ಪ್ರಮುಖವಾಗಿದೆ.
ಮತ್ತೊಂದೆಡೆ ರನ್ ಮಷಿನ್ ಖ್ಯಾತಿಯ ವಿರಾಟ್ ಕೊಹ್ಲಿ ಇನ್ನೂ ಕೆಲವು ವರ್ಷಗಳ ಕಾಲ ಕ್ರಿಕೆಟ್‌ನಲ್ಲಿ ಮುಂದುವರಿದು ಅದ್ಭುತ ಪ್ರದರ್ಶನ ನೀಡಬೇಕಾಗುತ್ತದೆ. ಕೊಹ್ಲಿ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಇದುವರೆಗೆ ಕೇವಲ 8848 ರನ್ ಗಳಿಸಿದ್ದಾರೆ.
ಸದ್ಯಕ್ಕೆ 35 ವರ್ಷದ ಕೊಹ್ಲಿ ಫಿಟ್ ಆಗಿದ್ದರೆ, ಮುಂದಿನ ಮೂರು ವರ್ಷಗಳ ಕಾಲ ಕ್ರಿಕೆಟ್ ಆಡಬಹುದು. ಆದರೆ ಅವರಿಗೆ ಹೆಚ್ಚಿನ ಟೆಸ್ಟ್ ಆಡಲು ಅವಕಾಶವಿಲ್ಲ. ಹೀಗಾಗಿ ಟೆಸ್ಟ್ ಕ್ರಿಕೆಟ್‌ನಲ್ಲಿ ಸಚಿನ್ ಮಾಡಿರುವ ಅತಿ ಹೆಚ್ಚು ರನ್ ದಾಖಲೆಯನ್ನು ಮುರಿಯುವುದು ಅಸಾಧ್ಯವಾಗಿದೆ.
ಅತಿ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳು
ಕ್ರಿಕೆಟ್‌ನ ಎಲ್ಲಾ ಮೂರು ಮಾದರಿಗಳಲ್ಲಿ ಸಚಿನ್ ಒಟ್ಟು 664 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಇತ್ತ ಕೊಹ್ಲಿ 533 ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ್ದಾರೆ. ಸಚಿನ್ ಅವರ ದಾಖಲೆಯನ್ನು ಮುರಿಯಲು ಕೊಹ್ಲಿ 133 ಪಂದ್ಯಗಳನ್ನು ಆಡಬೇಕಾಗಿದೆ.
ಈಗಾಗಲೇ ಕೊಹ್ಲಿ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಮುಂದಿನ ವರ್ಷಗಳಲ್ಲಿ ಹೆಚ್ಚು ಏಕದಿನ ಪಂದ್ಯಗಳನ್ನು ಆಡಿದ ನಂತರವೂ, ಸಚಿನ್ ದಾಖಲೆ ಮುರಿಯುವುದು ಪ್ರಶ್ನಾರ್ಥಕ ಚಿಹ್ನೆ ಆಗಿದೆ.
ಟೆಸ್ಟ್ ಕ್ರಿಕೆಟ್ ದಾಖಲೆ
200 ಟೆಸ್ಟ್ ಪಂದ್ಯಗಳನ್ನು ಆಡಿದ ವಿಶ್ವದ ಏಕೈಕ ಕ್ರಿಕೆಟಿಗ ಸಚಿನ್. ರೆಡ್ ಬಾಲ್ ಕ್ರಿಕೆಟ್‌ನಲ್ಲಿ ಕೊಹ್ಲಿ 113 ಪಂದ್ಯಗಳನ್ನು ಆಡಿದ್ದಾರೆ. 2027ರ ಜುಲೈವರೆಗೆ ಭಾರತ ಗರಿಷ್ಠ 29 ಟೆಸ್ಟ್ ಪಂದ್ಯಗಳನ್ನು ಆಡಬೇಕಿರುವುದರಿಂದ ಸಚಿನ್ ಅವರ ಈ ದಾಖಲೆಯನ್ನು ಕೊಹ್ಲಿ ಮುರಿಯುವ ಸಾಧ್ಯತೆ ತೀರಾ ಕಡಿಮೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications