Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

James Anderson: ವಿಶ್ವ ದಾಖಲೆಯಿಂದ ಐದು ಹೆಜ್ಜೆ ದೂರ: ರಾಜ್‌ಕೋಟ್‌ನಲ್ಲಿ ಇಂಗ್ಲೆಂಡ್‌ ವೇಗಿ ಮುಟ್ಟುತ್ತಾರಾ ಮೈಲಿಗಲ್ಲು

ಜೇಮ್ಸ್‌ ಆಂಡರ್ಸನ್‌.. ಈ ಹೆಸರು ಇಂಗ್ಲೆಂಡ್‌ ತಂಡದಲ್ಲಿ ಇದ್ದರೆ ಸಾಕು ಎದುರಾಳಿಗೆ ಭಯ.. ತಮ್ಮ ಕಾರಾರುವಾಕ್ ದಾಳಿಯಿಂದ ಎದುರಾಳಿಗಳನ್ನು ನಡುಗಿಸಬಲ್ಲ ಕ್ಷಮತೆ ಹೊಂದಿರುವ ಬೌಲರ್.. ವಿಶ್ವ ಕ್ರಿಕೆಟ್‌ನಲ್ಲಿ ತನ್ನದೇ ಛಾಪು ಮೂಡಿಸಿರುವ ಸ್ಟಾರ್ ಪ್ಲೇಯರ್‌, ವಿಶಿಷ್ಟ ದಾಖಲೆಯ ಸನಿಹದಲ್ಲಿದ್ದಾರೆ. ಭಾರತಕ್ಕೆ ಆರನೇ ಬಾರಿ ಪ್ರವಾಸ ಬೆಳೆಸಿರುವ ಇವರು ರಾಜ್‌ಕೋಟ್‌ನಲ್ಲಿ ದಾಖಲೆಯ ಮೈಲಿಗಲ್ಲು ಮುಟ್ಟುತ್ತಾರಾ ಎಂಬ ಪ್ರಶ್ನೆ ಉದ್ಭವಿಸಿದೆ.

ಭಾರತ ಮತ್ತು ಇಂಗ್ಲೆಂಡ್ ನಡುವೆ ಐದು ಟೆಸ್ಟ್ ಪಂದ್ಯಗಳ ಸರಣಿ ನಡೆಯುತ್ತಿದೆ. ಮೊದಲ ಟೆಸ್ಟ್ ಪಂದ್ಯವನ್ನು ಇಂಗ್ಲೆಂಡ್ 28 ರನ್‌ಗಳಿಂದ ಗೆದ್ದುಕೊಂಡಿತ್ತು. ಇದಾದ ಬಳಿಕ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 106 ರನ್ ಗಳ ಭರ್ಜರಿ ಜಯ ಸಾಧಿಸಿದೆ. ಟೀಂ ಇಂಡಿಯಾ ಸಂಘಟಿತ ಪ್ರದರ್ಶನ ನೀಡಿತು. ಎರಡನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಪರ ಉತ್ತಮ ಬೌಲಿಂಗ್ ಪ್ರದರ್ಶಿಸಿದ ಜೇಮ್ಸ್ ಆಂಡರ್ಸನ್ ಎರಡೂ ಇನ್ನಿಂಗ್ಸ್‌ಗಳಲ್ಲಿ ಒಟ್ಟು 5 ವಿಕೆಟ್ ಪಡೆದರು. ಆದರೆ ತಂಡವನ್ನು ಗೆಲುವಿನ ದಡಕ್ಕೆ ತಂದು ನಿಲ್ಲಿಸಲು ಸಾಧ್ಯವಾಗಲಿಲ್ಲ. ಮೂರನೇ ಟೆಸ್ಟ್‌ನಲ್ಲಿ ಆ್ಯಂಡರ್ಸನ್‌ಗೆ ಅವಕಾಶ ಸಿಕ್ಕರೆ, ಅವರು ತಮ್ಮ ಹೆಸರಿನಲ್ಲಿ ದೊಡ್ಡ ದಾಖಲೆ ಮಾಡಬಹುದು.

James Anderson: Five steps away from world record: England speedster reaches milestone in Rajkot

ಜೇಮ್ಸ್‌ @ 695

ಭಾರತ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಜೇಮ್ಸ್ ಆಂಡರ್ಸನ್ ಇನ್ನೂ ಐದು ವಿಕೆಟ್ ಪಡೆದರೆ, ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ 700 ವಿಕೆಟ್‌ಗಳನ್ನು ಪೂರೈಸುತ್ತಾರೆ. ಇದಲ್ಲದೆ, ಟೆಸ್ಟ್ ಕ್ರಿಕೆಟ್‌ನಲ್ಲಿ 700 ವಿಕೆಟ್ ಪಡೆದ ಮೊದಲ ವೇಗದ ಬೌಲರ್ ಆಗಲಿದ್ದಾರೆ. ಒಟ್ಟಾರೆ, ಟೆಸ್ಟ್ ಕ್ರಿಕೆಟ್‌ನಲ್ಲಿ 700ಕ್ಕೂ ಹೆಚ್ಚು ವಿಕೆಟ್ ಪಡೆದ ಮೂರನೇ ಬೌಲರ್ ಆಗಲಿದ್ದಾರೆ. ಇದಕ್ಕೂ ಮುನ್ನ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಮತ್ತು ಆಸ್ಟ್ರೇಲಿಯಾದ ಶೇನ್ ವಾರ್ನ್ ಈ ಸಾಧನೆ ಮಾಡಿದ್ದಾರೆ. ಆದರೆ ಇಬ್ಬರೂ ಸ್ಪಿನ್ನರ್‌ಗಳಾಗಿದ್ದರು.

ಜೇಮ್ಸ್ ಆಂಡರ್ಸನ್ ಇದುವರೆಗೆ 184 ಟೆಸ್ಟ್ ಪಂದ್ಯಗಳಲ್ಲಿ 695 ವಿಕೆಟ್‌ಗಳನ್ನು ಪಡೆದಿದ್ದಾರೆ, ಇದರಲ್ಲಿ 32 ಐದು ವಿಕೆಟ್‌ಗಳು ಸೇರಿವೆ. ಅವರು ಪ್ರಸ್ತುತ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದವರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಶೇನ್ ವಾರ್ನ್ (708 ವಿಕೆಟ್) ಮತ್ತು ಮುತ್ತಯ್ಯ ಮುರಳೀಧರನ್ (800 ವಿಕೆಟ್) ಅವರಿಗಿಂತ ಮುಂದಿದ್ದಾರೆ.

James Anderson: Five steps away from world record: England speedster reaches milestone in Rajkot

ಜೇಮ್ಸ್‌ ವೃತ್ತಿಜೀವನ

ಜೇಮ್ಸ್ ಆಂಡರ್ಸನ್ ವಿಶ್ವದ ಶ್ರೇಷ್ಠ ವೇಗದ ಬೌಲರ್‌ಗಳಲ್ಲಿ ಪರಿಗಣಿಸಲ್ಪಟ್ಟಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಅವರು 2003 ರಲ್ಲಿ ಇಂಗ್ಲೆಂಡ್ ಪರ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಿದರು. ಅಂದಿನಿಂದ, ಅವರು ಇಂಗ್ಲೆಂಡ್‌ನ ಬೌಲಿಂಗ್ ದಾಳಿಯಲ್ಲಿ ಪ್ರಮುಖ ಭಾಗವಾಗಿ ಉಳಿದಿದ್ದಾರೆ. ಇಂಗ್ಲೆಂಡ್ ಪರ 194 ಏಕದಿನ ಪಂದ್ಯಗಳಲ್ಲಿ 269 ವಿಕೆಟ್ ಪಡೆದಿದ್ದಾರೆ. ಅವರು 19 ಟಿ20 ಪಂದ್ಯಗಳಲ್ಲಿ 18 ವಿಕೆಟ್‌ಗಳನ್ನು ಹೊಂದಿದ್ದಾರೆ. ಆಂಡರ್ಸನ್‌ಗೆ ಪ್ರಸ್ತುತ 41 ವರ್ಷ. ಆದರೆ ಮೈದಾನದಲ್ಲಿ ಯುವಕರೇ ನಾಚುವಂತಹ ಚುರುಕುತನ ಪ್ರದರ್ಶಿಸುತ್ತಾರೆ.

ರಾಜ್‌ಕೋಟ್‌ ಅಂಗಳದಲ್ಲಿ ಭರ್ಜರಿ ಬೌಲಿಂಗ್ ನಡೆಸಿ ವಿಶೇಷ ಕ್ಲಬ್ ಸೇರುವ ಕನಸು ಕಾಣುತ್ತಿದ್ದಾರೆ. ಈ ಸಾಧನೆಗೆ ಅವರಿಗೆ ಇನ್ನು ಐದು ವಿಕೆಟ್‌ ಅವಶ್ಯಕತೆ ಇದೆ. ಒಂದು ವೇಳೆ ಮೂರನೇ ಟೆಸ್ಟ್‌ನಲ್ಲಿ ಆಡುವ ಅವಕಾಶವನ್ನು ಜೇಮ್ಸ್‌ ಆಂಡರ್ಸನ್ ಪಡೆದರೆ, ಅವರ ಮೇಲೆ ವಿಶ್ವದ ಕಣ್ಣು ನೆಟ್ಟಿರುತ್ತದೆ. ಜೇಮ್ಸ್‌ ಈ ಬಾರಿಯ ಭಾರತ ಪ್ರವಾಸವನ್ನು ಸ್ಮರಣೀಯವಾಗಿಸಲು ಈ ಬಾರಿ ಉತ್ತಮ ಸದಾವಕಾಶ ಕೂಡಿ ಬಂದಿದೆ. ರಾಜ್‌ಕೋಟ್‌ನಲ್ಲಿ ಅವರ ಪ್ರದರ್ಶನ ಹೇಗಿರಲಿದೆ ಎಂಬುದು ಕುತೂಹಲ ಮೂಡಿಸಿದೆ.

Story first published: Friday, February 9, 2024, 9:45 [IST]
Other articles published on Feb 9, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+