James Anderson: ಐಪಿಎಲ್‌ನಲ್ಲಿ ಇತಿಹಾಸ ಸೃಷ್ಟಿಸಲು ಸಿದ್ಧರಾಗಿರುವ ಜೇಮ್ಸ್ ಆಂಡರ್ಸನ್
ಇಂಡಿಯನ್ ಪ್ರೀಮಿಯರ್ ಲೀಗ್ ( ಐಪಿಎಲ್) 2024ರ ಟೂರ್ನಿಯ ಮೆಗಾ ಹರಾಜು ಪ್ರಕ್ರಿಯೆಗೆ ವೇದಿಕೆ ಸಿದ್ಧವಾಗಿದೆ. 2 ದಿನಗಳು ನಡೆಯಲಿರುವ ಮೆಗಾ ಹರಾಜಿಗೆ ದಿನಾಂಕ ಮತ್ತು ಸ್ಥಳಬನ್ನು ಬಿಸಿಸಿಐ ಪ್ರಕಟಿಸಲಾಯಿತು. ನವೆಂಬರ್ 24 ಮತ್ತು 25 ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಹರಾಜು ನಡೆಯಲಿದೆ. ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಸ್ಟಾರ್ ಆಟಗಾರರು ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಆದರೆ ಈ ಬಾರಿ 42 ವರ್ಷದ ಇಂಗ್ಲೆಂಡ್ ಮಾಜಿ ವೇಗದ ಬೌಲರ್ ಜೇಮ್ಸ್ ಆಂಡರ್ಸನ್ ಕೂಡ ಐಪಿಎಲ್ ಮೆಗಾ ಹರಾಜಿನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿರುವ ಅಚ್ಚರಿ ಮೂಡಿಸಿದೆ.
ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಐಪಿಎಲ್ ಹರಾಜಿಗೆ ಆಂಡರ್ಸನ್ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಆಂಡರ್ಸನ್ ತಮ್ಮ ಮೂಲ ಬೆಲೆಯನ್ನು 1.25 ಕೋಟಿ ರೂ. ಗೆ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರೊಂದಿಗೆ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಎನಿಸಿಕೊಂಡಿರುವ ಐಪಿಎಲ್‌ನಲ್ಲಿ ಆಂಡರ್ಸನ್ ಇತಿಹಾಸವನ್ನು ಸೃಷ್ಟಿಸಲು ಸಿದ್ಧರಾಗಿದ್ದಾರೆ.

ಜೇಮ್ಸ್ ಆಂಡರ್ಸನ್ ಹೇಳಿದ್ದೇನು?
ಇಂಡಿಯಾ ಟುಡೆಯೊಂದಿಗೆ ಮಾತನಾಡಿರುವ ಜೇಮ್ಸ್ ಆಂಡರ್ಸನ್, 'ನನ್ನೊಳಗೆ ಇನ್ನೂ ಏನೋ ಇದೆ, ನಾನು ಇನ್ನೂ ಆಡಬಲ್ಲೆ ಎಂದು ಅನಿಸುತ್ತದೆ. ನಾನು ಯಾವತ್ತೂ ಐಪಿಎಲ್ ಆಡಿಲ್ಲ . ಅದರ ಅನುಭವವನ್ನೂ ಪಡೆದಿಲ್ಲ. ಇದಕ್ಕೆ ಹಲವು ಕಾರಣಗಳಿವೆ. ಏಕೆಂದರೆ ಈಗ ಒಬ್ಬ ಆಟಗಾರನಾಗಿ ನಾನು ನೀಡುವ ಕೊಡುಗೆ ಸಾಕಷ್ಟು ಇದೆ ಎಂದು ಐಪಿಎಲ್‌ನಲ್ಲಿ ಆಡುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಕೋಚಿಂಗ್ ಬಗ್ಗೆ ಮಾತನಾಡಿದ ಆಂಡರ್ಸನ್, 'ನಿವೃತ್ತಿಯ ನಂತರ ಒಂದಷ್ಟು ಕೋಚಿಂಗ್ ಮಾಡಿದ್ದೇನೆ. ನಾನು ಇಂಗ್ಲೆಂಡ್ ತಂಡದೊಂದಿಗೆ ಮೆಂಟರ್ ಆಗಿಯೂ ಕೆಲಸ ಮಾಡುತ್ತಿದ್ದೇನೆ. ವಿಶ್ವದ ಅತಿದೊಡ್ಡ ಲೀಗ್‌ನಲ್ಲಿ ಆಡುವುದು ಮತ್ತು ಅನುಭವವನ್ನು ಪಡೆಯುವುದು ಬಹುಶಃ ನನ್ನ ಜ್ಞಾನವನ್ನು ವಿಸ್ತರಿಸಲು ಸಹಾಯ ಮಾಡುತ್ತದೆ ಅಂದುಕೊಳ್ಳುತ್ತೇನೆ. ಇದರಿಂದ ಭವಿಷ್ಯದಲ್ಲಿ ನನಗೆ ಹೆಚ್ಚಿನ ಪ್ರಯೋಜನವಾಗಲಿದೆ.
ಇತ್ತೀಚೆಗೆ ನಿವೃತ್ತರಾದ ಟೆಸ್ಟ್ ಸ್ಪೆಷಲಿಸ್ಟ್ ಆಂಡರ್ಸನ್ ಜುಲೈ 2024ರಲ್ಲಿ ಲಾರ್ಡ್ಸ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದರು. ಆಂಡರ್ಸನ್ 2014 ರಿಂದ ಟಿ20 ಕ್ರಿಕೆಟ್ ಆಡಿಲ್ಲ. ಇದೀಗ ಅವರು ಐಪಿಎಲ್ 2025ರ ಟೂರ್ನಿಯಲ್ಲಿ ಕಾಣಿಸಿಕೊಂಡರೆ, ಐಪಿಎಲ್‌ಗೆ ಪದಾರ್ಪಣೆ ಮಾಡಿದ ಅತ್ಯಂತ ಹಿರಿಯ ಆಟಗಾರ ಎಂಬ ದಾಖಲೆಯನ್ನು ಬರೆಯಲಿದ್ದಾರೆ. ಆಂಡರ್ಸನ್ ತಮ್ಮ ವೃತ್ತಿಜೀವನದಲ್ಲಿ 44 ಟಿ20 ಪಂದ್ಯಗಳನ್ನು ಆಡಿದ್ದು, 41 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
ಸಾಧನೆ
ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ನಲ್ಲಿ ಆಂಡರ್ಸನ್ ಒಟ್ಟು 188 ಟೆಸ್ಟ್ ಪಂದ್ಯಗಳಲ್ಲಿ 704 ವಿಕೆಟ್‌ಗಳನ್ನು ಪಡೆದಿದ್ದು,
ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಒಟ್ಟು ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 987 ವಿಕೆಟ್‌ಗಳನ್ನು ಪಡೆದಿರುವ ಆಂಡರ್ಸನ್, 704 ಟೆಸ್ಟ್ ವಿಕೆಟ್‌ಗಳು, 269 ಏಕದಿನ ಮತ್ತು 18 ಟಿ20 ವಿಕೆಟ್‌ಗಳನ್ನು ಉರುಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications