Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ ಹರಾಜಿನಲ್ಲಿ ಕೊಹ್ಲಿ, ಬುಮ್ರಾ, ರೋಹಿತ್ 100 ಕೋಟಿಗೆ ಖರೀದಿ

2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 17ನೇ ಆವೃತ್ತಿಯ ಆರಂಭಕ್ಕೆ ದಿನಗಣನೆ ಶುರುವಾಗಿದೆ. ವಿಶ್ವದ ಶ್ರೀಮಂತ ಕ್ರಿಕೆಟ್ ಪಂದ್ಯಾವಳಿಯಲ್ಲಿ ದುಬಾರಿ ಟ್ರೋಫಿಗಾಗಿ ಎಲ್ಲಾ ಹತ್ತು ಫ್ರಾಂಚೈಸಿಗಳು ತಮ್ಮ ತಂಡಗಳೊಂದಿಗೆ ಸಜ್ಜಾಗುತ್ತಿವೆ.

ಮಾರ್ಚ್ 22ರಂದು ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡಗಳು ಮುಖಾಮುಖಿಯಾಗುವ ಮೂಲಕ ಅದ್ಧೂರಿ ಚಾಲನೆ ಸಿಗಲಿದೆ.

Is Virat Kohli Rohit and Bumrah Getting 100 Crores from IPL Auction Know What Robin Uthappa Says

ಕೆಲವು ತಂಡಗಳು ಕಳೆದ ಆವೃತ್ತಿಯ ತಂಡವನ್ನೇ ಹೋಲುತ್ತವೆಯಾದರೂ, ಕೆಲವು ತಂಡಗಳು ಕಳೆದ ವರ್ಷ ನಡೆದ 2024ರ ಐಪಿಎಲ್ ಮಿನಿ ಹರಾಜಿನಲ್ಲಿ ಕೆಲವು ದೊಡ್ಡ ಖರೀದಿಗಳಿಗೆ ಹೋಗಿವೆ.

ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ ಮತ್ತು ಮಿಚೆಲ್ ಸ್ಟಾರ್ಕ್ ಅವರು ಕ್ರಮವಾಗಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳಿಗೆ 24.75 ಕೋಟಿ ರೂಪಾಯಿ ಮತ್ತು 20.50 ಕೋಟಿ ರೂಪಾಯಿ ಗಡಿ ದಾಟಿದ್ದು ಇದೇ ಮೊದಲು.

ಇದೀಗ ಐಪಿಎಲ್ ಹರಾಜಿನಲ್ಲಿ ದೊಡ್ಡ ಸಂಭಾವನೆ ಬಗ್ಗೆ ಮಾತನಾಡಿರುವ ಭಾರತ ಕ್ರಿಕೆಟ್ ತಂಡದ ಮಾಜಿ ಸ್ಟಾರ್ ರಾಬಿನ್ ಉತ್ತಪ್ಪ, ಯಾವುದೇ ಸಂಬಳದ ಮಿತಿ ಇಲ್ಲದಿದ್ದರೆ 10 ಭಾರತೀಯ ಆಟಗಾರರು 100 ಕೋಟಿ ರೂಪಾಯಿ ಗಡಿ ದಾಟಬಹುದು ಎಂದು ಹೇಳಿದ್ದಾರೆ

Is Virat Kohli Rohit and Bumrah Getting 100 Crores from IPL Auction Know What Robin Uthappa Says

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಪ್ರಸ್ತುತ ಎಲ್ಲಾ ಹತ್ತು ಫ್ರಾಂಚೈಸಿಗಳು ತಲಾ 100 ಕೋಟಿ ರೂಪಾಯಿಗಳ ಪರ್ಸ್ ಮೌಲ್ಯವನ್ನು ಅನುಮತಿಸಲಾಗಿದೆ.

"ನೀವು ಬಹಿರಂಗ ಐಪಿಎಲ್ ಹರಾಜನ್ನು ಹೊಂದಿದ್ದರೆ ಮತ್ತು ಪ್ರತಿ ಫ್ರಾಂಚೈಸಿಯ ಪರ್ಸ್‌ಗೆ ಯಾವುದೇ ಮಿತಿಯಿಲ್ಲದಿದ್ದರೆ, ಪರ್ಸ್ ಮೌಲ್ಯ 500 ಕೋಟಿ ಅಥವಾ 1000 ಕೋಟಿ ಎಂದು ಭಾವಿಸೋಣ, ನಮ್ಮಲ್ಲಿ 10 ಆಟಗಾರರು 100 ಕೋಟಿ ರೂಪಾಯಿಗೂ ಹೆಚ್ಚು ಗಳಿಸಬಹುದು," ಎಂದು ಸಿಎಸ್‌ಕೆ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಹೇಳಿದರು.

"100 ಕೋಟಿ ರೂಪಾಯಿಗೂ ಹೆಚ್ಚು ಗಳಿಸುವ ಒಬ್ಬ ಆಟಗಾರರಲ್ಲಿ ಜಸ್ಪ್ರೀತ್ ಬುಮ್ರಾ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ ಹೆಸರು ಇರಲಿವೆ".

"ರವೀಂದ್ರ ಜಡೇಜಾ, ಕೆಎಲ್ ರಾಹುಲ್, ರುತುರಾಜ್ ಗಾಯಕ್ವಾಡ್ ಖಂಡಿತವಾಗಿಯೂ 80ರಿಂದ 100 ಕೋಟಿ ರೂಪಾಯಿ ಪಡೆಯುತ್ತಾರೆ. ಶುಭ್ಮನ್ ಗಿಲ್ ಮತ್ತು ಯಶಸ್ವಿ ಜೈಸ್ವಾಲ್ ಕೂಡ 100 ಕೋಟಿ ರೂಪಾಯಿಗಿಂತ ಹೆಚ್ಚು ಜೇಬಿಗಿಳಿಸುತ್ತಾರೆ," ಎಂದು ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ತಿಳಿಸಿದ್ದಾರೆ.

ಕರ್ನಾಟಕದ ರಾಬಿನ್ ಉತ್ತಪ್ಪ ಅವರು ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್, ಚೆನ್ನೈ ಸೂಪರ್ ಕಿಂಗ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ರಾಜಸ್ಥಾನ್ ರಾಯಲ್ಸ್ ಸೇರಿದಂತೆ ಇತರ ತಂಡಗಳಿಗಾಗಿ ಆಡಿದ್ದಾರೆ. ಅವರು 2007ರಲ್ಲಿ ಟಿ20 ವಿಶ್ವಕಪ್ ಗೆದ್ದ ಭಾರತೀಯ ಕ್ರಿಕೆಟ್ ತಂಡದ ಸದಸ್ಯರಾಗಿದ್ದರು.

Story first published: Wednesday, March 13, 2024, 14:05 [IST]
Other articles published on Mar 13, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+