For Quick Alerts
ALLOW NOTIFICATIONS  
For Daily Alerts
 

ಸಚಿನ್‌ ದಾಖಲೆ ಮುರಿಯಲು ಜಡೇಜಾಗೆ ಇನ್ನು 2 ವಿಕೆಟ್‌

ತಮ್ಮ ವೃತ್ತಿ ಬದುಕು ಇನ್ನೇನು ಮುಗಿದೇ ಬಿಟ್ಟಿತ್ತು ಎಂದಾಗ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡ ಆಟಗಾರ ರವೀಂದ್ರ ಜಡೇಜಾ. ಸ್ಟಾರ್ ಆಲ್‌ರೌಂಡರ್‌ ಅವರಿಗೆ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಆಡುವ ಅವಕಾಶ ಸಿಗುತ್ತದೆಯೇ ಎಂಬ ಸಂಶಯ ಎಲ್ಲರಲ್ಲೂ ಮನೆ ಮಾಡಿತ್ತು. ಆದರೆ ಇಂಗ್ಲೆಂಡ್ ಪ್ರವಾಸದಲ್ಲಿ ಇವರಿಗೆ ಚಾನ್ಸ್‌ ಸಿಕ್ಕಿತು. ಈ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡ ರವೀಂದ್ರ ಜಡೇಜಾ ಅಬ್ಬರಿಸಿದರು.

ಬೌಲಿಂಗ್‌ನಲ್ಲಿ ಮಿಂಚಬೇಕಿದ್ದ ಜಡೇಜಾ ಆಂಡರ್ಸನ್‌, ತೆಂಡೂಲ್ಕರ್ ಸರಣಿಯಲ್ಲಿ ಇವರು ಬ್ಯಾಟಿಂಗ್‌ನಲ್ಲಿ ಆರ್ಭಟಿಸಿದ್ದರು. ಇವರು ಈ ಸರಣಿಯಲ್ಲಿ ಶತಕಗಳನ್ನು ಬಾರಿಸಿದರೆ, ಮಹತ್ವದ ಸಮಯದಲ್ಲಿ ತಂಡಕ್ಕೆ ತಮ್ಮ ಕಲಾತ್ಮಕ ಬ್ಯಾಟಿಗ್‌ನಿಂದ ಆಧಾರವಾಗಿದ್ದರು. ಹೀಗಾಗಿ ಟೀಮ್ ಮ್ಯಾನೇಜ್ಮೆಂಟ್ ಇವರ ಮೇಲೆ ಭರವಸೆ ಇಟ್ಟು ವೆಸ್ಟ್‌ ಇಂಡೀಸ್‌ ವಿರುದ್ಧ ಸರಣಿಗೂ ಇವರಿಗೆ ಆಡಲು ಅವಕಾಶ ನೀಡಿತು. ಈ ಸರಣಿಯಲ್ಲೂ ಇವರು ಇದೇ ಪ್ರದರ್ಶನ ಮುಂದುವರೆಸಿದ್ದಾರೆ.

Jadeja Eyes Tendulkar s Eden Gardens Record amp amp 350 Test Wickets Milestone in South Africa Series

ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ರವೀಂದ್ರ ಜಡೇಜಾ ಕಣಕ್ಕೆ ಇಳಿಯಲಿದ್ದಾರೆ. ಈ ವೇಳೆ ಎಲ್ಲರ ಕಣ್ಣುಗಳು ಇವರ ಮೇಲೆ ನೆಟ್ಟಿರಲಿವೆ. ಕೋಲ್ಕತ್ತಾದ ಈಡನ್ ಗಾರ್ಡನ್‌ ಅಂಗಳದಲ್ಲಿ ಜಡ್ಡು ದಾಖಲೆ ನಿರ್ಮಿಸುವ ಕನಸಿನಲ್ಲಿದ್ದಾರೆ. ಈಗಾಗಲೇ ಜಡೇಜಾ ಕೋಲ್ಕತ್ತಾ ಅಂಗಳದಲ್ಲಿ ಆಡಿದ 3 ಟೆಸ್ಟ್‌ ಪಂದ್ಯಗಳ 6 ಇನಿಂಗ್ಸ್‌ಗಳಲ್ಲಿ 4 ವಿಕೆಟ್‌ ಕಬಳಿಸಿದ್ದಾರೆ. ಮೊದಲ ಟೆಸ್ಟ್‌ನಲ್ಲಿ ಜಡೇಜಾ 2 ವಿಕೆಟ್‌ ಕಬಳಿಸುವಲ್ಲಿ ಸಫಲರಾದಲ್ಲಿ ಇವರು ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮೀರಿ ನಿಲ್ಲುತ್ತಾರೆ.

ಟೀಮ್ ಇಂಡಿಯಾದ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ಕೋಲ್ಕತ್ತಾ ಮೈದಾನದಲ್ಲಿ ಆಡಿದ 13 ಟೆಸ್ಟ್ ಪಂದ್ಯಗಳ 12 ಇನಿಂಗ್ಸ್‌ನಲ್ಲಿ 5 ವಿಕೆಟ್‌ ಪಡೆದಿದ್ದಾರೆ. ಜಡೇಜಾ ಇನ್ನು 2 ವಿಕೆಟ್‌ ಪಡೆದಲ್ಲಿ ಈ ಮೈದಾನದಲ್ಲಿ ಸಚಿನ್‌ ಗಿಂತಲೂ ಹೆಚ್ಚು ವಿಕೆಟ್‌ ಪಡೆದ ಸಾಧನೆ ಮಾಡಲಿದ್ದಾರೆ.

Jadeja Eyes Tendulkar s Eden Gardens Record amp amp 350 Test Wickets Milestone in South Africa Series

12 ವಿಕೆಟ್‌ ಪಡೆದರೆ...

ಭಾರತದ ಟರ್ನಿಂಗ್ ಟ್ರ್ಯಾಕ್‌ಗಳಲ್ಲಿ ರವೀಂದ್ರ ಜಡೇಜಾ ಅವರು ಯಾವಾಗಲೂ ಅಪಾಯಕಾರಿ. ಈ ಸರಣಿಯಲ್ಲಿ ಇವರು 12 ವಿಕೆಟ್‌ಗಳನ್ನು ಪಡೆಯುವಲ್ಲಿ ಸಫಲರಾದಲ್ಲಿ ಮತ್ತೊಂದು ಮೈಲಿಗಲ್ಲನ್ನು ತಲುಪಲಿದ್ದಾರೆ. ಇವರು ಈಗಾಗಲೇ ಟೆಸ್ಟ್‌ ಕ್ರಿಕೆಟ್‌ನಲ್ಲಿ ಆಡಿದ 87 ಟೆಸ್ಟ್‌ ಪಂದ್ಯಗಳ 169 ಇನಿಂಗ್ಸ್‌ಗಳಲ್ಲಿ 338 ವಿಕೆಟ್‌ ಕಬಳಿಸಿದ್ದಾರೆ. 2 ಟೆಸ್ಟ್‌ ಪಂದ್ಯಗಳ 4 ಇನಿಂಗ್ಸ್‌ಗಳಲ್ಲಿ ಜಡೇಜಾ 12 ವಿಕೆಟ್‌ ಪಡೆದಿದ್ದೇ ಆದಲ್ಲಿ, ಟೆಸ್ಟ್‌ ಕ್ರಿಕೆಟ್‌ನಲ್ಲಿ 350 ವಿಕೆಟ್‌ ಪಡೆದ ಸಾಧನೆ ಮಾಡಲಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ಭಾರತದ ಐದನೇ ಬೌಲರ್‌ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಳ್ಳಲಿದ್ದಾರೆ. ಈ ಮೊದಲು ಕನ್ನಡಿಗ ಅನಿಲ್‌ ಕುಂಬ್ಳೆ, ಆರ್‌ ಅಶ್ವಿನ್‌, ಕಪೀಲ್‌ ದೇವ್, ಹರ್ಭಜನ್‌ ಸಿಂಗ್ ಈ ದಾಖಲೆ ಸೃಷ್ಟಿಸಿದ್ದಾರೆ.

Story first published: Wednesday, November 12, 2025, 8:36 [IST]
Other articles published on Nov 12, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+