Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

20ಕ್ಕೆ 5 ವಿಕೆಟ್ ಕಿತ್ತು ಕೊಹ್ಲಿ ಬಳಗ ಕಾಡಿದ ಜೇಮ್ಸ್ ಆ್ಯಂಡರ್ಸನ್!

James Anderson takes 5-20 to hurry tourists out

ಲಂಡನ್, ಆಗಸ್ಟ್ 11: ಭಾರತ vs ಇಂಗ್ಲೆಂಡ್ ದ್ವಿತೀಯ ಟೆಸ್ಟ್ ಎರಡನೇ ದಿನವಾದ ಶುಕ್ರವಾರ (ಆಗಸ್ಟ್ 10) ಇಂಗ್ಲೆಂಡ್ ನ ಜೇಮ್ಸ್ ಆ್ಯಂಡರ್ಸನ್ ಕೇವಲ 20 ರನ್ನಿಗೆ ಭಾರತದ 5 ವಿಕೆಟ್ ಉರುಳಿಸಿ ಕಾಡಿದರು. ಪ್ರಥಮ ಇನ್ನಿಂಗ್ಸ್ ನಲ್ಲಿ ಮಳೆ ಮತ್ತು ಆ್ಯಂಡರ್ಸನ್ ಆಟವೇ ನಡೆಯಿತು.

ಸ್ಕೋರ್ ಕಾರ್ಡ್
(ಚಿತ್ರಕೃಪೆ: ಕ್ರಿಕ್ ಟ್ರ್ಯಾಕರ್)

ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಕೊಹ್ಲಿ ಬಳಗವನ್ನು ಮಳೆ ಮತ್ತು ಜೇಮ್ಸ್ ಆ್ಯಂಡರ್ಸನ್ ಪಂದ್ಯಾರಂಭದಿಂದಲೂ ಕಾಡಹತ್ತಿದರು. ಇದರ ಪರಿಣಾಮ ಭಾರತ 35.2 ಓವರ್ ನಲ್ಲೇ ಎಲ್ಲಾ ವಿಕೆಟ್ ಕಳೆದು ಬರೀ 107 ರನ್ ಪೇರಿಸಿತು. ಒದ್ದೆ ನೆಲದ ಅನುಕೂಲವನ್ನು ಆಂಗ್ಲರು ಪಡೆದುಕೊಂಡರು.

ಟೀಮ್ ಇಂಡಿಯಾದ ಆರಂಭಿಕ ಆಟಗಾರ ಮುರಳಿ ವಿಜಯ್ ಮೊದಲ ಓವರ್ ನಲ್ಲೇ 0ಗೆ (5ಎಸೆತ) ಆ್ಯಂಡರ್ಸನ್ ಗೆ ವಿಕೆಟ್ ಒಪ್ಪಿಸಿ ಭಾರತಕ್ಕೆ ಅಘಾತವಿತ್ತರು. ಅದಾಗಿ ಕೆಎಲ್ ರಾಹುಲ್ 8 (14), ಅಜಿಂಕ್ಯ ರಹಾನೆ 18 (44), ಕುಲದೀಪ್ ಯಾದವ್ 0 (11), ಮೊಹಮ್ಮದ್ ಶಮಿ 0 (3) ರನ್ನಿಗೆ ಜೇಮ್ಸ್ ಗೆ ವಿಕೆಟ್ ನೀಡಿದರು.

ಭಾರತದ ಇನ್ನಿಂಗ್ಸ್ ವೇಳೆ ಆ್ಯಂಡರ್ಸನ್ ಎಸೆದ 13.2 ಓವರ್ ಗಳಲ್ಲಿ 5 ಓವರ್ ಮೇಡನ್ ಎನಿಸಿತು. ಇನ್ನುಳಿದಂತೆ ಸ್ಟುವರ್ಟ್ ಬ್ರಾಡ್ 1, ಕ್ರಿಸ್ ವೋಕ್ಸ್ 2, ಸ್ಯಾಮ್ ಕರನ್ 1 ವಿಕೆಟ್ ಕಬಳಿಸಿದರು. ನಾಯಕ ಕೊಹ್ಲಿಯ ಬೆಂಬಲವೂ ಭಾರತಕ್ಕೆ ದೊರೆಯಲಿಲ್ಲ. ಕೊಹ್ಲಿ 23 (57) ರನ್ನಿಗೆ ವೋಕ್ಸ್ ಗೆ ಶರಣಾದರು.

ಮೊದಲ ಇನ್ನಿಂಗ್ಸ್ ನಲ್ಲಿ ಭಾರತ ಪರ ಆರ್ ಅಶ್ವಿನ್ ಅವರದ್ದೇ ಅಧಿಕ ರನ್. ಅಶ್ವಿನ್ 38 ಎಸೆತಗಳಿಗೆ 28 ರನ್ ಕೊಡುಗೆ ನೀಡಿದರು. ಬ್ಯಾಟ್ಸ್ಮನ್ ಗಳು ವಿಕೆಟ್ ಕಾವಲು ಕಾಯದಿದ್ದಿದ್ದೇ ಭಾರತದ ನೀರಸ ಆಟಕ್ಕೆ ಸಾಕ್ಷಿ. ಇನ್ನೊಂದೆಡೆ ದಿನವಿಡೀ ಬಿಡದೆ ಸುರಿದ ಮಳೆ ಭಾರತಕ್ಕೆ ನೆಪವೆನಿಸಿತು.

Story first published: Sunday, August 12, 2018, 13:04 [IST]
Other articles published on Aug 12, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+