
ದಕ್ಷಿಣ ಆಫ್ರಿಕಾ ವಿರುದ್ಧ ಕೊನೆಯ ಏಕದಿನ ಪಂದ್ಯವನ್ನಾಡಲಿರುವ ಬೆನ್ ಸ್ಟೋಕ್ಸ್
31 ವರ್ಷದ ಬೆನ್ ಸ್ಟೋಕ್ಸ್ ಮೂರು ಫಾರ್ಮೆಟ್ ಆಡಲು ತನ್ನ ದೇಹ ಸಹಕರಿಸುತ್ತಿಲ್ಲ ಎಂಬ ಕಾರಣ ನೀಡಿದ್ದಲ್ಲದೆ ಏಕದಿನ ಕ್ರಿಕೆಟ್‌ಗೆ ದಿಢೀರ್ ನಿವೃತ್ತಿಯ ನಿರ್ಧಾರ ತೆಗೆದುಕೊಂಡಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಜುಲೈ 19ರಂದು ನಡೆಯಲಿರುವ ಮೊದಲ ಏಕದಿನ ಪಂದ್ಯವು ಬೆನ್ ಸ್ಟೋಕ್ಸ್‌ರ ಕೊನೆಯ ಏಕದಿನ ಪಂದ್ಯವಾಗಲಿದೆ.
ಮೂರು ಫಾರ್ಮೆಟ್ ಕ್ರಿಕೆಟ್ ಆಡುವುದು ನನಗೆ ಸವಾಲಿನ ವಿಷಯವಾಗಿದೆ. ಜೊತೆಗೆ ಸತತ ಅಂತರಾಷ್ಟ್ರೀಯ ಕ್ರಿಕೆಟ್ ಸರಣಿಗಳನ್ನ ಆಡುವುದು ಸವಾಲಿನ ವಿಷಯವಾಗಿದೆ ಎಂದು ಏಕದಿನ ಫಾರ್ಮೆಟ್‌ನಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ.
ಬೆನ್ ಸ್ಟೋಕ್ಸ್ 104 ಏಕದಿನ ಪಂದ್ಯಗಳನ್ನಾಡಿದ್ದು, 39.44ರ ಸರಾಸರಿಯಲ್ಲಿ 2,919 ರನ್ ಮತ್ತು 74 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
ಟಿ20 ವಿಶ್ವಕಪ್‌ನಲ್ಲಿ ಭಾರತದ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಈ ನಾಲ್ವರಲ್ಲಿ ಯಾರು ಸೂಕ್ತ?

ಬೆನ್ ಸ್ಟೋಕ್ಸ್ 50 ಓವರ್ಸ್ ಆಡಲಿ, T20 ಕ್ರಿಕೆಟ್ ಬೇಕಾದ್ರೆ ತೊರೆಯಲಿ!
ಡೈಲಿ ಮೈಲ್‌ಗೆ ಪ್ರತಿಕ್ರಿಯಿಸಿರುವ ಇಂಗ್ಲೆಂಡ್ ಮಾಜಿ ಬ್ಯಾಟರ್ ನಾಸಿರ್ ಹುಸೇನ್ ಬೆನ್ ಸ್ಟೋಕ್ಸ್‌ಗೆ ಅಂತರಾಷ್ಟ್ರೀಯ ಕ್ರಿಕೆಟ್ ಸರಣಿಗಳ ಒತ್ತಡ ಹೆಚ್ಚಾಗಿದ್ದೇ ಆದಲ್ಲಿ ಟಿ20 ಫಾರ್ಮೆಟ್ ತೊರೆದು ಏಕದಿನ ಕ್ರಿಕೆಟ್ ಆಡುವುದನ್ನ ಮುಂದುವರಿಸಲಿ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
"ಇದು ಕೇವಲ ಜಾಮ್-ಪ್ಯಾಕ್ ಆಗಿದೆ. ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ತಮ್ಮದೇ ಆದ ಪಂದ್ಯಾವಳಿಗಳನ್ನು ಸೇರಿಸುತ್ತಲೇ ಇರುತ್ತದೆ ಮತ್ತು ಪ್ರತಿ ಮಂಡಳಿಯು ಇನ್ನೂ ಭವಿಷ್ಯದ ಪ್ರವಾಸಗಳ ಕಾರ್ಯಕ್ರಮವನ್ನು ಸಾಧ್ಯವಾದಷ್ಟು ದ್ವಿಪಕ್ಷೀಯ ಕ್ರಿಕೆಟ್‌ನಿಂದ ಸೇರಿಸಲು ಬಯಸುತ್ತಿದೆ''
"ವಿರಾಮ, ಸರಣಿಯಿಂದ ಹೊರಗುಳಿಯುವುದು, ಕೆಲವು ದ್ವಿಪಕ್ಷೀಯ ಕ್ರಿಕೆಟ್ ಆಡದೇ ಇರುವುದು ಒಕೆ. ಆದ್ರೆ ವಿಶ್ವಕಪ್ ಅಥವಾ ದೊಡ್ಡ ಪಂದ್ಯಾವಳಿಗಳಿಗೆ ಅವರನ್ನು ಆಡುವಂತೆ ನಾನು ಅವರಿಗೆ ಮನವರಿಕೆ ಮಾಡಲು ಪ್ರಯತ್ನಿಸಬಹುದು ಎಂದು ನಾನು ಭಾವಿಸುತ್ತೇನೆ. ಬೆನ್ ಟಿ20 ಕ್ರಿಕೆಟ್ ತ್ಯಜಿಸುವುದು ಉತ್ತಮ ಎಂದು ನನ್ನ ಅಭಿಪ್ರಾಯ ಮತ್ತು ಅವರು 50-ಓವರ್ ಪಂದ್ಯಗಳಿಂದ ಹೊರಗುಳಿಯುವ ನಿರ್ಧಾರ ಸರಿಯಲ್ಲ. ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ವಿಶ್ವಕಪ್ ಸೇರಿದಂತೆ 50 ಓವರ್‌ಗಳ ಕ್ರಿಕೆಟ್‌ನಲ್ಲಿ ಅವರು ಸುಲಭವಾಗಿ ಬ್ಯಾಟರ್ ಆಗಿ ಆಡಬಹುದಿತ್ತು'' ಎಂದು ಹುಸೇನ್ ಅಭಿಪ್ರಾಯ ಪಟ್ಟಿದ್ದಾರೆ.
ಇಂಗ್ಲೆಂಡ್ ಪ್ರವಾಸ ಆಯ್ತು, ವಿಂಡೀಸ್ ಪ್ರವಾಸ ಶುರು; ವೆಸ್ಟ್ ಇಂಡೀಸ್‌ಗೆ ಯಾವಾಗ ಹಾರಲಿದೆ ಧವನ್ ಪಡೆ?

ಬೆನ್ ಸ್ಟೋಕ್ಸ್ ನಿವೃತ್ತಿಯ ಸಂದೇಶ
ತನ್ನ ಅಧಿಕೃತ ಟ್ವಿಟ್ಟರ್ ಮತ್ತು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಬೆನ್ ಸ್ಟೋಕ್ಸ್ ನಿವೃತ್ತಿ ನಿರ್ಧಾರವನ್ನ ಪ್ರಕಟಿಸಿದ್ದಾರೆ
ಏಕದಿನ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುತ್ತಿರುವುದು ತೀರಾ ಕಠಿಣವಾದ ನಿರ್ಧಾರ ಎಂದಿದ್ದಾರೆ. ತನ್ನ ಸಹ ಆಟಗಾರರೊಂದಿಗೆ ಈ ಮಾದರಿಯಲ್ಲಿ ಕಳೆದಿರುವ ಪ್ರತಿಯೊಂದು ನಿಮಿಷ ಕೂಡ ಅದ್ಭುತವಾದದ್ದು ಎಂದಿರುವ ಬೆನ್ ಸ್ಟೋಕ್ಸ್ ತಾವು ಏಕದಿನ ಕ್ರಿಕೆಟ್‌ನಲ್ಲಿ ಅಮೋಘ ಪ್ರಯಾಣ ನಡೆಸಿದ್ದಾಗಿ ಬರೆದುಕೊಂಡಿದ್ದಾರೆ. ಇನ್ನೂ ಮುಂದುವರಿದು ಬರೆದಿರುವ ಸ್ಟೋಕ್ಸ್ ಇನ್ನು ಮುಂದೆ ನನ್ನಿಂದ ಈ ಮಾದರಿಯಲ್ಲಿ ಸಂಪೂರ್ಣ ಕೊಡುಗೆ ನೀಡಲಾಗುವುದಿಲ್ಲ ಎಂಬ ಕಾರಣಕ್ಕೆ ನಿವೃತ್ತಿ ಘೋಷಿಸುತ್ತಿದ್ದೇನೆ ಎಂದಿದ್ದು, ಇಂಗ್ಲೆಂಡ್ ಏಕದಿನ ಕ್ರಿಕೆಟ್ ಜರ್ಸಿಯನ್ನು ತನಗಿಂತ ಅರ್ಹ ಆಟಗಾರ ಧರಿಸಬೇಕು ಎಂದು ಬರೆದುಕೊಂಡಿದ್ದಾರೆ. ಇದೇ ವೇಳೆಯಲ್ಲಿ ತನ್ನ ಸಹ ಆಟಗಾರರು ಹಾಗೂ ಇಂಗ್ಲೆಂಡ್ ತಂಡದ ಸಿಬ್ಬಂದಿ ವರ್ಗಕ್ಕೆ ಕೃತಜ್ಞತೆ ಸಲ್ಲಿಸಿರುವ ಬೆನ್ ಸ್ಟೋಕ್ಸ್ ಇಂಗ್ಲೆಂಡ್ ತಂಡದ ಅಭಿಮಾನಿಗಳನ್ನು ವಿಶ್ವದ ಅತ್ಯುತ್ತಮ ಅಭಿಮಾನಿಗಳು ಎಂದು ಹೊಗಳುವುದರ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ.


Click it and Unblock the Notifications












