ಇಶಾಂತ್-ಅಶ್ವಿನ್ ಫಿಟ್ನೆಸ್ ಟೆಸ್ಟ್ ಬಳಿಕ ವಿಂಡೀಸ್ ಟೆಸ್ಟ್ ಗೆ ತಂಡದ ಆಯ್ಕೆ

ಇಶಾಂತ್ ಶರ್ಮಾ-ರವಿಚಂದ್ರನ್ ಅಶ್ವಿನ್ ಗೆ ಸೆಪ್ಟೆಂಬರ್ 29 ರಂದು ಫಿಟ್ನೆಸ್ ಪರೀಕ್ಷೆ | Oneindia Kannada

ನವದೆಹಲಿ, ಸೆಪ್ಟೆಂಬರ್ 26: ಗಾಯಕ್ಕೊಳಗಾಗಿರುವ ಅನುಭವಿ ಆಟಗಾರರಾದ ಇಶಾಂತ್ ಶರ್ಮಾ ಮತ್ತು ರವಿಚಂದ್ರನ್ ಅಶ್ವಿನ್ ಅವರಿಗೆ ಸೆಪ್ಟೆಂಬರ್ 29ರ ಶನಿವಾರ ಫಿಟ್ನೆಸ್ ಟೆಸ್ಟ್ ನಡೆಯಲಿದೆ. ಹೀಗಾಗಿ ಮುಂಬರಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಗೆ ಭಾರತ ತಂಡದ ಆಯ್ಕೆಯನ್ನು ಮುಂದೂಡಲಾಗಿದೆ.
ಅಕ್ಟೋಬರ್ 4ರಿಂದ ಆರಂಭಗೊಳ್ಳಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗಾಗಿ ಭಾರತ ತಂಡವನ್ನು ಆಯ್ಕೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಅನುಭವಿ ಆಟಗಾರರ ಅಗತ್ಯ ತಂಡಕ್ಕಿರುವುದರಿಂದ ಗಾಯಾಳಾಗಿರುವ ಇಶಾಂತ್ ಮತ್ತು ಅಶ್ವಿನ್ ಫಿಟ್ನೆಸ್ ಪರೀಕ್ಷೆಗೆ ಒಳಗಾದ ಬಳಕವೇ ತಂಡದ ಆಯ್ಕೆ ನಡೆಸಲು ಬಿಸಿಸಿಐ ನಿರ್ಧರಿಸಿದೆ.
ಅಶ್ವಿನ್ ಅವರು ಈಗಾಗಲೇ ಪರೀಕ್ಷೆಯ ಸಲುವಾಗಿ ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಇಶಾಂತ್ ಕೂಡ ಶೀಘ್ರ ಅಶ್ವಿನ್ ಅವರನ್ನು ಸೇರಿಕೊಳ್ಳಲಿದ್ದಾರೆ. ಆಯ್ಕೆ ವೇಳೆ ಇಬ್ಬರೂ ತಂಡದಲ್ಲಿ ಸ್ಥಾನ ಗಳಿಸುವ ನಿರೀಕ್ಷೆಯಿದೆ.
Story first published: Thursday, September 27, 2018, 0:08 [IST]
Other articles published on Sep 27, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications