Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

T20 cricket: ಟಿ20 ಕ್ರಿಕೆಟ್‌ಗೆ ಮರಳಲಿರುವ ಇಂಗ್ಲೆಂಡ್‌ನ ಮಾಜಿ ದಿಗ್ಗಜ ಬೌಲರ್; ಯಾವ ಲೀಗ್ ಆಡ್ತಾರೆ ಗೊತ್ತಾ?

ವಿಶ್ವ ಕ್ರಿಕೆಟ್‌ನಲ್ಲಿ ಹಲವು ಆಟಗಾರರು ನಿವೃತ್ತಿ ನಂತರ ಕೂಡ ಮೈದಾನಕ್ಕೀಳಿದಿರುವ ಸಾಕಷ್ಟು ಉದಾಹರಣೆಗಳಿವೆ. ಇನ್ನು ಕೆಲವರು ಒಂದೇ ಮಾದರಿ ಕ್ರಿಕೆಟ್ ಆಡಲು ನಿವೃತ್ತಿ ಘೋಷಿಸುತ್ತಾರೆ. ಇಂತಹ ಹಲವು ಘಟನೆ ಇಂದಿಗೂ ಕ್ರಿಕೆಟ್‌ ಇತಿಹಾಸದಲ್ಲಿ ನಡೆಯುತ್ತಿವೆ.

ಇಂಗ್ಲೆಂಡ್ ತಂಡದ ಮಾಜಿ ವೇಗದ ಬೌಲರ್ ಕೂಡ ಈ ಸಾಲಿನಲ್ಲಿ ನಿಲ್ಲುತ್ತಾರೆ. ಅವರು ಟೆಸ್ಟ್ ಕ್ರಿಕೆಟ್ ಆಡುವ ಸಲುವಾಗಿ ಏಕದಿನ ಮತ್ತು ಟಿ20 ಆಟದಿಂದ ದೂರ ಉಳಿದಿದ್ದರು. ಇದರ ಪರಿಣಾಮ ಟೆಸ್ಟ್ ಕ್ರಿಕೆಟ್‌ನಲ್ಲಿ ಅವರು ಸಾಧನೆಯ ಶಿಖರವನ್ನು ಏರಿದ್ದರು. ಈ ಬೌಲರ್ ಬೇರೆ ಯಾರು ಅಲ್ಲ ಇಂಗ್ಲೆಂಡ್‌ನ ದಂತಕಥೆ ಜೇಮ್ಸ್ ಆಂಡರ್ಸನ್.

James Anderson prepares to play T20 cricket

ವಿಶ್ವದ ಅತ್ಯಂತ ಅಪಾಯಕಾತಿ ಬೌಲರ್‌ಗಳಲ್ಲಿ ಒಬ್ಬರಾದ ಜೇಮ್ಸ್ ಆಂಡರ್ಸನ್ ಶೀಘ್ರದಲ್ಲೇ ಟಿ20 ಕ್ರಿಕೆಟ್‌ನಲ್ಲಿ ಬೌಲಿಂಗ್ ಮಾಡುವುದನ್ನು ನೋಡಬಹುದಾಗಿದೆ. ಇಂಗ್ಲೆಂಡ್ ಪರ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದಿರುವ ಹಾಗೂ ವಿಶ್ವದ ಮೂರನೇ ಅತಿ ಹೆಚ್ಚು ವಿಕೆಟ್ ಪಡೆದಿರುವ ಈ ದಿಗ್ಗಜ ವೇಗಿ 10 ವರ್ಷಗಳ ನಂತರ ಟಿ20 ಕ್ರಿಕೆಟ್‌ ಮರಳಲು ಸಜ್ಜಾಗಿದ್ದಾರೆ.

ಜೇಮ್ಸ್ ಆಂಡರ್ಸನ್ ಅವರು ಅಮೆರಿಕದ ಮೇಜರ್ ಲೀಗ್ ಕ್ರಿಕೆಟ್‌ನಲ್ಲಿ ಆಡುವ ಸಾಧ್ಯತೆಯಿದೆ. ಮೇಜರ್ ಲೀಗ್ ಕ್ರಿಕೆಟ್ ಟಿ20 ಟೂರ್ನಿಯ ಫ್ರಾಂಚೈಸಿಯೊಂದು ಮುಂಬರುವ ಋತುವಿನಲ್ಲಿ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಆಸಕ್ತಿಯನ್ನು ತೋರಿಸಿದೆ. 42 ವರ್ಷದ ಅನುಭವಿ ಆಂಡರ್ಸನ್ ಈ ವರ್ಷ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಅವರು ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಪಂದ್ಯದೊಂದಿಗೆ 21 ವರ್ಷಗಳ ನಂತರ ತಮ್ಮ ವೃತ್ತಿಜೀವನವನ್ನು ಕೊನೆಗೊಳಿಸಿದ್ದರು.

ಎಷ್ಟು ಮೊತ್ತ?

ಜೇಮ್ಸ್ ಆಂಡರ್ಸನ್ ಅವರನ್ನು ಖರೀದಿಸಲು ಎಂಎಲ್‌ಸಿ ಫ್ರಾಂಚೈಸಿವೊಂದು ಆಸಕ್ತಿ ತೋರಿಸಿದೆ ಎಂದು ವರದಿ ಆಗಿದೆ. ಆದರೆ, ಈ ಫ್ರಾಂಚೈಸಿ ಹೆಸರನ್ನು ಬಹಿರಂಗಪಡಿಸಿಲ್ಲ. ಜೇಮ್ಸ್ ಆಂಡರ್ಸನ್ ಮುಂದಿನ ವರ್ಷ ಮೇಜರ್ ಲೀಗ್ ಕ್ರಿಕೆಟ್‌ನ 3ನೇ ಆವೃತ್ತಿಯಲ್ಲಿ ಭಾಗವಹಿಸಲು ತಯಾರಾಗಿದ್ದಾರೆ. ಎಂಎಲ್‌ಸಿಗೆ ಸೇರಲು ಆಂಡರ್ಸನ್‌ ಅವರಿಗೆ ಸುಮಾರು 1.5 ಕೋಟಿ ರೂ. ನೀಡಬಹುದು ಎಂದು ಮೂಲಗಳು ತಿಳಿಸಿವೆ.

ಮುಂಬರುವ ಮೇಜರ್ ಲೀಗ್ ಕ್ರಿಕೆಟ್ ಟಿ20 ಲೀಗ್‌ಗೆ ಜೇಮ್ಸ್ ಆಂಡರ್ಸನ್ ಸೇರ್ಪಡೆಗೊಂಡರೆ, ಅವರು 10 ವರ್ಷಗಳ ನಂತರ ಟಿ20 ಪಂದ್ಯವನ್ನು ಆಡಲಿದ್ದಾರೆ. 2007ರಲ್ಲಿ ಟಿ20 ಅಂತರಾಷ್ಟ್ರೀಯ ಪಾದಾರ್ಪಣೆ ಮಾಡಿದ ಅವರು, 2014ರಲ್ಲಿ ತಮ್ಮ ಕೊನೆಯ ಟಿ20 ಪಂದ್ಯವನ್ನು ಆಡಿದ್ದರು. ಅಂದಿನಿಂದ ಅವರು ಈ ಚುಟುಕು ಮಾದರಿ ಕ್ರಿಕೆಟ್‌ ಆಡಿಲ್ಲ. ಅವರು ಟಿ20 ಕ್ರಿಕೆಟ್‌ಗೆ ಮರಳುವ ಸುದ್ದಿ ಕೇಳಿ ಅಭಿಮಾನಿಗಳು ಸಂತಸಗೊಂಡಿದ್ದಾರೆ.

Story first published: Tuesday, September 17, 2024, 11:47 [IST]
Other articles published on Sep 17, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+