
ಗಾಯಾಳುವಾಗಿ ತಂಡದಿಂದ ಹೊರಬಿದ್ದಿದ್ದ ರೋಹಿತ್ ಶರ್ಮಾ ಕುರಿತು ಸಾಕಷ್ಟು ಊಹಾಪೋಹಗಳು ಸೃಷ್ಟಿಯಾಗಿದ್ದವು. ಆದರೆ ರೋಹಿತ್ ಸನ್‌ರೈಸರ್ಸ್ ಹೈದ್ರಾಬಾದ್ ವಿರುದ್ಧ ಮತ್ತೆ ಕಣಕ್ಕಿಳಿಯುವ ಮೂಲಕ ತಮ್ಮ ಫಿಟ್ನೆಸ್ ಸಾಭೀತುಪಡಿಸಿದರು.
ರೋಹಿತ್ ಶರ್ಮಾ ಐಪಿಎಲ್ ಕೊನೆಯ ಲೀಗ್ ಪಂದ್ಯಗಳ ವೇಳೆಯಲ್ಲಿ ಹ್ಯಾಮ್‌ಸ್ಟ್ರಿಂಗ್‌ನಿಂದ ಬಳಲುತ್ತಿದ್ದರು. ಪರಿಣಾಮ ತಂಡದಿಂದ ಹೊರಗುಳಿದಾಗ ಅನಿವಾರ್ಯವಾಗಿ ಮುಂಬೈ ಇಂಡಿಯನ್ಸ್ ತಂಡವನ್ನು ಆಲ್‌ರೌಂಡರ್ ಕಿರಾನ್ ಪೊಲಾರ್ಡ್ ಮುನ್ನೆಡೆಸಿದ್ದರು. ಯಾವಾಗ ಮತ್ತೆ ಮರಳುತ್ತಾರೆ ಎಂಬ ಖಚಿತತೆ ದೊರೆತಿರಲಿಲ್ಲ.
ಹೀಗಾಗಿ ಬಿಸಿಸಿಐ ಹಿರಿಯ ಆಟಗಾರರ ಆಯ್ಕೆ ಸಮಿತಿ ಟೀಮ್ ಇಂಡಿಯಾ ಉಪನಾಯಕ ರೋಹಿತ್ ಶರ್ಮಾರನ್ನು ಆಸ್ಟ್ರೇಲಿಯಾ ಪ್ರವಾಸಕ್ಕೆ ಆಯ್ಕೆ ಮಾಡಿರಲಿಲ್ಲ. ರೋಹಿತ್ ಶರ್ಮಾ ಫಿಟ್ನೆಸ್ ಕುರಿತು ಯಾವುದೇ ಮಾಹಿತಿ ಇರದ ಹಿನ್ನೆಲೆಯಲ್ಲಿ ಆಯ್ಕೆ ಸಮಿತಿಯು ಮೂರು ಫಾರ್ಮೆಟ್‌ನ ಸರಣಿಗೆ ರೋಹಿತ್‌ರನ್ನು ಹೊರಗಿಟ್ಟಿತ್ತು. ಆದರೆ ಎಸ್‌ಆರ್‌ಹೆಚ್ ವಿರುದ್ಧ ಕಣಕ್ಕಿಳಿದು ರೋಹಿತ್ ಅನೇಕ ಪ್ರಶ್ನೆಗಳಿಗೆ ಉತ್ತರಿಸಿದರು.
ಪಂದ್ಯ ಮುಗಿದ ಬಳಿಕ ಮಾತನಾಡಿದ ರೋಹಿತ್ ಶರ್ಮಾಗೆ ಹ್ಯಾಮ್‌ಸ್ಟ್ರಿಂಗ್ (ಮಂಡಿರಜ್ಜು) ಕುರಿತು ಪ್ರಶ್ನೆಗಳನ್ನು ಕೇಳಲಾಯಿತು. ಆದರೆ ಆ ಎಲ್ಲ ಆತಂಕಗಳನ್ನು ಹಿಟ್‌ಮ್ಯಾನ್ ತಳ್ಳಿಹಾಕಿದ್ದಾರೆ. ರೋಹಿತ್, ತನ್ನ ಹ್ಯಾಮ್‌ಸ್ಟ್ರಿಂಗ್ ಸಂಪೂರ್ಣವಾಗಿ ಉತ್ತಮವಾಗಿದೆ ಎಂದು ಹೇಳುವ ಅವರ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಇದರ ಜೊತೆಗೆ ರೋಹಿತ್ ಆಸ್ಟ್ರೇಲಿಯಾ ವಿರುದ್ಧ ಆಡಲು ಟೀಮ್ ಇಂಡಿಯಾ ಜೊತೆ ಪ್ರವಾಸ ಮಾಡುವುದು ಮೇಲ್ನೋಟಕ್ಕೆ ಖಚಿತವಾಗಿದೆ.