ರಾಹುಲ್ ಅಲ್ಲ, ಈತ ODI ಪಂದ್ಯಗಳಲ್ಲಿ ರೋಹಿತ್ ಜೊತೆ ಇನ್ನಿಂಗ್ಸ್ ಆರಂಭಿಸಬೇಕು; ಗೌತಮ್ ಗಂಭೀರ್

ಮುಂಬರುವ ವರ್ಷಗಳಲ್ಲಿ ಏಕದಿನ ಮಾದರಿಯಲ್ಲಿ ರೋಹಿತ್ ಶರ್ಮಾ ಜೊತೆಗೆ ಈ ಯುವ ಬಾಟ್ಸ್‌ಮನ್ ಭಾರತದ ಮೊದಲ ಆಯ್ಕೆಯ ಆರಂಭಿಕ ಆಟಗಾರನಾಗಬೇಕು ಎಂದು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಹೇಳಿದ್ದಾರೆ.
ಚಟ್ಟೋಗ್ರಾಮ್‌ನಲ್ಲಿ ಬಾಂಗ್ಲಾದೇಶದ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಇಶಾನ್ ಕಿಶನ್ ತಮ್ಮ ಮೊದಲ ಏಕದಿನ ಶತಕವನ್ನು ವೃತ್ತಿಜೀವನದ ಅತ್ಯಧಿಕ 210 ರನ್‌ಗಳಾಗಿ ಪರಿವರ್ತಿಸಿದರು.
ವಿಕೆಟ್‌ಕೀಪರ್-ಬ್ಯಾಟರ್ ಆಗಿರುವ ಇಶಾನ್ ಕಿಶನ್ ಚೊಚ್ಚಲ ಏಕದಿನ ದ್ವಿಶತಕವನ್ನು ಕೇವಲ 126 ಎಸೆತಗಳಲ್ಲಿ ಬಾರಿಸಿದರು. ಇದು ಏಕದಿನ ಇತಿಹಾಸದಲ್ಲಿಯೇ ಅತ್ಯಂತ ವೇಗದ ದ್ವಿಶತಕವಾಗಿದೆ. ಈಗ ಶಿಖರ್ ಧವನ್ ಏಕದಿನ ಪಂದ್ಯಗಳಲ್ಲಿ ಆಡುವುದಿಲ್ಲ, ಆದ್ದರಿಂದ ಇಶಾನ್ ಕಿಶನ್ ಓಪನರ್ ಪಾತ್ರವನ್ನು ಮುಂದುವರಿಸಬೇಕು ಎಂದು ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.

ಇನ್ನಿಂಗ್ಸ್ ಆರಂಭಿಸುವವರಲ್ಲಿ ಇಶಾನ್ ಕಿಶನ್ ಮೊದಲ ಆಯ್ಕೆ
"ಹಿಂದಿನ ಇನ್ನಿಂಗ್ಸ್‌ನಲ್ಲಿ ಆತ ದ್ವಿಶತಕ ಗಳಿಸಿದ ಕಾರಣ ನಾವು ಇದೀಗ ಚರ್ಚಿಸುತ್ತಿದ್ದೇವೆ ಎಂದು ನನಗೆ ಆಶ್ಚರ್ಯವಾಗಿದೆ. ಚರ್ಚೆ ಇಲ್ಲಿಗೆ ಮುಗಿದಿದೆ. ಇನ್ನಿಂಗ್ಸ್ ಆರಂಭಿಸುವವರಲ್ಲಿ ಇಶಾನ್ ಕಿಶನ್ ಮೊದಲ ಆಯ್ಕೆಯಾಗಿರಬೇಕು. ಅಡುವ ಹನ್ನೊಂದರ ಬಳಗದಲ್ಲಿ ಈ ಯುವ ಬ್ಯಾಟರ್ ಸ್ಥಾನ ಪಡೆಯಬೇಕು," ಎಂದು ಮಾಜಿ ಎಡಗೈ ಆರಂಭಿಕ ಬ್ಯಾಟರ್ ಗೌತಮ್ ಗಂಭಿರ್ ತಿಳಿಸಿದರು.
ನಾಯಕ ರೋಹಿತ್ ಶರ್ಮಾರ ಆರಂಭಿಕ ಜೊತೆಯಾಟಗಾರನಾಗಿ ಯಾರನ್ನು ನೋಡಲು ಬಯಸುತ್ತೀರಿ ಎಂದು ಕೇಳಿದಾಗ, ಗೌತಮ್ ಗಂಭೀರ್ ಅವರು ಇಶಾನ್ ಕಿಶನ್ ಹೆಸರು ಹೇಳಿದ್ದಾರೆ.

ಕಿಶನ್ 35ನೇ ಓವರ್‌ನಲ್ಲಿ 200 ರನ್ ಗಳಿಸಿದರು
ಜನವರಿ 3ರಿಂದ ಜನವರಿ 15ರವರೆಗೆ ಪ್ರಾರಂಭವಾಗುವ ಶ್ರೀಲಂಕಾ ವಿರುದ್ಧದ ಮೂರು ಏಕದಿನ ಮತ್ತು ಮೂರು ಟಿ20 ಪಂದ್ಯಗಳ ಸರಣಿಗೆ ಇಶಾನ್ ಕಿಶನ್ ಅವರನ್ನು ಭಾರತದ ತಂಡದಲ್ಲಿ ಆಯ್ಕೆ ಮಾಡಲಾಗಿದೆ.
"ಇಶಾನ್ ಕಿಶನ್ 35ನೇ ಓವರ್‌ನಲ್ಲಿ 200 ರನ್ ಗಳಿಸಿದರು. ನೀವು ಇಶಾನ್ ಕಿಶನ್‌ನ ಆಚೆಗೆ ಯಾರನ್ನೂ ನೋಡಲಾಗುವುದಿಲ್ಲ. ಅವರಿಗೆ ಹೆಚ್ಚು ಅವಕಾಶ ನೀಡಬೇಕು, ಅವರನ್ನು ವಿಕೆಟ್ ಕೀಪರ್ ಆಗಿ ಸಹ ಉಳಿಸಿಕೊಳ್ಳಬಹುದು. ಆದ್ದರಿಂದ ಆತ ಭಾರತ ತಂಡಕ್ಕಾಗಿ ಎರಡು ಕೆಲಸಗಳನ್ನು ಮಾಡುತ್ತಾನೆ," ಎಂದು ಗೌತಮ್ ಗಂಭೀರ್ ತಿಳಿಸಿದರು.
ಸೂರ್ಯಕುಮಾರ್ ಯಾದವ್ ಅವರ 50-ಓವರ್‌ಗಳ ಪಂದ್ಯದಲ್ಲಿ ಅವರ ಟಿ20 ಪ್ರದರ್ಶನಗಳಂತೆ ಬ್ಯಾಟಿಂಗ್ ಗಮನಾರ್ಹವಲ್ಲದಿದ್ದರೂ, ಅವರು ಇನ್ನೂ 4ನೇ ಕ್ರಮಾಂಕದಲ್ಲಿ ಅಮೂಲ್ಯ ಆಸ್ತಿಯಾಗಿರಬಹುದು ಎಂದು ಗಂಭೀರ್ ಭಾವಿಸಿದ್ದಾರೆ. ಸೂರ್ಯಕುಮಾರ್ ಯಾದವ್ 16 ಏಕದಿನ ಪಂದ್ಯಗಳಲ್ಲಿ ಕೇವಲ ಎರಡು ಅರ್ಧ ಶತಕಗಳೊಂದಿಗೆ 384 ರನ್ ಗಳಿಸಿದ್ದಾರೆ.

ಶ್ರೇಯಸ್ ಅಯ್ಯರ್ ಐದನೇ ಕ್ರಮಾಂಕದಲ್ಲಿ
"ಬ್ಯಾಟಿಂಗ್ ಇನ್ನಿಂಗ್ಸ್ ತೆರೆಯಲು ರೋಹಿತ್ ಶರ್ಮಾ ಮತ್ತು ಇಶಾನ್ ಕಿಶನ್, ವಿರಾಟ್ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ, ಸೂರ್ಯಕುಮಾರ್ ನಾಲ್ಕರಲ್ಲಿ ಮತ್ತು ಶ್ರೇಯಸ್ ಅಯ್ಯರ್ ಐದನೇ ಕ್ರಮಾಂಕದಲ್ಲಿ ಬರಬೇಕು. ಅವರನ್ನು ಮೀರಿ ಬೇರೊಬ್ಬ ಆಟಗಾರರನ್ನು ನೋಡುವುದು ತುಂಬಾ ಕಷ್ಟ".
"ಕ್ರಿಕೆಟ್‌ನಲ್ಲಿ ಎಲ್ಲ ತಂಡಗಳ ವಿರುದ್ಧವೂ ಅತ್ಯುತ್ತಮವಾಗಲು ಸಾಧ್ಯವಿಲ್ಲ. ಆದರೆ ನೀವು ಅದನ್ನು ನಿರ್ವಹಿಸಲು ಸಮರ್ಥರಾಗಿದ್ದರೆ ಮತ್ತು ನಿಮಗೆ ಅಂಕಿಅಂಶಗಳನ್ನು ನೀಡಿದರೆ ಅವಕಾಶ ನೀಡಲೇಬೇಕಾಗುತ್ತದೆ. ನೀವು 5ನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್‌ನ ಆಚೆಗೆ ನೋಡಲಾಗುವುದಿಲ್ಲ ಮತ್ತು ಹಾರ್ದಿಕ್ ಪಾಂಡ್ಯ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬೇಕು," ಎಂದು ಗೌತಮ್ ಗಂಭೀರ್ ತಮ್ಮ ಭಾರತದ ಆದರ್ಶ ಆಡುವ ಹನ್ನೊಂದರ ಬಳಗವನ್ನು ಹೇಳಿದರು.

ಶ್ರೀಲಂಕಾ ವಿರುದ್ಧದ ಟಿ20 ಮತ್ತು ಏಕದಿನ ಸರಣಿಗೆ ಭಾರತ ತಂಡ
ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಭಾರತ ತಂಡ
ಹಾರ್ದಿಕ್ ಪಾಂಡ್ಯ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ರುತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್ (ಉಪನಾಯಕ), ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಅರ್ಶ್‌ದೀಪ್ ಸಿಂಗ್, ಹರ್ಷಲ್ ಪಟೇಲ್, ಉಮ್ರಾನ್ ಮಲಿಕ್, ಶಿವಂ ಮಾವಿ ಮತ್ತು ಮುಖೇಶ್ ಕುಮಾರ್.
ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ಉಪನಾಯಕ), ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್ ಮತ್ತು ಅರ್ಶ್‌ದೀಪ್ ಸಿಂಗ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications