For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಎಟಿಕೆ ಮೋಹನ್ ಬಾಗನ್‌ಗೆ ಸೋಲುಣಿಸಿದ ಜೆಮ್ಶೆಡ್ಪುರ ಎಫ್‌ಸಿ

ISL 2021-22: match 20 ATKMB vs JFC, Jamshedpur FC match won by 2-1 Highlights

ಇಂಡಿಯನ್ ಸೂಪರ್ ಲೀಗ್‌ನ 20ನೇ ಪಂದ್ಯದಲ್ಲಿ ಎಟಿಕೆ ಮೋಹನ್ ಬಾಗನ್ ಹಾಗೂ ಜೆಮ್ಶೆಡ್ಪುರ ಎಫ್‌ಸಿ ತಂಡಗಳು ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಜೆಮ್ಶೆಡ್ಪುರ ಎಫ್‌ಸಿ ತಂಡ ಎಟಿಕೆ ಮೋಹನ್ ಬಾಗನ್ ವಿರುದ್ಧ 2-1 ಗೋಲುಗಳ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿದೆ. ಈ ಗೆಲುವಿನೊಂದಿಗೆ ಜೆಮ್ಶಡ್ಪುರ ಎಫ್‌ಸಿ ತಂಡ ಅಂಕಪಟ್ಟಿಯಲ್ಲಿ ಭಾರೀ ಪ್ರಗತಿ ಸಾಧಿಸಿದೆ. ಇದು ಜೆಮ್ಶೆಡ್ಪುರ ಎಫ್‌ಸಿ ತಂಡ ಈ ಬಾರಿಯ ಆವೃತ್ತಿಯಲ್ಲಿ ದಾಖಲಿಸಿದ ಎರಡನೇ ಗೆಲುವಾಗಿದೆ. ಮತ್ತೊಂದೆಡೆ ಎಟಿಕೆ ಮೋಹನ್ ಬಾಗನ್ ತಂಡ ಆಡಿದ ನಾಲ್ಕನೇ ಪಂದ್ಯದಲ್ಲಿ ಎರಡನೇ ಸೋಲನ್ನು ಅನುಭವಿಸಿದೆ.

ತೀವ್ರ ಪೈಪೋಟಿಯಿಂದ ಕೂಡಿದ್ದ ಈ ಪಂದ್ಯದಲ್ಲಿ ಜೆಮ್ಶೆಡ್ಪುರ ಎಫ್‌ಸಿ ಮೊದಲಾರ್ಧದಲ್ಲಿಯೇ ಒಂದು ಗೋಲು ಗಳಿಸುವ ಮೂಲಕ ಮುನ್ನಡೆ ಪಡೆದುಕೊಂಡಿತ್ತು. 37ನೇ ನಿಮಿಷದಲ್ಲಿ ಜೆಮ್ಶೆಡ್ಪುರ ಎಫ್‌ಸಿ ತಂಡದ ಪರವಾಗಿ ಸೆಮಿನ್ಲೆನ್ ಡೌಂಗೆಲ್ ಮೊದಲ ಗೋಲು ಬಾರಿಸಿ ಮೇಲುಗೈ ಸಾಧಿಸಲು ಕಾರಣವಾದರು. ಎಟಿಕೆ ಮೋಹನ್ ಬಾಗನ್ ಮೊದಲಾರ್ಧದಲ್ಲಿ ಯಾವುದೇ ಗೋಲು ಗಳಿಸಲು ಸಾಧ್ಯವಾಗಲೇ ಇಲ್ಲ.

ನಂತರ ದ್ವಿತಿಯಾರ್ಧದಲ್ಲಿ ಜೆಮ್ಶೆಡ್ಪುರ ಎಫ್‌ಸಿ ತಂಡ ಮತ್ತೊಂದು ಗೋಲು ಗಳಿಸುವಲ್ಲಿ ಯಶಸ್ವಿಯಾಯಿತು. ಅಲೆಕ್ಸಾಂಡ್ರೆ ಮೊಂಟೆರೊ ಡಿ ಲಿಮಾ 84ನೇ ನಿಮಿಷದಲ್ಲಿ ಈ ಗೋಲು ದಾಖಲಿಸಿ ಈ ಮುನ್ನಡೆಯನ್ನು 2-0ಗೆ ಏರಿಸಿದರು. ನಂರ 88ನೇ ನಿಮಿಷದಲ್ಲಿ ಎಟಿಕೆ ಮೋಹನ್ ಬಾಗನ್ ಪರವಾಗಿ ಪ್ರೀತಮ್ ಕೋಟಲ್ ಮೊದಲ ಗೋಲು ಗಳಿಸಿದರು. ಆದರೆ ಅದಾಗಲೇ ಪಂದ್ಯ ಕೊನೆಯ ಹಂತಕ್ಕೆ ತಲುಪಿತ್ತು. ಅಂತಿಮವಾಗಿ ಜೆಮ್ಶೆಡ್ಪುರ ಎಫ್‌ಸಿ ತಂಡ 2-1 ಅಂತರದಿಂದ ಭರ್ಜರಿಯಾಗಿ ಗೆಲುವು ಸಾಧಿಸಿದೆ.

ನಂತರ ದ್ವಿತಿಯಾರ್ಧದಲ್ಲಿ ಜೆಮ್ಶೆಡ್ಪುರ ಎಫ್‌ಸಿ ತಂಡ ಮತ್ತೊಂದು ಗೋಲು ಗಳಿಸುವಲ್ಲಿ ಯಶಸ್ವಿಯಾಯಿತು. ಅಲೆಕ್ಸಾಂಡ್ರೆ ಮೊಂಟೆರೊ ಡಿ ಲಿಮಾ 84ನೇ ನಿಮಿಷದಲ್ಲಿ ಈ ಗೋಲು ದಾಖಲಿಸಿ ಈ ಮುನ್ನಡೆಯನ್ನು 2-0ಗೆ ಏರಿಸಿದರು. ನಂರ 88ನೇ ನಿಮಿಷದಲ್ಲಿ ಎಟಿಕೆ ಮೋಹನ್ ಬಾಗನ್ ಪರವಾಗಿ ಪ್ರೀತಮ್ ಕೋಟಲ್ ಮೊದಲ ಗೋಲು ಗಳಿಸಿದರು. ಆದರೆ ಅದಾಗಲೇ ಪಂದ್ಯ ಕೊನೆಯ ಹಂತಕ್ಕೆ ತಲುಪಿತ್ತು. ಅಂತಿಮವಾಗಿ ಜೆಮ್ಶೆಡ್ಪುರ ಎಫ್‌ಸಿ ತಂಡ 2-1 ಅಂತರದಿಂದ ಭರ್ಜರಿಯಾಗಿ ಗೆಲುವು ಸಾಧಿಸಿದೆ.

ಇನ್ನು ಈ ಗೆಲುವಿನೊಂದಿಗೆ ಜೆಮ್ಶೆಡ್ಪುರ ಎಫ್‌ಸಿ ತಂಡ ಅಂಕಪಟ್ಟಿಯಲ್ಲಿ ಉತ್ತಮ ಏರಿಕೆ ಕಂಡಿದೆ. ಐದನೇ ಸ್ಥಾನದಲ್ಲಿದ್ದ ಜೆಮ್ಶೆಡ್ಪುರ ಎಫ್‌ಸಿ ತಂಡ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ನಾಲ್ಕನೇ ಸ್ಥಾನದಲ್ಲಿದ್ದ ಎಟಿಕೆ ಮೋಹನ್ ಬಾಗನ್ ತಂಡ ಐದನೇ ಸ್ಥಾನಕ್ಕೆ ಕುಸಿದಿದೆ. ಇನ್ನು ಮುಂಬೈ ಸಿಟಿ ಎಫ್‌ಸಿ ತಂಡ ಅಗ್ರ ಸ್ಥಾನದಲ್ಲಿ ಮುಂದುವರಿದಿದ್ದು ಚೆನ್ನೈಯಿನ್ ಎಫ್‌ಸಿ ಮೂರನೇ ಸ್ಥಾನದಲ್ಲಿದೆ. ಬೆಂಗಳೂರು ಎಫ್‌ಸಿ ತಂಡ ನಾಲ್ಕು ಪಂದ್ಯಗಳಲ್ಲಿ ಕೇವಲ ಒಂದು ಗೆಲುವು ಸಾಧಿಸಿದ್ದು ಎರಡು ಸೋಲು ಅನುಭವಿಸಿದೆ. ಒಂದು ಪಂದ್ಯದಲ್ಲಿ ಡ್ರಾ ಫಲಿತಾಂಶ ಪಡೆದುಕೊಂಡಿದೆ. ಹೀಗಾಗಿ ಅಂಕಪಟ್ಟಿಯಲ್ಲಿ 8ನೇ ಸ್ಥಾನಕ್ಕೆ ಕುಸಿದಿದೆ.

ಎಟಿಕೆ ಮೋಹನ್ ಬಾಗನ್: ಅಮರಿಂದರ್ ಸಿಂಗ್ (ಗೋಲ್‌ ಕೀಪೆರ್), ಸುಮಿತ್ ರಾಠಿ, ಅಶುತೋಷ್ ಮೆಹ್ತಾ, ಸುಭಾಸಿಶ್ ಬೋಸ್, ಪ್ರೀತಮ್ ಕೋಟಾಲ್, ಜೋನಿ ಕೌಕೊ, ಕಾರ್ಲ್ ಮೆಕ್‌ಹಗ್, ಲೆನ್ನಿ ರೋಡ್ರಿಗಸ್, ಹ್ಯೂಗೋ ಬೌಮಸ್, ಮನ್ವಿರ್ ಸಿಂಗ್, ರಾಯ್ ಕೃಷ್ಣ (ನಾಯಕ)

ಜೆಮ್ಶೆಡ್ಪುರ ಎಫ್‌ಸಿ: ಟಿಪಿ ರೆಹನೇಶ್ (ಗೋಲ್‌ಕೀಪರ್), ರಿಕಿ ಲಲ್ಲಾವ್ಮಾ, ಎಲಿ ಸಬಿಯಾ, ಲಾಲ್ಡಿನ್ಲಿಯಾನಾ ರೆಂತ್ಲೀ, ಪೀಟರ್ ಹಾರ್ಟ್ಲಿ (ನಾಯಕ), ಜಿತೇಂದ್ರ ಸಿಂಗ್, ಸೀಮಿನ್ಲೆನ್ ಡೌಂಗೆಲ್, ಪ್ರೊನೇ ಹಾಲ್ಡರ್, ಕೋಮಲ್ ಥಟಾಲ್, ನೆರಿಜಸ್ ವಾಲ್ಸ್ಕಿಸ್, ಗ್ರೆಗ್ ಸ್ಟೀವರ್ಟ್.

Story first published: Monday, December 6, 2021, 23:13 [IST]
Other articles published on Dec 6, 2021
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+