For Quick Alerts
ALLOW NOTIFICATIONS  
For Daily Alerts
 

ಐಎಸ್‌ಎಲ್: ಈಸ್ಟ್ ಬೆಂಗಾಲ್ ವಿರುದ್ಧ ಡ್ರಾಗೆ ತೃಪ್ತಿಪಟ್ಟ ಬೆಂಗಳೂರು ಎಫ್‌ಸಿ

ISL 2021-22: match 49 SCEB vs BFC, match draw by 1-1 Highlights

ಇಂಡಿಯನ್ ಸೂಪರ್ ಲೀಗ್‌ನ 49ನೇ ಪಂದ್ಯದಲ್ಲಿ ಈಸ್ಟ್ ಬೆಂಗಾಲ್ ಹಾಗೂ ಬೆಂಗಳೂರು ಎಫ್‌ಸಿ ತಮಡಗಳು ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಎರಡು ತಂಡಗಳು ಕೂಡ ತಲಾ 1-1 ಗೋಲುಗಳನ್ನು ಗಳಿಸಿದ್ದು ಡ್ರಾಗೆ ತೃಪ್ತಿಪಟ್ಟುಕೊಂಡಿದೆ. ಹೀಗಾಗಿ ಗೆಲುವಿನ ಲಯಕ್ಕೆ ಮರಳಿದ ವಿಶ್ವಾಸ ಮೂಡಿಸಿದ್ದ ಬಿಎಫ್‌ಸಿ ಮತ್ತೆ ನಿರಾಸೆ ಅನುಭವಿಸಿದೆ.

ಬೆಂಗಳೂರು ಎಫ್‌ಸಿ ಹಾಗೂ ಎಸ್‌ಸಿ ಈಸ್ಟ್ ಬೆಂಗಾಲ್ ಎರಡು ತಂಡಗಳ ಪಾಲಿಗೂ ಈ ಬಾರಿಯ ಆವೃತ್ತಿ ಅತ್ಯಂತ ಕಳಪೆಯಾಗಿದೆ. ಅದರಲ್ಲೂ ಈಸ್ಟ್ ಬೆಂಗಾಲ್ 9 ಪಂದ್ಯಗಳನ್ನು ಆಡಿದ್ದರೂ ಈವರೆಗೆ ಒಂದೇ ಒಂದು ಗೆಲುವು ಸಾಧಿಸಿಲ್ಲ. ಹೀಗಾಗಿ ಅಂಕಪಟ್ಟಿಯಲ್ಲಿ ಅತ್ಯಂತ ಕೆಳಗಿನ ಸ್ಥಾನದಲ್ಲಿದೆ. ಮತ್ತೊಂದೆಡೆ ಬೆಂಗಳೂರು ಎಫ್‌ಸಿ ಪಾಲಿಗೆ ಕೂಡ ಈ ಬಾರಿಯ ಟೂರ್ನಿ ಹಿಣದಿನ ಎಲ್ಲಾ ಆವೃತ್ತಿಗಳಿಗೆ ಹೋಲಿಸಿದರೂ ಕಳಪೆಯಾಗಿದೆ. ಅಂಕಪಟ್ಟಿಯಲ್ಲಿ ತಳದಲ್ಲಿ ಇತರ ತಂಡಗಳೊಂದಿಗೆ ಬಿಎಫ್‌ಸಿ ಪೈಪೋಟಿ ನಡೆಸುತ್ತಿರುವುದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಅದರಲ್ಲೂ ದುರ್ಬಲ ತಂಡದ ವಿರುದ್ಧವೂ ಬಿಎಫ್‌ಸಿ ಗೆಲುವು ಸಾಧಿಸಲು ವಿಫಲವಾಗುತ್ತಿರುವುದು ಆಘಾತ ಮೂಡಿಸಿದೆ.

ಈ ಪಂದ್ಯದಲ್ಲಿ ಮೊದಲಿಗೆ ಎಸ್‌ಸಿ ಈಸ್ಟ್ ಬೆಂಗಾಲ್ ತಂಡ 28ನೇ ನಿಮಿಷದಲ್ಲಿ ಗೋಲು ದಾಖಲಿಸುವಲ್ಲಿ ಯಶಸ್ವಿಯಾಗಿತ್ತು. ಥೋಂಗ್‌ಖೋಸಿಮ್ ಹಾಕಿಪ್ ತಂಡಕ್ಕೆ ಈ ಗೋಲು ಸಿಡಿಸಿ ಮುನ್ನಡೆಯನ್ನು ಒದಗಿಸಿದರು. ಹೀಗೆ ಮೊದಲಾರ್ಧದಲ್ಲಿ ಬಿಎಫ್‌ಸಿ 1-0 ಅಂತರದಿಂದ ಮುನ್ನಡೆಯನ್ನು ಸಾಧಿಸಿತು. ನಂತರ ದ್ವಿತಿಯಾರ್ಧದಲ್ಲಿ ಬೆಂಗಳೂರು ತಂಡದ ಪರವಾಗಿ ಕೂಡ ಒಂದು ಗೋಲು ಸಿಡಿಯಿತು. ಈ ಗೋಲು ಕೂಡ ಎದುರಾಳಿ ತ,ಡದ ಸೌರವ್ ದಾಸ್ ಅವರ ಎಡವಟ್ಟಿನಿಂದ ಓನ್ ಗೋಲಾಗಿದೆ. ಈ ಮೂಲಕ ಬೆಂಗಳೂರು 1-1 ಅಂತರದ ಸಮಬಲ ಸಾಧಿಸಿದೆ.

ಇನ್ನು ಈ ಪಂದ್ಯದ ಡ್ರಾ ಫಲಿತಾಂಶದಿಂದಾಗಿ ಅಂಕಪಟ್ಟಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಎಸ್‌ಸಿ ಈಸ್ಟ್ ಬೆಂಗಾಲ್ ತಂಡ ಅಂಕಪಟ್ಟಿಯಲ್ಲಿ ಅಂತಿಮ ಸ್ಥಾನದಲ್ಲಿಯೇ ಮುಂದಿವರಿದಿದೆ. ಇನ್ನು ಬೆಂಗಳೂರು ಎಫ್‌ಸಿ ತಂಡ 8ನೇ ಸ್ಥಾನದಲ್ಲಿಯೇ ಮುಂದಿವರಿದಿದೆ.

ಎಸ್‌ಸಿ ಈಸ್ಟ್ ಬೆಂಗಾಲ್: ಅರಿಂದಮ್ ಭಟ್ಟಾಚಾರ್ಜಾ (ಗೋಲ್‌ ಕೀಪರ್/ ನಾಯಕ), ಟೊಮಿಸ್ಲಾವ್ ಮರ್ಸೆಲಾ, ಆದಿಲ್ ಖಾನ್, ಜಾಯ್ನರ್ ಲೌರೆಂಕೊ, ಹೀರಾ ಮೊಂಡಲ್, ವಹೆಂಗ್‌ಬಾಮ್ ಲುವಾಂಗ್, ಸೌರವ್ ದಾಸ್, ಲಾಲ್ರಿನ್ಲಿಯಾನಾ ಹ್ನಾಮ್ಟೆ, ನವೋರೆಮ್ ಸಿಂಗ್, ಥೋಂಗ್‌ಖೋಸಿಮ್ ಹಾಕಿಪ್, ಡೇನಿಯಲ್ ಚುಕ್ವು.

ಬೆಂಗಳೂರು ಎಫ್‌ಸಿ: ಗುರುಪ್ರೀತ್ ಸಂಧು (ಗೋಲ್‌ ಕೀಪರ್/ ನಾಯಕ), ಅಲನ್ ಕೋಸ್ಟಾ, ಆಶಿಕ್ ಕುರುನಿಯನ್, ಪರಾಗ್ ಶ್ರೀವಾಸ್, ರೋಷನ್ ನವೋರೆಮ್, ಬ್ರೂನೋ ಸಿಲ್ವಾ, ಜಯೇಶ್ ರಾಣೆ, ಸುರೇಶ್ ವಾಂಗ್ಜಮ್, ಪ್ರಿನ್ಸ್ ಇಬಾರಾ, ಉದಾಂತ ಸಿಂಗ್, ಕ್ಲಿಟನ್ ಸಿಲ್ವಾ.

Story first published: Tuesday, January 4, 2022, 22:24 [IST]
Other articles published on Jan 4, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+