For Quick Alerts
ALLOW NOTIFICATIONS  
For Daily Alerts
 

ಸ್ಟುವರ್ಟ್ ಬ್ರಾಡ್ ನಿವೃತ್ತಿಯ ಬೆನ್ನಲ್ಲೇ ಪ್ರಮುಖ ನಿರ್ಧಾರ ಪ್ರಕಟಿಸಿದ ಜೇಮ್ಸ್ ಆಂಡರ್ಸನ್

ಇಂಗ್ಲೆಂಡ್ ತಂಡದ ದಿಗ್ಗಜ ವೇಗದ ಬೌಲರ್ ಜೇಮ್ಸ್ ಆಂಡರ್ಸನ್ ನಿವೃತ್ತಿಯ ವಿಚಾರವಾಗಿ ಮಾತನಾಡಿದ್ದು ಸ್ಪಷ್ಟನೆ ನೀಡಿದ್ದಾರೆ. ಸದ್ಯಕ್ಕೆ ನಿವೃತ್ತಿಯ ಬಗ್ಗೆ ನಾನು ಯೋಚನೆ ಮಾಡಿಲ್ಲ ಎಂದು ಆಂಡರ್ಸನ್ ಹೇಳಿದ್ದು ಇನ್ನಷ್ಟು ಕಾಲ ಆಡುವ ಇಚ್ಚೆಯಿದೆ ಎಂದು ಹೇಳಿಕೊಂಡಿದ್ದಾರೆ. ಈ ಮೂಲಕ ಬ್ರಾಡ್ ನಿವೃತ್ತಿಯ ಬಳಿಕ ಆಂಡರ್ಸನ್ ವಿಚಾರವಾಗಿ ನಡೆಯುತ್ತಿರುವ ಚರ್ಚೆಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಇಂಗ್ಲೆಂಡ್ ತಂಡದ ಮತ್ತೋರ್ವ ದಿಗ್ಗಜ ವೇಗದ ಬೌಲರ್ ಸ್ಟುವರ್ಟ್ ಬ್ರಾಡ್ ತಮ್ಮ ನಿವೃತ್ತಿಯನ್ನು ಈಗಾಗಲೇ ಘೋಷಿಸಿದ್ದು ಓವಲ್‌ನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯ ತನ್ನ ಅಂತಿಮ ಪಂದ್ಯ ಎಂದು ಪ್ರಕಟಿಸಿದ್ದಾರೆ. ಹೀಗಾಗಿ ಸೋಮವಾರ ಕೊನೆಯ ಬಾರಿಗೆ ಬ್ರಾಡ್ ಅಂತಾರಾಷ್ಟ್ರೀಯ ಪಂದ್ಯವನ್ನಾಡಲು ಕಣಕ್ಕಿಳಿದಿದ್ದಾರೆ. ಈ ಪಂದ್ಯಕ್ಕೂ ಮುನ್ನ ಆಂಡರ್ಸನ್ ತಮ್ಮ ನಿವೃತ್ತಿಯ ವಿಚಾರವಾಗಿ ಸ್ಪಷ್ಟನೆ ನೀಡಿದ್ದಾರೆ.

James Anderson clarification on his retirement said not retiring anytime soon after Ashes 2023

ಪಂದ್ಯದ ಕೊನೆಯ ದಿನದಾಟ ಆರಂಭಕ್ಕೂ ಮುನ್ನ ಸ್ಕೈ ಸ್ಪೋರ್ಟ್ಸ್ ಜೊತೆಗೆ ಮಾತನಾಡಿದ ಆಂಡರ್ಸನ್ "ನಾನು ಸಾಕಷ್ಟು ಸದೃಢವಾಗಿದ್ದು ಮುಂದುವರಿಯಲು ಬಯಸುತ್ತೇನೆ. ನಾನ್ನ ದೇಹ ಚೆನ್ನಾಗಿದೆ, ನನ್ನ ಕೌಶಲ್ಯಗಳು ಉತ್ತಮವಾಗಿದೆ. ನನ್ನಿಂದ ನಿರೀಕ್ಷಿಸಿದ ಮಟ್ಟದ ಬೌಲಿಂಗ್ ಪ್ರದರ್ಶನ ನೀಡಲು ಸಾಧ್ಯವಾಗದಿದ್ದರು ಕೂಡ ನಾನು ಬೌಲಿಂಗನ್ನು ಉತ್ತಮವಾಗಿಯೇ ಮಾಡುತ್ತಿದ್ದೇನೆ" ಎಂದಿದ್ದಾರೆ ಜೇಮ್ಸ್ ಆಂಡರ್ಸನ್.

ಇನ್ನು ಇದೇ ಸಂದರ್ಭದಲ್ಲಿ ಆಂಡರ್ಸನ್ ತಮ್ಮ ದೀರ್ಘಕಾಲದ ಜೊತೆಗಾರ ವೇಗಿ ಸ್ಟುವರ್ಟ್ ಬ್ರಾಡ್ ನಿವೃತ್ತಿ ಘೋಷಣೆಯ ನಿರ್ಧಾರ ತನಗೆ ಆಘಾತ ನೀಡಿತು ಎಂದಿದ್ದಾರೆ. "ಬ್ರಾಡ್ ಈ ಬಗ್ಗೆ ನನಗೆ ಹೇಳಿದಾಗ ನಾನು ಸ್ವಲ್ಪ ಆಘಾತಕ್ಕೆ ಒಳಗಾದೆ. ನಾವಿಬ್ಬರು ಜೊತೆಯಾಗಿ ಆಡುವದನ್ನು ಬಹಳ ಇಷ್ಟಪಡುತ್ತೇವೆ. ಅದು ಬಹಳ ವಿಶೇಷ ಹಾಗೂ ನಾನು ಖಂಡಿತವಾಗಿಯೂ ಆತನನ್ನು ಮಿಸ್ ಮಾಡಿಕೊಳ್ಳುತ್ತೇನೆ" ಎಂದಿದ್ದಾರೆ ಆಂಡರ್ಸನ್.

"ನಾನು ಆತನ ನಿರ್ಧಾರವನ್ನು ಗೌರವಿಸುತ್ತೇನೆ. ಆತ ತಾನು ಏನು ಮಾತ್ತಿದ್ದೇನೆ ಎಂಬುದರ ವಿಚಾರವಾಗಿ ಬಹಳ ಸ್ಪಷ್ಟವಾಗಿದ್ದಾರೆ. ನಿನ್ನೆ ಬೆಳಿಗ್ಗೆ ಮೈದಾನದಲ್ಲಿ ಅವರೊಂದಿಗೆ ಕಣಕ್ಕಿಳಿಯುವುದು ಬ್ಯಾಟಿಂಗ್‌ನಲ್ಲಿ ಆತ ಕೊನೆಯ ಚೆಂಡನ್ನು ಸಿಕ್ಸ್‌ಗೆ ಹೊಡೆಯುವುದನ್ನು ನೋಡುವುದು ನಿಜವಾಗಿಯೂ ವಿಶೇಷವಾಗಿತ್ತು" ಎಂದಿದ್ದಾರೆ ಆಂಡರ್ಸನ್.

ಇನ್ನು ನಾಲ್ಕನೇ ದಿನದಾಟದಲ್ಲಿ ಮಳೆಯಿಂದಾಗಿ ಕೊನೆಯ ದಿನದಾಟದ ಆರಂಭದಲ್ಲಿಯೇ ಆಸ್ಟ್ರೇಲಿಯಾ ತಂಡ ದೊಡ್ಡ ಹಿನ್ನಡೆ ಕಂಡಿದೆ. ಎರಡನೇ ಇನ್ನಿಂಗ್ಸ್‌ನಲ್ಲಿ ಭರ್ಜರಿ ಆರಂಭ ನೀಡುವ ಮೂಲಕ ನಾಲ್ಕನೇ ದಿನದಾಟದಲ್ಲಿ ಗಮನಸೆಳೆದಿದ್ದ ಆರಂಭಿಕರಾದ ಡೇವಿಡ್ ವಾರ್ನರ್ ಹಾಗೂ ಉಸ್ಮಾನ್ ಖವಾಜ ಕೊನೆಯ ದಿನದಾಟದ ಆರಂಭದಲ್ಲಿಯೇ ವಿಕೆಟ್ ಕಳೆದುಕೊಂಡಿದ್ದಾರೆ. ವಾರ್ನರ್ 60 ರನ್‌ಗೆ ಇನ್ನಿಂಗ್ಸ್ ಅಂತ್ಯಗೋಳಿಸಿದರೆ ಖವಾಜ 72 ರನ್‌ಗಳನ್ನು ಗಳಿಸಿ ಔಟಾದರು.

ಆಸ್ಟ್ರೇಲಿಯಾ ಆಡುವ ಬಳಗ: ಡೇವಿಡ್ ವಾರ್ನರ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಶೇನ್ ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮ್ಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಜಲ್‌ವುಡ್, ಟಾಡ್ ಮರ್ಫಿ
ಇಂಗ್ಲೆಂಡ್: ಝಾಕ್ ಕ್ರಾಲಿ, ಬೆನ್ ಡಕೆಟ್, ಮೊಯಿನ್ ಅಲಿ, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್ (ನಾಯಕ), ಜೊನಾಥನ್ ಬೈರ್‌ಸ್ಟೋವ್ (ವಿಕೆಟ್ ಕೀಪರ್), ಕ್ರಿಸ್ ವೋಕ್ಸ್, ಮಾರ್ಕ್ ವುಡ್, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆಂಡರ್ಸನ್.

Story first published: Monday, July 31, 2023, 18:32 [IST]
Other articles published on Jul 31, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+