IND vs WI: ಕುಲ್‌ದೀಪ್ ಪಂಚ್‌ಗೆ ವಿಂಡೀಸ್ ತಬ್ಬಿಬ್ಬು: ಪ್ರವಾಸಿ ತಂಡ 248 ರನ್‌ಗೆ ಆಲೌಟ್
ಭರವಸೆಯ ಸ್ಪಿನ್ ಬೌಲರ್‌ಗಳಾದ ರವೀಂದ್ರ ಜಡೇಜಾ ಹಾಗೂ ಕುಲ್‌ದೀಪ್ ಯಾದವ್ ಅವರ ಅಮೋಘ ದಾಳಿಯ ನೆರವಿನಿಂದ ಟೀಮ್ ಇಂಡಿಯಾ 248 ರನ್‌ಗಳಿಗೆ ವೆಸ್ಟ್ ಇಂಡೀಸ್ ತಂಡವನ್ನು ಎರಡನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಕಟ್ಟಿ ಹಾಕಿದೆ.
ಶನಿವಾರ ಮೊದಲ ಇನಿಂಗ್ಸ್‌ನಲ್ಲಿ 4 ವಿಕೆಟ್‌ಗೆ 140 ರನ್‌ಗಳಿಂದ ಆಟವನ್ನು ಮುಂದವರೆಸಿದ ವೆಸ್ಟ್ ಇಂಡೀಸ್, ಮೊದಲ ಇನಿಂಗ್ಸ್‌ನಲ್ಲಿ ಫಾಲೋ ಆನ್ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಮೊದಲ ಇನಿಂಗ್ಸ್‌ನಲ್ಲಿ ಅಮೋಘ ಪ್ರದರ್ಶನ ನೀಡುತ್ತಿದ್ದ ಶಾಯ್ ಹೋಪ್ 5 ಬೌಂಡರಿ ನೆರವಿನಿಂದ 36 ರನ್ ಬಾರಿಸಿ ಔಟ್ ಆದರು. ಇವರು ಕುಲ್‌ದೀಪ್ ಯಾದವ್ ತೋಡಿದ ಖೆಡ್ಡಾಗೆ ಬಲಿಯಾದರು. ಆಫ್ ಸ್ಟಂಪ್ ಆಚೆ ಹೊರಟಿರುವ ಚೆಂಡನ್ನು ತಡಿಯಲು ಶಾಯ್ ಹೋಪ್ ಮುಂದಾದರು. ಈ ವೇಳೆ ಚೆಂಡು ಇವರನ್ನು ವಂಚಿಸಿ ಆಫ್ ಸ್ಟಂಪ್‌ಗೆ ಮುತ್ತಿಟಿತು.

ವೆಸ್ಟ್ ಇಂಡೀಸ್ ತಂಡದ ಟೆವಿನ್ ಇಮ್ಲಾಚ್ ಅವರ ತಾಳ್ಮೆ 21 ರನ್‌ಗಳಿಗೆ ಕೊನೆಯಾಯಿತು. ಇವರು 67 ಎಸೆತಗಳಲ್ಲಿ 3 ಬೌಂಡರಿ ನೆರವಿನಿಂದ 21 ರನ್ ಬಾರಿಸಿ ಕುಲ್‌ದೀಪ್ ಯಾದವ್ ಎಸೆತದಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಜಸ್ಟಿನ್ ಗ್ರೀವ್ಸ್ (17) ಸಹ ಕುಲ್‌ದೀಪ್ ಯಾದವ್ ಅವರ ಸ್ಪಿನ್ ಮೋಡಿ ಅರಿಯುವಲ್ಲಿ ವಿಫಲರಾದರು.
ವೆಸ್ಟ್ ಇಂಡೀಸ್ ತಂಡದ ಪರ ಆಂಡರ್ಸನ್ ಫಿಲಿಪ್ ವಿಂಡೀಸ್ ತಂಡದ ಪರ ಅತಿ ಹೆಚ್ಚು ಎಸೆತಗಳನ್ನು ಎದುರಿಸಿದರು. ಇವರು 93 ಎಸೆತಗಳನ್ನು ಎದುರಿಸಿ ಅಜೇಯ 24 ರನ್ ಸಿಡಿಸಿದರು. ಉಳಿದಂತೆ ವೆಸ್ಟ್ ಇಂಡೀಸ್ ತಂಡ 81.5 ಓವರ್‌ಗಳಲ್ಲಿ 248 ರನ್ ಕಲೆ ಹಾಕಿತು. ಈ ಮೂಲಕ ಟೀಮ್ ಇಂಡಿಯಾ ಮೊದಲ ಇನಿಂಗ್ಸ್‌ನಲ್ಲಿ 270 ರನ್ ಮುನ್ನಡೆ ಸಾಧಿಸಿದ್ದು, ಪ್ರವಾಸಿ ತಂಡಕ್ಕೆ ಫಾಲೋ ಆನ್ ನೀಡಿದೆ.
ಕುಲ್‌ದೀಪ್ ಮಿಂಚು
ಟೀಮ್ ಇಂಡಿಯಾದ ಯಶಸ್ವಿ ಸ್ಪಿನ್ ಬೌಲರ್ ಕುಲ್‌ದೀಪ್ ಯಾದವ್ 82 ರನ್‌ಗಳಿಗೆ 5 ವಿಕೆಟ್ ಕಬಳಿಸಿದರು. ಇನ್ನು ರವೀಂದ್ರ ಜಡೇಜಾ 3, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಜಾ ತಲಾ ಒಂದು ವಿಕೆಟ್ ಪಡೆದರು.
ಮೊದಲ ಇನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ ದಾಖಲೆ
ಭಾರತ ತಂಡ 518 ರನ್ ಗಳಿಸಿ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಇದು ದಾಖಲೆಯ ಪುಟಕ್ಕೆ ಸ್ಥಾನ ಪಡೆಯಿತು. ಮೊದಲ ಇನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ ಯಾವುದೇ ಬೈ ಅಥವಾ ಲೆಗ್ ಬೈ ದಾಖಲಾಗಲಿಲ್ಲ. ಈ ಮೂಲಕ ಯಾವುದೇ ಬೈ ಅಥವಾ ಲೆಗ್ ಬೈ ಇಲ್ಲದೇ ದಾಖಲಾಧ ಅತ್ಯಧಿಕ ಸ್ಕೊರ್ ಆಗಿದೆ. ಇದಕ್ಕೂ ಮೊದಲು ಬಾಂಗ್ಲಾದೇಶ 2018ರಲ್ಲಿ ಶ್ರೀಲಂಕಾ ವಿರುದ್ಧ ಯಾವುದೇ ಬೈ ಅಥವಾ ಲೆಗ್ ಬೈ ಇಲ್ಲದೆ 513 ರನ್ ಕಲೆ ಹಾಕಿದ ದಾಖಲೆಯನ್ನು ಟೀಮ್ ಇಂಡಿಯಾ ಅಳಿಸಿ ಹಾಕಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications