For Quick Alerts
ALLOW NOTIFICATIONS  
For Daily Alerts
 

ಅವರನ್ನು ಪರಿಗಣಿಸದಿದ್ದರೆ ಅದು ಮೂರ್ಖತನ: ಇಂಗ್ಲೆಂಡ್ ಟೆಸ್ಟ್ ನಾಯಕ ಬೆನ್ ಸ್ಟೋಕ್ಸ್ ಹೇಳಿಕೆ

Its stupid to not consider them for selection said Ben Stokes on James Anderson and Stuart Broad

ಇಂಗ್ಲೆಂಡ್ ಟೆಸ್ಟ್ ತಂಡಕ್ಕೆ ಬೆನ್ ಸ್ಟೋಕ್ಸ್ ನಾಯಕನಾಗಿ ನೇಮಕಗೊಂಡಿದ್ದಾರೆ. ಮೇ 3ರಂದು ಬೆನ್ ಸ್ಟೋಕ್ಸ್ ಅಧಿಕೃತವಾಗಿ ಇಂಗ್ಲೆಂಡ್ ತಂಡದ ನಾಯಕನಾಗಿ ಜವಾಬ್ಧಾರಿ ವಹಿಸಿಕೊಂಡಿದ್ದಾರೆ. ಜೋ ರೂಟ್ ಅವರಿಂದ ನಾಯಕತ್ವ ವಹಿಸಿಕೊಂಡ ಸ್ಟೋಕ್ಸ್ ನಾಯಕನಾಗಿ ಚೊಚ್ಚಲ ಮಾಧ್ಯಮ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಅವರು ತಂಡದಲ್ಲಿನ ಕೆಲ ಮಹತ್ವದ ವಿಚಾರಗಳ ಬಗ್ಗೆ ಮಾತನಾಡಿದರು.

ಬೆನ್ ಸ್ಟೋಕ್ಸ್ ನಾಯಕನಾಗಿ ತಮ್ಮ ಮೊದಲ ಮಾಧ್ಯಮಗೋಷ್ಠಿಯಲ್ಲಿ ಇಂಗ್ಲೆಂಡ್ ಟೆಸ್ಟ್ ತಂಡದ ಆಯ್ಕೆ ಹಾಗೂ ಬೆಳವಣಿಗೆ ವಿಚಾರವಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ಈ ವಿಚಾರವಾಗಿ ಕೆಲ ಸುಳಿವುಗಳನ್ನು ಬಿಟ್ಟುಕೊಟ್ಟಿದ್ದಾರೆ. ಅದರಲ್ಲಿ ಅನುಭವಿ ಆಟಗಾರರಾದ ಜೇಮ್ಸ್ ಆಂಡರ್ಸನ್ ಹಾಗೂ ಸ್ಟುವರ್ಟ್ ಬ್ರಾಡ್ ಮರಳಿ ತಂಡಕ್ಕೆ ಸೆರ್ಪಡೆ ಬಗ್ಗೆಯೂ ತಮ್ಮ ಅಭಿಪ್ರಾಯವನ್ನು ಬೆನ್ ಸ್ಟೋಕ್ಸ್ ಮುಕ್ತವಾಗಿ ಹಂಚಿಕೊಂಡಿದ್ದಾರೆ.

ಇಂಗ್ಲೆಂಡ್ ಟೆಸ್ಟ್ ತಂಡಕ್ಕೆ ಜೇಮ್ಸ್ ಆಂಡರ್ಸನ್ ಹಾಗೂ ಸ್ಟುವರ್ಟ್ ಬ್ರಾಡ್ ಅವರನ್ನು ಆಯ್ಕೆ ಮಾಡದಿದ್ದರೆ ಅದು ಅತ್ಯಂತ ಮೂರ್ಖತನದ ಕೆಲಸವಾಗುತ್ತದೆ ಎಂದಿದ್ದಾರೆ. ಅವರಿಬ್ಬರು ಕೂಡ ಇಂಗ್ಲೆಂಡ್‌ನ ಶ್ರೇಷ್ಠ ವೇಗದ ಬೌಲರ್‌ಗಳು ಎಂದು ಪ್ರತಿಕ್ರಿಯಿಸಿದ್ದಾರೆ ಬೆನ್ ಸ್ಟೋಕ್ಸ್. "ಟೆಸ್ಟ್ ತಂಡದ ಗೆಲುವಿಗೆ ಅತ್ಯುತ್ತಮವಾದ ದಾರಿಯೆಂದರೆ ಶ್ರೇಷ್ಠ 11 ಆಟಗಾರರನ್ನು ಆಡುವ ಬಳಗಕ್ಕೆ ಸೇರಿಸಿಕೊಳ್ಳುವುದು. ಜೇಮ್ಸ್ ಆಂಡರ್ಸನ್ ಹಾಗೂ ಸ್ಟುವರ್ಟ್ ಬ್ರಾಡ್ ಆಡಲು ಸಮರ್ಥರಾಗಿದ್ದರೆ ಅವರನ್ನು ಆಯ್ಕೆಗೆ ಪರಿಗಣಿಸಲೇಬೇಕಿದೆ. ಇಂಗ್ಲೆಂಡ್ ಕಂಡ ಶ್ರೇಷ್ಠ ಬೌಲರ್‌ಗಳು ಅವರು. ಅವರನ್ನು ಆಯ್ಕೆಗೆ ಪರಿಗಣಸದಿದ್ದರೆ ಅದು ನಿಮ್ಮ ಮೂರ್ಖತನ ಎಂದಿದ್ದಾರೆ ಬೆನ್ ಸ್ಟೋಕ್ಸ್. ಆಶಸ್ ಸೋಲಿನ ಬಳಿಕ ತಂಡದಿಂದ ಹೊರಗಿಟ್ಟ ನಂತರ ಜೇಮ್ಸ ಆಂಡರ್ಸನ್ ಹಾಗೂ ಸ್ಟುವರ್ಟ್ ಬ್ರಾಡ್ ಇಬ್ಬರು ಕೂಡ ತಮ್ಮ ಅಸಮಾಧಾನವನ್ನು ಬಹಿರಂಗವಾಗಿಯೇ ಹೇಳಿಕೊಂಡಿದ್ದರು.

ಇಂಗ್ಲೆಂಡ್ ತಂಡದ ನಾಯಕನಾಗಿದ್ದ ಜೋ ರೂಟ್ ಈ ತಿಂಗಳ ಆರಂಭದಲ್ಲಿ ಟೆಸ್ಟ್ ಕ್ರಿಕೆಟ್‌ನ ನಾಯಕತ್ವವನ್ನು ತೊರೆಯುವ ನಿರ್ಧಾರ ಪ್ರಕಟಿಸಿದ್ದರು. ಆಸ್ಟ್ರೇಲಿಯಾ ವಿರುದ್ಧದ ಆಶಸ್ ಟೆಸ್ಟ್ ಸರಣಿ ಸೇರಿದಂತೆ ಇತ್ತೀಚೆಗೆ ಟೆಸ್ಟ್ ಮಾದರಿಯಲ್ಲಿ ಇಂಗ್ಲೆಂಡ್ ತಂಡ ಸತತವಾಗಿ ವೈಫಲ್ಯ ಅನುಭವಿಸಿದ ಬಳಿಕ ಜೋ ರೂಟ್ ನಾಯಕತ್ವದಿಂದ ಕೆಳಕ್ಕಿಳಿಯಬೇಕು ಎಂಬ ಕೂಡ ಜೋರಾಗಿ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಜೋ ರೂಟ್ ಇಂಗ್ಲೆಂಡ್ ತಂಡದ ಟೆಸ್ಟ್ ನಾಯಕತ್ವದ ಜವಾಬ್ಧಾರಿಯಿಂದ ಹೊರ ಬರುವ ನಿರ್ಧಾರ ತೆಗೆದುಕೊಂಡಿದ್ದರು. ಕೇವಲ ಆಟಗಾರನಾಗಿ ಮಾತ್ರವೇ ಮುಂದುವರಿಯುವುದಾಗಿ ಘೋಷಿಸಿದ್ದರು.

ಬೆನ್ ಸ್ಟೋಕ್ಸ್ 2013ರ ಡಿಸೆಂಬರ್‌ನಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದು ಇಂಗ್ಲೆಂಡ್ ಪರವಾಗಿ 79 ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದಾರೆ. 2017ರಲ್ಲಿ ಇಂಗ್ಲೆಂಡ್ ಟೆಸ್ಟ್ ತಂಡದ ಉಪನಾಯಕನಾಗಿ ಆಯ್ಕೆಯಾಗಿದ್ದರು. ಜೋ ರೂಟ್ ಅಲಭ್ಯತೆಯಲ್ಲಿ ಇಂಗ್ಲೆಂಡ್ ತಂಡವನ್ನು ಮುನ್ನಡೆಸಿದ ಅನುಭವ ಕೂಡ ಹೊಂದಿದ್ದಾರೆ ಬೆನ್ ಸ್ಟೋಕ್ಸ್. ಇದೀಗ ಪೂರ್ಣ ಪ್ರಮಾಣದ ನಾಯಕನಾಗುವ ಮೂಲಕ ಇಂಗ್ಲೆಂಡ್ ಟೆಸ್ಟ್ ತಂಡದ 81ನೇ ನಾಯಕ ಎನಿಸಿಕೊಂಡಿದ್ದಾರೆ.

ಕೈ ಬೆರಳಿನ ಗಾಯ ಹಾಗೂ ಮಾನಸಿಕ ಆರೋಗ್ಯದ ಕಾಣವನ್ನು ಮುಂದಿಟ್ಟು ಬೆನ್ ಸ್ಟೋಕ್ಸ್ ಕಳೆದ ಕೆಲ ತಿಂಗಳುಗಳಿಂದ ಕ್ರಿಕೆಟ್‌ನಿಂದ ಸಂಪೂರ್ಣವಾಗಿ ದೂರವುಳಿದಿದ್ದರು. ಈ ಬಾರಿಯ ಐಪಿಎಲ್‌ನಿಂದಲೂ ಸ್ಟೋಕ್ಸ್ ಹೊರಗುಳಿದಿದ್ದಾರೆ. ಇದೀಗ ಇಂಗ್ಲೆಂಡ್ ಟೆಸ್ಟ್ ತಂಡವನ್ನು ಮುನ್ನಡೆಸಲು ಪೂರ್ಣ ಪ್ರಮಾಣದಲ್ಲಿ ಬೆನ್ ಸ್ಟೋಕ್ಸ್ ಸಜ್ಜಾಗಿದ್ದಾರೆ.

Story first published: Wednesday, May 4, 2022, 10:13 [IST]
Other articles published on May 4, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+