Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸನ್‌ ವಿರುದ್ಧ ಗೆದ್ದರೂ ಗುಜರಾತ್‌ ವೇಗಿಗೆ ಶಾಕ್‌: ರೆಫ್ರಿಯಿಂದ ದಂಡ

ಹೈದರಾಬಾದ್‌ನಲ್ಲಿ ಗುಜರಾತ್‌ ಟೈಟಾನ್ಸ್ ಭರ್ಜರಿ ಪ್ರದರ್ಶನ ನೀಡಿ ಗೆಲುವು ದಾಖಲಿಸಿದೆ. ಈ ಮೂಲಕ ಪ್ರಸಕ್ತ ಐಪಿಎಲ್‌ನಲ್ಲಿ ಹ್ಯಾಟ್ರಿಕ್ ಗೆಲುವಿನ ನಗೆ ಬೀರಿದ ಹಿರಿಮೆ ತಮ್ಮದಾಗಿಸಿಕೊಂಡಿದೆ. ಈ ಮೊದಲು ಈ ಲೀಗ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಈ ಸಾಧನೆ ಮಾಡಿತ್ತು. ಸನ್‌ರೈಸರ್ಸ್‌ ತವರಿನಲ್ಲಿ ಗುಜರಾತ್‌ ಏಳು ವಿಕೆಟ್‌ಗಳ ಗೆಲುವಿನ ಜೋಶ್‌ ಹೆಚ್ಚು ಹೊತ್ತು ಇರಲಿಲ್ಲ. ಕಾರಣ ಜಿಟಿ ತಂಡದ ವೇಗಿಗೆ ದಂಡ ವಿಧಿಸಲಾಗಿದೆ.

ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತಿ ಬ್ಯಾಟ್ ಮಾಡಿದ ಎಸ್‌ಆರ್‌ಎಚ್‌ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 152 ರನ್‌ ಕಲೆ ಹಾಕಿದೆ. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಜಿಟಿ ಇನ್ನು 20 ಎಸೆತ ಬಾಕಿ ಇರುವಂತೆ 7 ವಿಕೆಟ್‌ ಜಯ ದಾಖಲಿಸಿದೆ. ಪಂದ್ಯದ ನಂತರ, ಐಪಿಎಲ್ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಗುಜರಾತ್ ವೇಗಿ ಇಶಾಂತ್ ಶರ್ಮಾ ದಂಡಕ್ಕೆ ಗುರಿಯಾಗಿದ್ದಾರೆ. ಇವರು ಪಂದ್ಯದ ಶುಲ್ಕದ ಶೇಕಡಾ 25 ರಷ್ಟು ದಂಡವನ್ನು ಪಾವತಿಸಬೇಕಿದೆ. ಇವರ ಖಾತೆಗೆ ಒಂದು ಡಿಮೆರಿಟ್ ಪಾಯಿಂಟ್ ಸೇರಿಸಲಾಗಿದೆ.

Ishant Sharma Fined for Code of Conduct Breach After Expensive Spell in GT s Win Over SRH

ಆರ್ಟಿಕಲ್‌ 2.2ರ ಅಡಿಯಲ್ಲಿ ಇಶಾಂತ್ ಶರ್ಮಾ ತಪ್ಪಿತಸ್ಥರೆಂದು ಪರಿಗಣಿಸಲಾಗಿದೆ. ಮೈದಾನದಲ್ಲಿ ಅವರು ಮಾಡಿದ ತಪ್ಪನ್ನು ಇಶಾಂತ್ ಒಪ್ಪಿಕೊಂಡಿದ್ದಾರೆ. ಇವರು 2.2 ರ ಅಡಿಯಲ್ಲಿ ಲೆವೆಲ್ 1 ಮಾಡಿದ್ದಾರೆ. ಅಲ್ಲದೆ ಮ್ಯಾಚ್‌ ರೆಫ್ರಿ ಜಾವಗಲ್‌ ಶ್ರೀನಾಥ್ ಅವರ ನಿರ್ಧಾರವನ್ನು ಒಪ್ಪಿಕೊಂಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಈ ನಿಯಮ ಉಲ್ಲಂಘನೆಯಾಗಿದ್ದಕ್ಕೆ ಪಂದ್ಯದ ರೆಫ್ರಿ ತೀರ್ಮಾನ ಅಂತಿಮವಾಗಿದೆ.

ಬಿಸಿಸಿಐ ಆರ್ಟಿಕಲ್‌ 2.2 ಎಂದರೇನು?

ಸಾಮಾನ್ಯ ಕ್ರಿಕೆಟ್ ಚಟುವಟಿಕೆಗಳ ಹೊರಗಿನ ಯಾವುದೇ ಕ್ರಮವಾಗಿದೆ. ಸಾಮಾನ್ಯವಾಗಿ ಆಟಗಾರರು ವಿಕೆಟ್‌ಗೆ ಹೊಡೆಯುವುದು, ತಮ್ಮ ಸಿಟ್ಟು ವಿಕೆಟ್‌ಗಳಿಗೆ ಒದ್ದು ತೀರಿಸಿಕೊಳ್ಳುವುದು. ತಿಳಿದು ಅಥವಾ ತಿಳಿಯದೆಯೋ ಉದ್ದೇಶ ಪೂರಕವಾಗಿ ಜಾಹೀರಾತು ಫಲಕಗಳಿಗೆ ಹಾನಿ, ಡ್ರೆಸ್ಸಿಂಗ್‌ ರೂಮ್‌ ಉಪಕರಣಗಳಿಗೆ ಹಾನಿ, ಬಾಗಿಲು, ಕಿಟಕಿ, ಹಾನಿಗೊಳಿಸುವ ಯಾವುದೇ ಕ್ರಮವನ್ನು ಒಳಗೊಂಡಿದೆ.

ಇಶಾಂತ್‌ ಜಿಟಿಯ ದುಬಾರಿ ಬೌಲರ್‌

ಗುಜರಾತ್ ಟೈಟನ್ಸ್ ತಂಡದ ಅನುಭವಿ ಬೌಲರ್‌ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ರನ್‌ಗಳನ್ನು ನೀಡಿ ಕೈ ಸುಟ್ಟುಕೊಂಡರು. ಇವರು 4 ಓವರ್ ಬೌಲಿಂಗ್ ನಡೆಸಿ 53 ರನ್‌ ನೀಡಿದರು. ಈ ವೇಳೆ ಯಾವುದೇ ವಿಕೆಟ್‌ ಸಹ ಪಡೆಯಲಿಲ್ಲ.

Story first published: Monday, April 7, 2025, 13:11 [IST]
Other articles published on Apr 7, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+