Asia Cup 2023: ದುಸ್ಥಿತಿಯಲ್ಲಿದ್ದ ತಂಡಕ್ಕೆ ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ 'ಆಪತ್ಬಾಂಧವರು'
ಭಾರತ ತಂಡದ ಅಗ್ರ ಕ್ರಮಾಂಕದ ಬ್ಯಾಟ್ಸಮ್ಯಾನ್ ಗಳ ನಿರಾಶಾದಾಯಕ ಪ್ರದರ್ಶನ ನೀಡಿದರೂ, ಮಧ್ಯಮ ಕ್ರಮಾಂಕದ ಭರವಸೆಯ ಆಟಗಾರರು ಆಡಿದ ಕೆಚ್ಚದೆಯ ಬ್ಯಾಟಿಂಗ್ ನೆರವಿನಿಂದ ಟೀಮ್ ಇಂಡಿಯಾ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಸ್ಪರ್ಧಾತ್ಮಕ ಮೊತ್ತವನ್ನು ಕಲೆ ಹಾಕಿದೆ.
14.1 ಓವರುಗಳಲ್ಲಿ ಪ್ರಮುಖ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಇಶಾನ್ ಕಿಶನ್ ಹಾಗೂ ಉಪನಾಯಕ ಹಾರ್ದಿಕ್ ಪಾಂಡ್ಯ ಜವಾಬ್ದಾರಿ ಅರಿತು ಬ್ಯಾಟಿಂಗ್ ಮಾಡಿದರು. ಪರಿಣಾಮ ಸಂಕಷ್ಟದಲ್ಲಿದ್ದ ತಂಡಕ್ಕೆ ಈ ಜೋಡಿ ಸಂಕಷ್ಟ ಮೋಚಕ ರೀತಿ ಆಟವಾಡಿತು. ತಂಡದಲ್ಲಿ ಸ್ಥಾನ ಸಿಗುವುದೇ ಅನುಮಾನ ಎಂಬ ಮಾತುಗಳು ಕೇಳಿ ಬಂದಾಗ, ಇಶಾನ್ ಕಿಶನ್ ಆಡಿದ ಆಟ ನಿಜಕ್ಕೂ ಅಭಿಮಾನಿಗಳಿಗೆ ಮುದ ನೀಡಿತು.

ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಸರಣಿಯಲ್ಲಿ ಬಿಟ್ಟಿದ್ದ ರನ್ ದಾಹವನ್ನು, ಶನಿವಾರ ಮುಂದುವರೆಸಿದ ಇಶಾನ್ ಅಮೋಘ ಇನಿಂಗ್ಸ್ ಕಟ್ಟಿದರು. ಅಲ್ಲದೆ ತಮ್ಮನ್ನೂ ಸಹ ತಂಡದಲ್ಲಿ ಪರಿಗಣಿಸುವಂತೆ ಬ್ಯಾಟ್ ಮಾಡಿದರು. ನಿಜಕ್ಕೂ ಯುವ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ತಂಡದಲ್ಲಿ ಟ್ರಬಲ್ ಶೂಟರ್ ಪಾತ್ರವನ್ನು ನಿಭಾಯಿಸಿದರು.
ಇಶಾನ್ ಕಿಶನ್ ಏಕದಿನದಲ್ಲಿ ಸತತ ನಾಲ್ಕನೇ ಅರ್ಧಶತಕವನ್ನು ಪೂರ್ಣಗೊಳಿಸಿದರು. ಮತ್ತು ಹಾರ್ದಿಕ್ ಪಾಂಡ್ಯ ಅವರೊಂದಿಗೆ ಸ್ಕೋರ್ ಅನ್ನು ಹಿಗ್ಗಿಸುತ್ತಾ ಸಾಗಿದರು. ಇದು ಇಶಾನ್ ಅವರ ಏಕದಿನ ವೃತ್ತಿ ಜೀವನದಲ್ಲಿ 7ನೇ ಅರ್ಧಶತಕವಾಗಿದೆ. ಇಶಾನ್ ಬ್ಯಾಟಿಂಗ್ ಗೆ ಇಳಿದಾಗ ಟೀಂ ಇಂಡಿಯಾ 48 ರನ್ ಗಳಿಸುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡಿತ್ತು.
ಇಶಾನ್ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗಿಗೆ
ಈ ಪಂದ್ಯದಲ್ಲಿ ಇಶಾನ್ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗಿಗೆ ಬಂದರು. ಇಶಾನ್ ಕಿಶನ್ ಒಂದು ತುದಿಯಿಂದ ರನ್ ವೇಗವನ್ನು ಕಾಯ್ದುಕೊಂಡರು ಮತ್ತು ಪಾಕಿಸ್ತಾನಿ ಬೌಲರ್ ಗಳು ತಮ್ಮ ಮೇಲೆ ಒತ್ತಡ ಹೇರಲು ಅವಕಾಶ ನೀಡಲಿಲ್ಲ. ತಂಡ 66 ರನ್ ಗಳಿಸಿದ ಶುಬ್ಮನ್ ಗಿಲ್ ರೂಪದಲ್ಲಿ ನಾಲ್ಕನೇ ವಿಕೆಟ್ ಪತನವಾಯಿತು. ಇಲ್ಲಿಂದ ಕಿಶನ್, ಉಪನಾಯಕ ಹಾರ್ದಿಕ್ ಪಾಂಡ್ಯ ಜತೆಗೂಡಿ ಸ್ಕೋರ್ 100ರ ಗಡಿ ದಾಟುವ ಮೂಲಕ ಒತ್ತಡ ತಗ್ಗಿಸಿದರು.
ಈ ಜೋಡಿ ಐದನೇ ವಿಕೆಟಿಗೆ 141 ಎಸೆತಗಳಲ್ಲಿ 138 ರನ್ ಸಿಡಿಸಿ ತಂಡಕ್ಕೆ ಆಧಾರವಾಯಿತು. ಇಶಾನ್ 9 ಬೌಂಡರಿ, 2 ಸಿಕ್ಸರ್ ಸಹಯದಿಂದ 82 ರನ್ ಬಾರಿಸಿದರೆ, ಹಾರ್ದಿಕ್ ಪಾಂಡ್ಯ 7 ಬೌಂಡರಿ, 1 ಸಿಕ್ಸರ್ ಸಹಾಯದಿಂದ 87 ರನ್ ಸಿಡಿಸಿದರು. ಪಾಕಿಸ್ತಾನ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು.
ಭಾರತ ತಂಡಕ್ಕೆ ಎರಡು ದೊಡ್ಡ ಹೊಡೆತ
ಇದಾದ ಬಳಿಕ ಶಹೀನ್ ಅಫ್ರಿದಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ರೂಪದಲ್ಲಿ ಭಾರತ ತಂಡಕ್ಕೆ ಎರಡು ದೊಡ್ಡ ಹೊಡೆತ ನೀಡಿದರು. ಇದಾದ ಬಳಿಕ ಬ್ಯಾಟಿಂಗ್ ಗೆ ಬಂದ ಶ್ರೇಯಸ್ ಅಯ್ಯರ್ ಕೂಡ ಕೇವಲ 14 ರನ್ ಗಳಿಸಿ ಪೆವಿಲಿಯನ್ ಗೆ ಮರಳಿದರು. ಏಷ್ಯಾಕಪ್ 2023 ರಲ್ಲಿ ಟೀಮ್ ಇಂಡಿಯಾದ ಮೊದಲ ಆಯ್ಕೆಯ ವಿಕೆಟ್ ಕೀಪರ್ ಬ್ಯಾಟ್ಸಮ್ಯಾನ್ ಆಗಲು ಇಶಾನ್ ಕಿಶನ್ ಉತ್ತಮ ಅವಕಾಶವನ್ನು ಹೊಂದಿದ್ದಾರೆ.
ಎಲ್ಲಾ ಮೂರು ಪಂದ್ಯಗಳಲ್ಲಿ ಅರ್ಧಶತಕ
ಈ ಪಂದ್ಯಾವಳಿಗೂ ಮುನ್ನ, ಇಶಾನ್ ವೆಸ್ಟ್ ಇಂಡೀಸ್ ವಿರುದ್ಧದ ODI ಸರಣಿಯ ಎಲ್ಲಾ ಮೂರು ಪಂದ್ಯಗಳಲ್ಲಿ ಅರ್ಧಶತಕ ಬಾರಿಸಿದ್ದರು, ಆದರೆ ಆಗ ಇಶಾನ್ ಆರಂಭಿಕ ಬ್ಯಾಟರ್ ಆಗಿ ಕಣಕ್ಕೆ ಇಳಿದಿದ್ದರು. ತನ್ನ ODI ವೃತ್ತಿ ಜೀವನದಲ್ಲಿ ಮೊದಲ ಬಾರಿಗೆ, ಇಶಾನ್ 5 ನೇ ಸ್ಥಾನದಲ್ಲಿ ಬ್ಯಾಟಿಂಗಿಗೆ ಬಂದಿದ್ದಾರೆ. ಇದಕ್ಕೂ ಮುನ್ನ ಅವರು ತಂಡ 3 ಮತ್ತು 4ರಲ್ಲಿ ಆಡಿದ್ದಾರೆ. (ಚಿತ್ರ : ಪಿಟಿಐ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications