For Quick Alerts
ALLOW NOTIFICATIONS  
For Daily Alerts
 

ಬೆಸ್ಟ್ ಫಿನಿಶರ್ ಧೋನಿ-ಎಬಿಡಿ ಅಲ್ಲ; ಜೇಮ್ಸ್ ಆಂಡರ್ಸನ್ ಹೆಸರಿಸಿದ ಭಾರತದ ಬ್ಯಾಟರ್ ಯಾರು?

ಪ್ರತಿಯೊಬ್ಬ ಕ್ರಿಕೆಟಿಗ ಕೂಡ ಪಂದ್ಯದ ವೇಳೆ ತಮ್ಮ ತಂಡದ ಗೆಲುವಿಗಾಗಿ ಹೋರಾಡುತ್ತಾನೆ. ಆದರೆ ಸೋಲಿನ ಸುಳಿಯಲ್ಲಿರುವ ತಂಡವನ್ನು ಗೆಲುವಿನ ಕಡೆ ಮುನ್ನಡೆಸುವುದು ಸುಲಭದ ಕೆಲಸವಲ್ಲ. ಸವಾಲಿನ ಪರಿಸ್ಥಿತಿಯಲ್ಲಿ ಕ್ರಿಕೆಟಿಗನಾದವನಿಗೆ ತಾಳ್ಮೆ ಬರಹಳ ಮುಖ್ಯ.

ಯಾವ ಆಟಗಾರನು ತನ್ನ ತಾಳ್ಮೆ ಮತ್ತು ಕೌಶಲ್ಯ ಸಾಮರ್ಥ್ಯದಿಂದ ಪ್ರತಿ ಪಂದ್ಯವನ್ನು ಗೆಲ್ಲಸುತ್ತಾನೋ ಅವನು ಫಿನಿಶರ್ ಆಗಿ ಹೊರಹೊಮ್ಮುತ್ತಾನೆ. ವಿಶ್ವ ಕ್ರಿಕೆಟ್‌ನಲ್ಲಿ ಆನೇಕ ಸ್ಟಾರ್ ಫಿನಿಶರ್‌ಗಳಿದ್ದಾರೆ. ಎಂಎಸ್ ಧೋನಿ, ಎಬಿ ಡಿವಿಲಿಯರ್ಸ್, ರಾಸ್ ಟೇಲರ್, ಬೆನ್ ಸ್ಟೋಕ್ಸ್, ಹಾರ್ದಿಕ್ ಪಾಂಡ್ಯ ಮತ್ತು ಕೀರನ್ ಪೊಲಾರ್ಡ್ ಅವರಂತಹ ಸ್ಟಾರ್ ಆಟಗಾರರು ವಿಶ್ವದ ಅತ್ಯುತ್ತಮ ಫಿನಿಶರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

James Anderson named by Virat Kohli as the best finisher in white cricket

ಇದೀಗ ಇಂಗ್ಲೆಂಡ್ ದಿಗ್ಗಜ ಮಾಜಿ ವೇಗದ ಬೌಲರ್ ಜೇಮ್ಸ್ ಆಂಡರ್ಸನ್ ತಮ್ಮ ಬೆಸ್ಟ್ ಫಿನಿಶರ್ ಹೆಸರನ್ನು ತಿಳಿಸಿದ್ದಾರೆ. ಈ ಆಟಗಾರನ ಹೆಸರು ಉಳಿದ ಬೆಸ್ಟ್ ಫಿನಿಶರ್‌ಗಳಿಂತ ಒಂದು ತೂಕ ಹೆಚ್ಚಿದೆ. ಆಂಡರ್ಸನ್ ಅವರ ಫೇವರಿಟ್ ಫಿನಿಶರ್ ಬೇರೆ ಯಾರು ಅಲ್ಲ, ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ.

ಆಂಡರ್ಸನ್ ಹೇಳಿದ್ದೇನು?

ಕೊಹ್ಲಿ ಅತ್ಯುತ್ತಮ ವೈಟ್ ಬಾಲ್ ಬ್ಯಾಟರ್. ಅವರು ಚೇಸಿಂಗ್ ಮಾಡುವುದು ಅದ್ಭುತವಾಗಿದೆ. ಚೇಸಿಂಗ್ ಮಾಡುವಾಗ ಅವರ ಆತ್ಮ ವಿಶ್ವಾಸವು ತುಂಬಾ ಹೆಚ್ಚಾಗಿರುತ್ತದೆ. ಕ್ರಿಕೆಟ್ ಇತಿಹಾಸದಲ್ಲಿ ಅವರಿಗಿಂತ ಉತ್ತಮ ಬ್ಯಾಟ್ಸ್‌ಮನ್ ಇದ್ದಾರೆಯೇ ಎಂದು ನನಗೆ ತಿಳಿದಿಲ್ಲ ಎಂದು ಆಂಡರ್ಸನ್ ಹೇಳಿದ್ದಾರೆ.

ವಿಶ್ವ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ತಮ್ಮ ಅದ್ಭುತ ಬ್ಯಾಟಿಂಗ್ ಮೂಲಕ ಹಲವು ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಏಕಾಂಗಿಯಾಗಿ ನಿಂತು ಭಾರತ ತಂಡಕ್ಕೆ ಆನೇಕ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಹೀಗಾಗಿಯೇ ಅಭಿಮಾನಿಗಳು ಕೊಹ್ಲಿ ಅವರಿಗೆ "ಚೇಸಿಂಗ್ ಮಾಸ್ಟರ್" ಎಂದು ಕರೆಯುತ್ತಾರೆ.

ಒಮ್ಮೆ ಬ್ಯಾಟ್ ಹಿಡಿದು ಕ್ರೀಸ್‌ನಲ್ಲಿ ಕೊಹ್ಲಿ ಘರ್ಜಿಸಿದರೆ, ಎದುರಾಳಿ ಬೌಲರ್ ಯಾರೆ ಆಗಿದ್ದರೂ ಬೆವರುವುದು ಕನ್ಫರ್ಮ್‌. ಅಷ್ಟರ ಮಟ್ಟಿಗೆ ಅವರು ತಮ್ಮ ಬ್ಯಾಟಿಂಗ್ ಕೌಶಲ್ಯವನ್ನು ಹೊಂದಿದ್ದಾರೆ. 2022ರ ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಕೊಹ್ಲಿ ಆಡಿದ ಇನ್ನಿಂಗ್ಸ್ ಎಂದಿಗೂ ಭಾರತೀಯ ಅಭಿಮಾನಿಗಳು ಮರೆಯುವುದಿಲ್ಲ.

ಭಾರತ ವಿರುದ್ಧ ಪಾಕಿಸ್ತಾನ ಗೆಲ್ಲತ್ತದೆ ಎಂಬ ನಿರೀಕ್ಷೆಯಲ್ಲಿದ್ದವರಿಗೆ ಕೊಹ್ಲಿ ತಮ್ಮ ವಿರಾಟ ರೂಪ ತೋರಿಸಿದ್ದರು. ಅಜೇಯ 82 ರನ್‌ಗಳನ್ನು ಹೊಡೆಯುವ ಮೂಲಕ ಭಾರತಕ್ಕೆ ಪಂದ್ಯವನ್ನು ಗೆದ್ದು ಕೊಟ್ಟಿದ್ದರು.ಇಂತಹ ಅಪರೂಪದ ಬ್ಯಾಟರ್‌ನನ್ನು ಬೆಸ್ಟ್ ಫಿನಿಶರ್ ಎಂದು ಆಂಡರ್ಸನ್ ಕರೆದಿರುವುದು ನಿಜಕ್ಕೂ ವಿಶೇಷವಾಗಿದೆ.

Story first published: Tuesday, August 27, 2024, 13:22 [IST]
Other articles published on Aug 27, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+