'ಸಾಮಾನ್ಯ ಅಪಘಾತವೆಂದು ಭಾವಿಸಿದ್ದೆ'; ರಿಷಭ್ ಪಂತ್ ಕಾರು ಅಪಘಾತದ ಬಗ್ಗೆ ಇಶಾನ್ ಕಿಶನ್ ಪ್ರತಿಕ್ರಿಯೆ

ಭಾರತ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಮತ್ತು ಆರಂಭಿಕ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಅವರು ಡಿಸೆಂಬರ್ 30ರಂದು ನಡೆದ ರಿಷಭ್ ಪಂತ್ ಅವರ ಭೀಕರ ಕಾರು ಅಪಘಾತದ ಬಗ್ಗೆ ತಮ್ಮ ಮೊದಲ ಪ್ರತಿಕ್ರಿಯೆಯನ್ನು ನೀಡಿದರು.
ಇದು ಸಾಮಾನ್ಯ ಅಪಘಾತ ಎಂದು ನಾನು ಮೊದಲು ಭಾವಿಸಿದ್ದೆ ಮತ್ತು ಪ್ರೇಕ್ಷಕರು ಅದನ್ನು ದೊಡ್ಡ ವಿಷಯ ಮಾಡುತ್ತಿದ್ದರು. ಆದರೆ ಆ ಸುದ್ದಿ ತಿಳಿದಾಗ ತನಗೆ ನಿಜವಾಗಿಯೂ ಭಯವಾಯಿತು ಎಂದರು.
ಕಳೆದ ಶುಕ್ರವಾರ ಮುಂಜಾನೆ ದೆಹಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿ ಪಂತ್ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆಯಿತು ಮತ್ತು ಹೊಸ ವರ್ಷಕ್ಕೆ ಮೊದಲು ತನ್ನ ತಾಯಿಗೆ ಸರ್ಪ್ರೈಸ್ ನೀಡುವ ಅವರ ಯೋಜನೆ ವಿಫಲವಾಗಿತ್ತು.
ನಂತರ ಭಾರತದ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್‌ನನ್ನು ರೂರ್ಕಿ ಬಳಿಯ ಆಸ್ಪತ್ರೆಯ ತುರ್ತು ವಿಭಾಗಕ್ಕೆ ಕರೆದೊಯ್ಯಲಾಯಿತು. ಇದೀಗ ಚಿಕಿತ್ಸೆಗೆ ರಿಷಭ್ ಪಂತ್ ಸ್ಪಂದಿಸುತ್ತಿದ್ದು, ಬೇಗ ಗುಣಮುಖರಾಗುವ ಭರವಸೆಯನ್ನು ವೈದ್ಯರು ನೀಡಿದ್ದಾರೆ.
ರಣಜಿ ಟ್ರೋಫಿ ಪಂದ್ಯದ ವೇಳೆ ರಿಷಭ್ ಪಂತ್ ಅಪಘಾತದ ಬಗ್ಗೆ ತಿಳಿದಾಗ ನನ್ನ ಹೃದಯ ಬಡಿತ ಎಷ್ಟು ವೇಗವಾಗಿತ್ತು ಎಂದು ನನಗೇ ತಿಳಿದಿರಲಿಲ್ಲ. ಆದರೆ ಪಂತ್ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಇಶಾನ್ ಕಿಶನ್ ಹಾರೈಸಿದರು.

"ನಾನು ಅಪಘಾತದ ಸುದ್ದಿಯನ್ನು ಮೊದಲು ಕೇಳಿದಾಗ, ಇದು ಸಾಮಾನ್ಯ ಅಪಘಾತ ಎಂದು ಭಾವಿಸಿದ್ದೆ. ಪ್ರೇಕ್ಷಕರು ಅದನ್ನು ದೊಡ್ಡ ವಿಷಯ ಮಾಡುತ್ತಿದ್ದರು. ಆದರೆ ನಾನು ಸಂಪೂರ್ಣವಾಗಿ ಸುದ್ದಿ ತಿಳಿದಾಗ ನಿಜವಾಗಿಯೂ ಹೆದರಿದ್ದೆ. ರಣಜಿ ಟ್ರೋಫಿಯ ಸಮಯದಲ್ಲಿ ನನ್ನ ಹೃದಯ ಬಡಿತ ಎಷ್ಟು ವೇಗವಾಗಿತ್ತು ಎಂದು ನನಗೆ ತಿಳಿದಿಲ್ಲ. ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ ಮತ್ತು ಅವರಿಗೆ ಶುಭ ಹಾರೈಸುತ್ತೇನೆ," ಎಂದು ಇಶಾನ್ ಕಿಶನ್ ತಿಳಿಸಿದರು.
ಇದಕ್ಕೂ ಮೊದಲು ಬಿಸಿಸಿಐ ಹಂಚಿಕೊಂಡ ವೀಡಿಯೊದಲ್ಲಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮಾತನಾಡಿ, "ಹೇ ರಿಷಭ್, ನೀವು ಉತ್ತಮವಾಗಿ ಚೇತರಿಸಿಕೊಳ್ಳುತ್ತಿದ್ದೀರಿ ಮತ್ತು ನೀವು ಶೀಘ್ರದಲ್ಲೇ ಗುಣಮುಖರಾಗುತ್ತೀರಿ ಎಂದು ಭಾವಿಸುತ್ತೇನೆ. ಕಳೆದ ಒಂದು ವರ್ಷದಲ್ಲಿ ನಿಮ್ಮ ಕೆಲವು ಶ್ರೇಷ್ಠ ಆಟ ಆಡುವುದನ್ನು ನೋಡುವ ಸೌಭಾಗ್ಯ ನನಗೆ ಸಿಕ್ಕಿದೆ".
"ನಾವು ಕಷ್ಟದ ಸಂದರ್ಭಗಳಲ್ಲಿ ಇದ್ದಾಗ, ಭಾರತೀಯ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ನೀವು ಆಡಿದ ಇನ್ನಿಂಗ್ಸ್ ಎಂದೂ ಮರೆಯುವುದಿಲ್ಲ. ನೀವು ಈಗಿನ ಕಠಿಣ ಪರಿಸ್ಥಿತಿಗಳಿಂದ ಹೊರಬರುವ ಸಾಮರ್ಥ್ಯವನ್ನು ಹೊಂದಿದ್ದೀರಿ ಎಂದು ನನಗೆ ತಿಳಿದಿದೆ. ಇದು ಒಂದು ಸವಾಲಾಗಿದೆ ಮತ್ತು ನೀವು ಆದಷ್ಟು ಬೇಗ ಪುಟಿದೇಳುತ್ತೀರಿ ಎಂದು ನನಗೆ ತಿಳಿದಿದೆ," ಎಂದು ವಿಡಿಯೋದಲ್ಲಿ ರಾಹುಲ್ ದ್ರಾವಿಡ್ ಹಾರೈಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications