RCB ಪರ 5 ವಿದೇಶಿ ಆಟಗಾರರು ಕಣಕ್ಕೆ ಇಳಿಯುತ್ತಾರಾ? ಎಂಬ ಪ್ರಶ್ನೆಗೆ ವಿರಾಟ್ ಉತ್ತರ
ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಸದ್ಯ ಐಪಿಎಲ್‌ನಲ್ಲಿ ಆಡುತ್ತಿದ್ದಾರೆ. ಇವರು ಟಿ20 ಫಾರ್ಮೆಟ್ ಹಾಗೂ ಟೆಸ್ಟ್ ಕ್ರಿಕೆಟ್‌ಗೆ ಈಗಾಗಲೇ ವಿದಾಯ ಹೇಳಿದ್ದಾರೆ. ಭಾರತದ ಪರ ಇವರು ಏಕದಿನ ಫಾರ್ಮೆಟ್‌ನಲ್ಲಿ ಮಾತ್ರ ಆಡುತ್ತಿದ್ದಾರೆ. ವಿರಾಟ್ ಕೊಹ್ಲಿ ತಮ್ಮ ಕುಟುಂಬ ಸಮೇತ ಇಂಗ್ಲೆಂಡ್‌ಗೆ ಶಿಫ್ಟ್ ಆಗಿದ್ದಾರೆ. ಇವರು ಭಾರತದ ಪರ ಪಂದ್ಯಗಳು ಆಡುವಾಗ ಇಲ್ಲಿಗೆ ಬರುತ್ತಾರೆ. ಇವರು ಲಂಡನ್‌ಗೆ ಶಿಫ್ಟ್ ಆದ ಬಗ್ಗೆ ಹಲವು ಪ್ರಶ್ನೆಗಳು ಅಭಿಮಾನಿಗಳ ಎದ್ದಿದ್ದವು. ಅದಕ್ಕೆ ವಿರಾಟ್ ತಮ್ಮದೇ ಧಾಟಿಯಲ್ಲಿ ಉತ್ತರ ನೀಡಿದ್ದಾರೆ.
ವಿರಾಟ್ ಕೊಹ್ಲಿ ಅವರು ಸನ್‌ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡದ ಜಯದಲ್ಲಿ ಮಿಂಚಿದ್ದರು. ಇವರು ಈ ವರ್ಷವೂ ಅಭಿಮಾನಿಗಳನ್ನು ರಂಜಿಸಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಆದರೆ ಅಭಿಮಾನಿಗಳು ಮಾತ್ರ ಇವರನ್ನು ಟ್ರೋಲ್ ಮಾಡುವುದನ್ನು ಮುಂದುವರಿಸಿದ್ದಾರೆ. ವಿರಾಟ್ ಕೊಹ್ಲಿ ಏಪ್ರಿಲ್ 5 ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯಕ್ಕೆ ತಯಾರಿ ನಡೆಸುತ್ತಿದ್ದಾರೆ. ಈ ಪಂದ್ಯಕ್ಕೂ ಮುನ್ನ ವಿರಾಟ್ ಟ್ರೋಲರ್‌ಗಳಿಗೆ ಉತ್ತರ ನೀಡಿದ್ದಾರೆ.

ವಿರಾಟ್ ಕೊಹ್ಲಿ ಅವರು ತಮ್ಮ ಬಗ್ಗೆ ಇದ್ದ ಟ್ರೋಲ್‌ಗಳಿಗೆ ತಮ್ಮದೇ ಧಾಟಿಯಲ್ಲಿ ಉತ್ತರ ನೀಡಿದ್ದಾರೆ. ಆರ್‌ಸಿಬಿ ಐದು ವಿದೇಶಿ ಆಟಗಾರರೊಂದಿಗೆ ಕಣಕ್ಕೆ ಇಳಿಯುತ್ತಿದೆ ಎಂದು ಅಭಿಮಾನಿಗಳು ಪ್ರಶ್ನೆ ಕೇಳುತ್ತಿದ್ದಾರೆ ಎಂದು ಸಂದರ್ಶಕ ವಿರಾಟ್‌ಗೆ ಪ್ರಶ್ನೆ ಕೇಳಿದಾಗ ನಗಲು ಆರಂಭಿಸಿದರು. ಕಿಂಗ್ ಕೊಹ್ಲಿ ಮೌನ ಮುರಿದು ಹಾಸ್ಯಮಯ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ಐದು ವಿದೇಶಿ ಆಟಗಾರರು ಆಡುತ್ತಿದ್ದಾರಾ?
ಅಭಿಮಾನಿಗಳು ಹೀಗೆ ಏಕೆ ಹೇಳುತ್ತಿದ್ದಾರೆ ಎಂದು ನನಗೆ ತಿಳಿಯುತ್ತಿಲ್ಲ. ನಿಮಗೆ ನಾನು ವಿದೇಶಿ ಆಟಗಾರ ಎಂದು ಎನಿಸುತ್ತದಾ ಎಂದು ಸಂದರ್ಶಕನನ್ನೇ ವಿರಾಟ್ ಕೊಹ್ಲಿ ಕೇಳಿದರು. ಅಲ್ಲದೆ ಈ ಪ್ರಶ್ನೆಯನ್ನು ವಿದೇಶಿ ಆಟಗಾರರಿಗೆ ಹೋಗಿ ಕೇಳಿ. ನಾನು ವಿದೇಶಿ ಆಟಗಾರನಲ್ಲ. ಈಗ ವಿರಾಟ್ ಕೊಹ್ಲಿ ನೀಡಿದ ಉತ್ತರ ಭಾರೀ ವೈರಲ್ ಆಗುತ್ತಿದೆ.
ಚೇಸಿಂಗ್ ಸ್ಟಾರ್ ಖ್ಯಾತಿಯ ವಿರಾಟ್ ಕೊಹ್ಲಿ ಬಹು ಸಮಯದಿಂದ ತಮ್ಮ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಲಂಡನ್‌ನಲ್ಲಿ ಕಾಲ ಕಳೆಯುತ್ತಿದ್ದಾರೆ. ವಿರಾಟ್, ಭಾರತದಲ್ಲಿ ನಿರಂತರ ಪ್ರಚಾರವನ್ನು ತಪ್ಪಿಸಲು ಈ ಮಾರ್ಗವನ್ನು ಅನುಸರಿಸುತ್ತಿದ್ದಾರೆ. ಇವರು ಈ ಬದಲಾವಣೆ ಅವರ ಆಟದ ಮೇಲೆ ಬದಲಾವಣೆ ಬೀರಿಲ್ಲ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿ ಹಾಲಿ ಚಾಂಪಿಯನ್ ಪ್ರಶಸ್ತಿಯೊಂದಿಗೆ ಕಣಕ್ಕೆ ಇಳಿಯುತ್ತಿದೆ. ಈ ಬಾರಿಯೂ ಎರಡನೇ ಬಾರಿ ಟ್ರೋಫಿ ಗೆಲ್ಲುವ ಕನಸು ರಜತ್ ಪಾಟಿದಾರ್ ಅವರದ್ದಾಗಿದೆ. ಈ ಮೂಲಕ ಆರ್‌ಸಿಬಿ ಸತತ ಎರಡನೇ ಬಾರಿಗೆ ಟ್ರೋಫಿ ಗೆಲ್ಲುವ ಕನಸು ಕಾಣುತ್ತಿದೆ. ವಿರಾಟ್ ಕೊಹ್ಲಿ ಈ ಐಪಿಎಲ್‌ನಲ್ಲಿ ಭರ್ಜರಿ ಪ್ರದರ್ಶನ ನೀಡುವ ವಿಶ್ವಾಸ ಹೊಂದಿದ್ದಾರೆ. ಈ ಮೂಲಕ ಹಲವು ದಾಖಲೆಗಳನ್ನು ನಿರ್ಮಿಸುವ ಕನಸು ಹೊಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications