
ಲಂಡನ್, ಮಾರ್ಚ್ 19: ಕೊರೊನಾವೈರಸ್‌ನಿಂದ ಕ್ರಿಕೆಟ್ ರಂಗದ ಎಲ್ಲಾ ಚಟುವಟಿಕೆಗಳು ನಿಂತಿವೆ. ಹೀಗಾಗಿ ಯಾವಾಗಲೂ ಬ್ಯುಸಿ ಶೆಡ್ಯೂಲ್‌ನಲ್ಲಿರಬೇಕಾಗಿದ್ದ ಕ್ರಿಕೆಟರ್‌ಗಳೆಲ್ಲ ಅನೀರೀಕ್ಷಿತ ಬ್ರೇಕ್ ಅನುಭವಿಸಬೇಕಾಗಿ ಬಂದಿದೆ. ಬಿಡುವಿನಲ್ಲರುವ ಇಂಗ್ಲೆಂಡ್ ಕ್ರಿಕೆಟಿಗ, ಜೇಮ್ಸ್ ಆ್ಯಂಡರ್ಸನ್ ಕೊರೊನಾ ವಿರುದ್ಧ ಫಿಟ್ ಆಗಿರೋಕೆ ವಿಭಿನ್ನ ಐಡಿಯಾ ಕಂಡುಕೊಂಡಿದ್ದಾರೆ.
ವೇಗದ ಬೌಲರ್ ಆಗಿರುವ ಜೇಮ್ಸ್ ಆ್ಯಂಡರ್ಸನ್ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ವೀಡಿಯೋ ಹಾಕಿಕೊಂಡಿದ್ದಾರೆ. ಅದರಲ್ಲಿ ಆ್ಯಂಡರ್ಸನ್ ವ್ಯಾಯಾಮ ನಡೆಸುತ್ತಿರುವ ದೃಶ್ಯವಿದೆ. ಆದರೆ ವ್ಯಾಯಾಮಕ್ಕಾಗಿ ಜೇಮ್ಸ್ ತನ್ನ ಮಗಳ ಸಹಾಯ ಪಡೆದುಕೊಂಡಿದ್ದಾರೆ.
ವೇಟ್ ಪ್ಲೇಟ್‌ಗಳನ್ನು ಲೋಡ್ ಮಾಡಿದ್ದ ಬಾರ್ ಎತ್ತುವ ಬದಲು ಆ್ಯಂಡರ್ಸನ್ ತನ್ನ ಮಗಳನ್ನು ಎತ್ತಿ ವ್ಯಾಯಾಮ ನಡೆಸುತ್ತಿರುವ ದೃಶ್ಯ ವೀಡಿಯೋದಲ್ಲಿದೆ. ವೀಡಿಯೋದ ಜೊತೆಗೆ, 'ಮನೆಯಲ್ಲಿ ಅಭ್ಯಾಸ ನಡೆಸೋಕೆ ಈ ಹುಡುಗಿಯರು ಖುಷಿಯಿಂದಲೇ ಸಹಾಯ ಮಾಡುತ್ತಿದ್ದಾರೆ,' ಎಂದು ಸಾಲೊಂದನ್ನೂ ಆ್ಯಂಡರ್ಸನ್ ಬರೆದುಕೊಂಡಿದ್ದಾರೆ.
ಮಾರ್ಚ್ ಕೊನೆಯಲ್ಲಿ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆ್ಯಂಡರ್ಸನ್ ಆಡುವುದರಲ್ಲಿದ್ದರು. ಆದರೆ ಕೊರೊನಾವೈರಸ್‌ನಿಂದಾಗಿ ಆ ಸರಣಿ ರದ್ದಾಗಿದೆ. ಹೀಗಾಗಿ ಆ್ಯಂಡರ್ಸನ್ ಬಿಡುವಿನ ವೇಳೆ ಕಳೆಯಬೇಕಾಗಿ ಬಂದಿದೆ. ದೈಹಿಕವಾಗಿ ಫಿಟ್ ಆಗಿದ್ದಷ್ಟು ಕೊರೊನಾ ಸೋಂಕು ತಡೆಗಟ್ಟಬಹುದು ಎಂದು ಹೇಳಲಾಗಿರುವುದರಿಂದ ಆ್ಯಂಡರ್ಸನ್ ಕೂಡ ಫಿಟ್‌ನೆಸ್ ಮೊರೆ ಹೋಗಿದ್ದಾರೆ.