Champions Trophy 2025: ಪಾಕಿಸ್ತಾನಕ್ಕೆ ಗುಡ್ ನ್ಯೂಸ್ ಕೊಟ್ಟ ಜಯ್ ಶಾ!
ಆಗಸ್ಟ್ 2 ಶುಕ್ರವಾರ, 2025ರ ಚಾಂಪಿಯನ್ಸ್ ಟ್ರೋಫಿಗೆ ಆತಿಥ್ಯ ವಹಿಸಿರುವ ಪಾಕಿಸ್ತಾನ ಹಲವು ದಿನಗಳಿಂದ ಆತಂಕದಲ್ಲಿದೆ. ಆದರೆ ಇದೀಗ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ)ಗೆ ಗುಡ್ ನ್ಯೂಸ್ ನೀಡಿದ್ದಾರೆ.
ಜಯ್ ಶಾ ನೇತೃತ್ವದ ಐಸಿಸಿ ಸಮಿತಿಯು ಚಾಂಪಿಯನ್ಸ್ ಟ್ರೋಫಿಗಾಗಿ ಪಾಕಿಸ್ತಾನದ ಬಜೆಟ್ ಅನ್ನು ಅಂಗೀಕರಿಸಿದೆ. ಮುಂದಿನ ವರ್ಷ 2025 ರ ಆರಂಭದಲ್ಲಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯನ್ನು ಆಯೋಜಿಸಲು ಪಾಕಿಸ್ತಾನ ಸಜ್ಜಾಗಿದೆ.

ಆದರೆ ಭಾರತ ತಂಡ ಪಾಕಿಸ್ತಾನಕ್ಕೆ ಟೂರ್ನಿ ಆಡಲು ಹೋಗಲಿದೆಯೇ ಅಥವಾ ಇಲ್ಲವೇ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಈ ನಿರ್ಧಾರವನ್ನು ಭಾರತ ಸರ್ಕಾರ ತೆಗೆದುಕೊಳ್ಳಲಿದೆ.
ಪಾಕಿಸ್ತಾನದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯನ್ನು ಆಯೋಜಿಸಲು ಸುಮಾರು 70 ಮಿಲಿಯನ್ ಡಾಲರ್ ಬಜೆಟ್ ಅನ್ನು ಐಸಿಸಿ ಅನುಮೋದಿಸಿದೆ.
ಮೂಲಗಳ ಪ್ರಕಾರ, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ನೇತೃತ್ವದ ಐಸಿಸಿಯ ಹಣಕಾಸು ಮತ್ತು ವಾಣಿಜ್ಯ ಸಮಿತಿಯು ಈ ಬಜೆಟ್ ಅನ್ನು ಅಂಗೀರಿಸಿದೆ ಎನ್ನಲಾಗಿದೆ. ಈ ಪಂದ್ಯಾವಳಿಯ ಒಟ್ಟು ಬಜೆಟ್ ಸುಮಾರು 70 ಮಿಲಿಯನ್ ಡಾಲರ್ ಆಗಿದ್ದು, ಉಳಿದ ವೆಚ್ಚಕ್ಕಾಗಿ ಕೇವಲ 45 ಲಕ್ಷ ಡಾಲರ್‌ಗಳನ್ನು ನಿಗದಿಪಡಿಸಲಾಗಿದೆ.
ಐಸಿಸಿ ವಾರ್ಷಿಕ ಸಭೆ
ಚಾಂಪಿಯನ್ಸ್ ಟ್ರೋಫಿಯನ್ನು ಆಯೋಜಿಸಲು ಮತ್ತು ಭಾರತವನ್ನು ಪಾಕಿಸ್ತಾನಕ್ಕೆ ಆಹ್ವಾನಿಸಲು ಪಿಸಿಬಿ ಹತಾಶವಾಗಿದೆ. ಪಾಕಿಸ್ತಾನವು ಈ ಮೆಗಾ ಟೂರ್ನಿಯ ಕರಡು ವೇಳಾಪಟ್ಟಿಯನ್ನು ಐಸಿಸಿಗೆ ನೀಡಿದೆ.
ಇದರಲ್ಲಿ ಭಾರತದ ಎಲ್ಲಾ ಪಂದ್ಯಗಳನ್ನು ಲಾಹೋರ್‌ನಲ್ಲಿ ನಡೆಸುವುದಾಗಿ ತಿಳಿಸಲಾಗಿದೆ. ಆದರೆ ಟೀಮ್ ಇಂಡಿಯಾ ಪಾಕಿಸ್ತಾನಕ್ಕೆ ಹೋಗುವ ವಿಚಾರದಲ್ಲಿ ಐಸಿಸಿ ಮತ್ತು ಬಿಸಿಸಿಐ ಮೌನ ವಹಿಸಿದೆ.
ಕೊಲಂಬೊದಲ್ಲಿ ನಡೆದ ವಾರ್ಷಿಕ ಸಭೆಯಲ್ಲೂ ಈ ವಿಷಯದ ಬಗ್ಗೆ ಚರ್ಚೆ ನಡೆದಿಲ್ಲ. ಆದರೆ ಇದೀಗ ಜಯ್ ಶಾ ಪಾಕಿಸ್ತಾನಕ್ಕೆ ಒಂದು ಶುಭ ಸುದ್ದಿಯನ್ನು ನೀಡಿರುವುದು ಟೀಮ್ ಇಂಡಿಯಾ ಪಾಕಿಸ್ತಾನ ಪ್ರವಾಸ ಕೈಗೊಳ್ಳಲಿದೆಯೇ? ಎಂಬ ಅನುಮಾನವನ್ನು ಹುಟ್ಟು ಹಾಕಿದೆ.
ಮೌನ ಮುರಿದ ಪಿಸಿಬಿ
ಪಾಕಿಸ್ತಾನಕ್ಕೆ ಭಾರತ ಪ್ರವಾಸದ ಕುರಿತು ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಮೌನ ಮುರಿದಿದ್ದಾರೆ. ಚಾಂಪಿಯನ್ಸ್ ಟ್ರೋಫಿಗೆ ಟೀಮ್ ಇಂಡಿಯಾವನ್ನು ಕಳುಹಿಸುವ ಬಿಸಿಸಿಐ ನಿರ್ಧಾರಕ್ಕೆ ಸಂಬಂಧಿಸಿದಂತೆ ಯಾವುದೇ ಹೇಳಿಕೆ ನೀಡದಂತೆ ಅವರು ತಮ್ಮ ಕಚೇರಿ ಮತ್ತು ಸಹೋದ್ಯೋಗಿಗಳಿಗೆ ಸಲಹೆ ನೀಡಿದ್ದಾರೆ.
ಪಿಟಿಐ ಪ್ರಕಾರ, ಪಿಸಿಬಿ ಮುಖ್ಯಸ್ಥರು ಮತ್ತು ಇತರ ಅಧಿಕಾರಿಗಳು ಈ ವಿಷಯದ ಬಗ್ಗೆ ಈ ಯೋಜನೆಯನ್ನು ಮಾಡಿದ್ದಾರೆ. ಈ ವಿಷಯವನ್ನು ಐಸಿಸಿಗೆ ಬಿಡಬೇಕು ಎಂದು ನಿರ್ಧರಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications