ಜೇಮ್ಸ್ ಆಂಡರ್ಸನ್ ನಿವೃತ್ತಿ ವೇಳೆ ವಿರಾಟ್ ಕೊಹ್ಲಿ ಬಗ್ಗೆ ಹೇಳಿದ್ದೇನು?
ಜುಲೈ 13 ಶನಿವಾರ, ಇಂಗ್ಲೆಂಡ್ ಮಾಜಿ ವೇಗದ ಬೌಲರ್ ಜೇಮ್ಸ್ ಆಂಡರ್ಸನ್ (ಶುಕ್ರವಾರ) ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.
ಲಾರ್ಡ್ಸ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಆಡಿದ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್‌ನ ಇನ್ನಿಂಗ್ಸ್ ಮತ್ತು 114 ರನ್ ಗಳ ಜಯದೊಂದಿಗೆ 21 ವರ್ಷಗಳ ಕ್ರಿಕೆಟ್ ಪಯಣವನ್ನು ಕೊನೆಗೊಳಿಸಿದ್ದಾರೆ. ಆಂಡರ್ಸನ್ ಈಗಾಗಲೇ ಏಕದಿನ ಮತ್ತು ಟಿ20 ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದರು.

ಇದೀಗ ಅಂಡರ್ಸನ್ ಅವರು ತಮ್ಮ ಜೀವನದ 42 ವರ್ಷಗಳನ್ನು ಪೂರೈಸುವ ಕೇವಲ 18 ದಿನಗಳ ಮೊದಲು ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್ ಬೈ ಹೇಳಿರುವುದು ಅಭಿಮಾನಿಗಳಲ್ಲಿ ಬೇಸರ ತಂದಿದೆ. ಈ ಸಂದರ್ಭದಲ್ಲಿ ಅಂಡರ್ಸನ್ ಭಾರತ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ ವಿರಾಟ್ ಕೊಹ್ಲಿ ಬಗ್ಗೆ ಮಾತನಾಡಿದ್ದಾರೆ.
ಅಂಡರ್ಸನ್ ಹೇಳಿದ್ದೇನು?
ಅಂಡರ್ಸನ್ ನಿವೃತ್ತಿ ಘೋಷಣೆ ಮಾಡಿದ ಬಳಿಕ ವಿರಾಟ್ ಕೊಹ್ಲಿ ಬಗ್ಗೆ ಮಾತನಾಡುತ್ತಾ, 'ಆರಂಭಿಕ ದಿನಗಳಲ್ಲಿ, ವಿರಾಟ್ ಕೊಹ್ಲಿ ವಿರುದ್ಧ ಆಡುವಾಗ, ನೀವು ಅವರನ್ನು ಪ್ರತಿ ಎಸೆತದಲ್ಲೂ ಔಟ್ ಮಾಡಬಹುದು ಎಂದು ಭಾವಿಸುತ್ತೀರಿ. ಆದರೆ ಈಗ ನಿಮಗೆ ಹಾಗೆ ಅನಿಸುತ್ತದೆ.
ನೀವು ಒಮ್ಮೆ ಕೂಡ ವಿರಾಟ್ ಕೊಹ್ಲಿಯನ್ನು ಔಟ್ ಮಾಡಲು ಸಾಧ್ಯವಿಲ್ಲ. ಇಂತಹ ತುಂಬಾ ಕೀಳು ಭಾವನೆ ಹೊಂದಿದ್ದರೆ ಆಗುವುದಿಲ್ಲ. ಕೊಹ್ಲಿಗೆ ಬೌಲಿಂಗ್ ಮಾಡುವುದು ನನಗೂ ಸುಲಭವಲ್ಲ ಎಂದು ಹೇಳಿದ್ದಾರೆ.
ಟೆಸ್ಟ್‌ನಲ್ಲಿ ಆಂಡರ್ಸನ್ vs ಕೊಹ್ಲಿ
2014, 2016, 2018 ಮತ್ತು 2021 ರಲ್ಲಿ ಆಂಡರ್ಸನ್ ಮತ್ತು ಕೊಹ್ಲಿ ಮುಖಾಮುಖಿಯಾಗಿದ್ದಾರೆ. ಈ ಅವಧಿಯಲ್ಲಿ ಕೊಹ್ಲಿ 36 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ ಆಂಡರ್ಸನ್ ವಿರುದ್ಧ ಬ್ಯಾಟಿಂಗ್ ಮಾಡಿದ್ದಾರೆ.
ಆಂಡರ್ಸನ್ 7 ಬಾರಿ ಕೊಹ್ಲಿಯನ್ನು ಔಟ್ ಮಾಡಿದ್ದಾರೆ. ಆಂಡರ್ಸನ್ ವಿರುದ್ಧ ಕೊಹ್ಲಿ 710 ಎಸೆತಗಳಲ್ಲಿ 305 ರನ್ ಗಳಿಸಿದ್ದಾರೆ. ಈ ವೇಳೆ ಕೊಹ್ಲಿ ಬ್ಯಾಟಿಂಗ್ ಸ್ಟ್ರೈಕ್ ರೇಟ್ 42.95 ಮತ್ತು ಸರಾಸರಿ 43.57 ಆಗಿತ್ತು. ಆಂಡರ್ಸನ್ ವಿರುದ್ಧವೂ ಕೊಹ್ಲಿ 39 ಬೌಂಡರಿಗಳನ್ನು ಬಾರಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications