Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

'ಈ ಬಾರಿ ನಿನ್ನಿಂದಲೇ ನಮಗೆ ಗಿಫ್ಟ್‌ ಬೇಕು': ಕೊಹ್ಲಿ ಬರ್ತ್‌ಡೆಗೆ ಹರ್ಭಜನ್‌ ಸಿಂಗ್ ಟ್ವೀಟ್

Virat kohli

ಟೀಂ ಇಂಡಿಯಾ ಮಾಜಿ ನಾಯಕ, ಮಾಡ್ರನ್ ಡೇ ಕ್ರಿಕೆಟ್‌ನ ಲೆಜೆಂಡ್ ವಿರಾಟ್ ಕೊಹ್ಲಿಗೆ ಹುಟ್ಟುಹಬ್ಬದ ಸಂಭ್ರಮ. ನವೆಂಬರ್ 5ರಂದು 34ನೇ ವಸಂತಕ್ಕೆ ಕಾಲಿಟ್ಟ ವಿರಾಟ್‌ ಕೊಹ್ಲಿಗೆ ಸಾಮಾಜಿಕ ಜಾಲತಾಣಗಳಲ್ಲಿ ಕೋಟ್ಯಾಂತರ ಅಭಿಮಾನಿಗಳು, ಸೆಲೆಬ್ರೆಟಿಗಳು, ಹಾಲಿ, ಮಾಜಿ ಕ್ರಿಕೆಟಿಗರು ಶುಭ ಹಾರೈಸಿದರು.

5 ನವೆಂಬರ್ 1988ರಂದು ದೆಹಲಿಯಲ್ಲಿ ಜನಿಸಿದ ವಿರಾಟ್ ಕೊಹ್ಲಿ, ಬಾಲ್ಯದ ಕೋಚ್ ರಾಜ್‌ಕುಮಾರ್ ಶರ್ಮಾ ಗರಡಿಯಲ್ಲಿ ಪಳಗಿದರು. ಒಂದೊಂದೇ ಮೆಟ್ಟಿಲು ಏರುತ್ತಾ 2008ರಲ್ಲಿ ಟೀಂ ಇಂಡಿಯಾ ಅಂಡರ್‌ 19 ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ ವಿರಾಟ್ ಮತ್ತೆಂದೂ ಹಿಂದೆ ತಿರುಗಿ ನೋಡಲಿಲ್ಲ.

ಅದೇ ವರ್ಷದಲ್ಲಿ ಟೀಂ ಇಂಡಿಯಾ ಪರ ಚೊಚ್ಚಲ ಪಂದ್ಯವನ್ನಾಡಿದ ವಿರಾಟ್ ಕೊಹ್ಲಿ, ಇದೀಗ ಟೀಂ ಇಂಡಿಯಾ ಅಷ್ಟೇ ಅಲ್ಲದೆ ವಿಶ್ವ ಕಂಡಂತಹ ಗ್ರೇಟೆಸ್ಟ್ ಬ್ಯಾಟರ್‌ಗಳಲ್ಲಿ ಒಬ್ಬರಾಗಿದ್ದಾರೆ. ವಿರಾಟ್ ಕೊಹ್ಲಿಯ ಜನಮದಿನಕ್ಕೆ ಟ್ವಿಟ್ಟರ್ ಸೇರಿದಂತೆ ಅನೇಕಾ ಸಾಮಾಜಿಕ ವೇದಿಕೆಯಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬಂದಿದ್ದು, ಟರ್ಬನೇಟರ್ ಹರ್ಭಜನ್ ಸಿಂಗ್ ಕೂಡ ವಿಶೇಷ ಟ್ವೀಟ್ ಮೂಲಕ ಶುಭ ಕೋರಿದ್ದಾರೆ.

ಹರ್ಭಜನ್ ಸಿಂಗ್ ತಮ್ಮ ಟ್ವೀಟ್‌ನಲ್ಲಿ '' ಹುಟ್ಟು ಹಬ್ಬದ ಶುಭಾಶಯಗಳು @imVkohli ಒಳ್ಳೆಯ ಆಟವನ್ನು ಮುಂದುವರಿಸು ಮತ್ತು ನಮಗೆ ಹೆಮ್ಮೆ ತಂದುಕೊಡು. ಈ ಬಾರಿ ಗಿಫ್ಟ್‌ ನೀನೇ ಕೊಡಬೇಕು, ಕಪ್‌ ವಾಪಸ್ ತಂದುಕೊಡು, ಆರೋಗ್ಯವಾಗಿರು ಮತ್ತು ಖುಷಿಯಾಗಿರು. ಹೆಚ್ಚು ಪ್ರೀತಿ'' ಎಂದು ಹರ್ಭಜನ್ ಸಿಂಗ್ ಟ್ವೀಟ್ ಮಾಡಿದ್ದಾರೆ.

ಹರ್ಭಜನ್ ಸಿಂಗ್ ಅಷ್ಟೇ ಅಲ್ಲದೆ ಹಿರಿಯ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಕೂಡ ವಿರಾಟ್‌ಗೆ ಶುಭ ಹಾರೈಸಿದ್ದಾರೆ. ಕಾರ್ತಿಕ್ ವಿರಾಟ್ ಜೊತೆಗಿನ ಚಿತ್ರವನ್ನು ಹಂಚಿಕೊಂಡಿದ್ದು, ಶೀರ್ಷಿಕೆಯಲ್ಲಿ, "ಯಾರೂ ನಂಬದಿರುವಾಗ ಅವನು ನಂಬುವವನು! ನಿಮಗೆ ಜನ್ಮದಿನದ ಶುಭಾಶಯಗಳು."ಎಂದು ಕೊಹ್ಲಿ ಶುಭ ಕೋರಿದ್ದಾರೆ.

ಕ್ರಿಕೆಟಿಗರು ಅಷ್ಟೇ ಅಲ್ಲದೆ ಲಕ್ಷಾಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ವಿರಾಟ್ ಕೊಹ್ಲಿ ಜನುಮದಿನಕ್ಕೆ ಶುಭಾಶಯ ತಿಳಿಸಿದ್ದಾರೆ.

Story first published: Sunday, November 6, 2022, 2:00 [IST]
Other articles published on Nov 6, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+