ಐಎಸ್‌ಎಲ್ 2021: ಮುಂದುವರಿದ ಬಿಎಫ್‌ಸಿ ಕಳಪೆ ಪ್ರದರ್ಶನ, ಟೂರ್ನಿಯಲ್ಲಿ 4ನೇ ಸೋಲು

ಇಂಡಿಯನ್ ಸೂಪರ್ ಲೀಗ್‌ನ 26ನೇ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ಹಾಗೂ ಗೋವಾ ಎಫ್‌ಸಿ ತಂಡಗಳು ಮುಖಾಮುಖಿಯಾಗಿದೆ. ಬೆಂಗಳೂರು ಎಫ್‌ಸಿ ತಂಡದ ಕಳಪೆ ಪ್ರದರ್ಶನ ಈ ಪಂದ್ಯದಲ್ಲಿಯೂ ಮುಂದುವರಿದಿದ್ದು ಟೂರ್ನಿಯಲ್ಲಿ ಆಡಿದ ಆರು ಪಂದ್ಯಗಳ ಪೈಕಿ ನಾಲ್ಕನೇ ಸೋಲು ಅನುಭವಿಸಿದೆ. ಈ ಮೂಲಕ ಅತ್ಯಂತ ಕೆಟ್ಟ ಆರಂಭವನ್ನು ಪಡೆದಿದೆ. ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಗೆಲುವು ಸಾಧಿಸಿದ ನಂತರ ಕಳೆದ ಐದು ಪಂದ್ಯಗಳಲ್ಲಿಯೂ ಬಿಎಫ್‌ಸಿ ತಂಡ ಗೆಲುವಿನ ಮುಖ ನೋಡಿಲ್ಲ.
ಪಂದ್ಯ ಆರಂಭವಾದ 16ನೇ ನಿಮಿಷದಲ್ಲಿ ಗೋಲು ದಾಖಲಿಸುವ ಮೂಲಕ ಎಫ್‌ಸಿ ಗೋವಾ ತಂಡ ಮುನ್ನಡೆಯನ್ನು ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ಭಾರತೀಯ ಫುಟ್ಬಾಲರ್ ಆಶಿಕೀ ಮೊಹಮ್ಮದ್ ಕುರುನಿಯನ್ ಗೋಲು ಗಳಿಸುವ ಮೂಲಕ ಗೋವಾ ತಂಡಕ್ಕೆ ಮೇಲುಗೈ ಒದಗಿಸಿದರು. ನಂತರ ಮೊದಲಾರ್ಧದ ಅಂತಿಮ ಕ್ಷಣದಲ್ಲಿ ಬಿಎಫ್‌ಸಿ ತಂಡ ಕೂಡ ಮೊದಲ ಗೋಲು ಗಳಿಸುವಲ್ಲಿ ಯಶಸ್ವಿಯಾಗಿತ್ತು. ಕ್ಲಿಟನ್ ಸಿಲ್ವಾ ಬಿಎಫ್‌ಸಿ ಪರವಾಗಿ ಗೋಲು ದಾಖಲಿಸಿದ್ದರು. ಈ ಮೂಲಕ ಮೊದಲಾರ್ಧದಲ್ಲಿ ಪಂದ್ಯದಲ್ಲಿ ಸಮಬಲ ಸಾಧಿಸುವಲ್ಲಿ ಯಶಸ್ವಿಯಾಗಿತ್ತು.
ಆದರೆ ಪಂದ್ಯದ 70ನೇ ನಿಮಿಷದಲ್ಲಿ ಎಫ್‌ಸಿ ಗೋವಾ ಪರವಾಗಿ ಎರಡನೇ ಗೋಲು ದಾಖಲಾಗಿತ್ತು. ದೇವೇಂದ್ರ ಮುರ್ಗಾಂವ್ಕರ್ ಈ ಪ್ರಮುಖ ಗೋಲು ದಾಖಲಿಲಿಸುವಲ್ಲಿ ಯಶಸ್ವಿಯಾಗಿದ್ದರು. ಅದಾದ ಬಳಿಕ ಪಂದ್ಯದಲ್ಲಿ ಯಾವುದೇ ಗೋಲು ದಾಖಲಾಗಲಿಲ್ಲ. ಈ ಮೂಲಕ ಪಂದ್ಯದಲ್ಲಿ ಎಫ್‌ಸಿ ಗೋವಾ ತಂಡ ಬಿಎಫ್‌ಸಿ ತಂಡವನ್ನು 2-1 ಅಂತರದಿಂದ ಮಣಿಸುವಲ್ಲಿ ಯಶಸ್ವಿಯಾಗಿತ್ತು.
ಇನ್ನು ಈ ಗೆಲುವಿನೊಂದಿಗೆ ಬಿಎಫ್‌ಸಿ ತಂಡ ಟೂರ್ನಿಯಲ್ಲಿ ಆಡಿದ ಐದು ಪಂದ್ಯಗಳ ಪೈಕಿ ಎರಡನೇ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಆರಂಬಿಕ ಮೂರು ಪಂದ್ಯಗಳಲ್ಲಿ ಹ್ಯಾಟ್ರಿಕ್ ಸೋಲು ಅನುಭವಿಸಿದ ಬಳಿಕ ಗೋವಾ ಸತತ ಎರಡನೇ ಗೆಲುವು ಸಾಧಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ 10ನೇ ಸ್ಥಾನದಿಂದ 7ನೇ ಸ್ಥಾನಕ್ಕೆ ಏರಿಕೆ ಕಂಡಿದೆ.
ಮತ್ತೊಂದೆಡೆ ಬಿಎಫ್‌ಸಿ ತಂಡದ ಹೀನಾಯ ಪ್ರದರ್ಶನ ಅಭಿಮಾನಿಗಳನ್ನು ಕಂಗೆಡಿಸಿದೆ. ಆರಂಭಿಕ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿ ಶುಭಾರಂಭ ಮಾಡಿದ್ದ ಬೆಂಗಳೂರು ಎಫ್‌ಸಿ ತಂಡ ನಂತರದ ಐದು ಪಂದ್ಯಗಳಲ್ಲಿಯೂ ಗೆದ್ದಿಲ್ಲ. ಮೂರನೇ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್ ವಿರುದ್ಧ ಡ್ರಾ ಸಾಧಿಸಿದ್ದೇ ದೊಡ್ಡ ಸಾಧನೆಯಾಗಿದೆ. ಎಫ್‌ಸಿ ಗೋವಾ ವಿರುದ್ಧದ ಸೋಲಿನೊಂದಿಗೆ ಬವಿಎಫ್‌ಸಿ ಹ್ಯಾಟ್ರಿಕ್ ಸೋಲು ಕಂಡು ಹೀನಾಯ ಸ್ಥಿತಿಯಲ್ಲಿದೆ. ಅಂಕಪಟ್ಟಿಯಲ್ಲಿಯೂ ಬಿಎಫ್‌ಸಿ ತಂಡ 8ನೇ ಸ್ಥಾನದಿಂದ 10ನೇ ಸ್ಥಾನಕ್ಕೆ ಕುಸಿತ ಕಂಡಿದೆ. ಅಂಕಪಟ್ಟಿಯಲ್ಲಿ ಮುಂಬೈ ಸಿಟಿ ಎಫ್‌ಸಿ ತಂಡ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರೆ ಒಡಿಶಾ ಎಫ್‌ಸಿ ತಂಡ ಎರಡನೇ ಸ್ಥಾನದಲ್ಲಿ ಚೆನ್ನೈಯಿನ್ ಮೂರನೇ ಹಾಗೂ ಜೆಮ್ಶೆಡ್ಪುರ ಎಫ್‌ಸಿ ತಂಡ ನಾಲ್ಕನೇ ಸ್ಥಾನದಲ್ಲಿದೆ.
ಬೆಂಗಳೂರು ಎಫ್‌ಸಿ ಪ್ಲೇಯಿಂಗ್ XI:
ಗುರುಪ್ರೀತ್ ಸಂಧು (ಗೋಲ್ ಕೀಪರ್), ರೋಶನ್ ನವೋರೆಮ್, ಪ್ರತೀಕ್ ಚೌಧರಿ, ಅಲನ್ ಕೋಸ್ಟಾ, ಆಶಿಕ್ ಕುರುನಿಯನ್, ಸುರೇಶ್ ವಾಂಗ್ಜಮ್, ಬ್ರೂನೋ ಸಿಲ್ವಾ, ಜಯೇಶ್ ರಾಣೆ, ಡ್ಯಾನಿಶ್ ಫಾರೂಕ್, ಕ್ಲಿಟನ್ ಸಿಲ್ವಾ, ಸುನಿಲ್ ಛೆಟ್ರಿ (ಸಿ).
ಎಫ್‌ಸಿ ಗೋವಾ ಪ್ಲೇಯಿಂಗ್ XI: ಧೀರಜ್ ಮೊಯಿರಾಂಗ್ಥೆಮ್ (ಗೋಲ್ ಕೀಪರ್), ಮೊಹಮ್ಮದ್ ಅಲಿ, ಇವಾನ್ ಗೊನ್ಜಾಲೆಜ್, ಐಬನ್ ಡೊಹ್ಲಿಂಗ್, ಸೆರಿಟನ್ ಫೆರ್ನಾಂಡಿಸ್, ಸೇವಿಯರ್ ಗಾಮಾ, ಗ್ಲಾನ್ ಮಾರ್ಟಿನ್ಸ್, ಎಡು ಬೆಡಿಯಾ (ನಾಯಕ), ಅಲ್ಬರ್ಟೊ ನೊಗುರಾ, ಜಾರ್ಜ್ ಒರ್ಟಿಜ್ ಮತ್ತು ದೇವೇಂದ್ರ ಮುರ್ಗಾಂವ್ಕರ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications