T20 Cricket: 10 ವರ್ಷಗಳ ನಂತರ ಟಿ20 ಕ್ರಿಕೆಟ್‌ಗೆ ಮರಳಲಿರುವ ಇಂಗ್ಲೆಂಡ್ ದಿಗ್ಗಜ ಬೌಲರ್!
ಆಗಸ್ಟ್ 14 ಬುಧವಾರ, ಇತ್ತೀಚಿನ ದಿನಗಳಲ್ಲಿ ಟಿ20 ಕ್ರಿಕೆಟ್ ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು, ವಿಶ್ವದ ಬಹಳಷ್ಟು ಕ್ರಿಕೆಟಿಗರನ್ನು ಆಕರ್ಷಿಸುತ್ತಿದೆ. ಒಂದು ಕಾಲದಲ್ಲಿ ಇಡೀ ಕ್ರಿಕೆಟ್ ಜಗತ್ತನ್ನು ಆಳಿದ ವೆಸ್ಟ್ ಇಂಡೀಸ್‌ನಂತಹ ಬಲಿಷ್ಠ ತಂಡವು ಟಿ20 ಕ್ರಿಕೆಟ್‌ನಿಂದಾಗಿ ಟೆಸ್ಟ್ ಮತ್ತು ಏಕದಿನ ಮಾದರಿಗಳಲ್ಲಿ ತನ್ನ ಪ್ರಾಬಲ್ಯವನ್ನು ಕಳೆದುಕೊಂಡಿದೆ.
ವಿಂಡೀಸ್ ಆಟಗಾರರು ವಿಶ್ವದಾದ್ಯಂತ ನಡೆಯುವ ಎಲ್ಲಾ ಟಿ20 ಲೀಗ್‌ಗಳಲ್ಲಿ ಆಡುವ ಮೂಲಕ ಕೋಟ್ಯಂತರ ರೂಪಾಯಿ ಗಳಿಸುತ್ತಿದ್ದಾರೆ. ಈ ಕಾರಣಕ್ಕಾಗಿ ಅವರು ಟೆಸ್ಟ್ ಮತ್ತು ಏಕದಿನ ಕ್ರಿಕೆಟ್‌ನಿಂದ ದೂರ ಉಳಿದಿದ್ದಾರೆ. ಇಂತಹ ಸನ್ನಿವೇಶದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದರೂ ಇಂಗ್ಲೆಂಡ್ ದಿಗ್ಗಜ ಬೌಲರ್ ಟಿ20 ಲೀಗ್‌ನಲ್ಲಿ ಆಡುವ ಆಸಕ್ತಿಯನ್ನು ವ್ಯಕ್ತಪಡಿಸಿದ್ದಾರೆ.

ಆ ದಿಗ್ಗಜ ಬೌಲರ್ ಬೇರೆ ಯಾರು ಅಲ್ಲ. ಇಂಗ್ಲೆಂಡ್ ತಂಡದ ಯಶಸ್ವಿ ವೇಗದ ಬೌಲರ್ ಜೇಮ್ಸ್ ಆಂಡರ್ಸನ್. ಕಳೆದ ತಿಂಗಳು ಲಾರ್ಡ್ಸ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಕೊನೆಯ ಪಂದ್ಯವನ್ನು ಆಡಿದ್ದ ಆಂಡರ್ಸನ್, ಇದೀಗ ಟಿ20 ಲೀಗ್‌ನಲ್ಲಿ ಆಡುವ ತಮ್ಮ ಬಯಕೆ ಹೇಳಿಕೊಂಡಿದ್ದಾರೆ.
ಆಂಡರ್ಸನ್ 2014 ರಿಂದ ಟಿ20 ಕ್ರಿಕೆಟ್ ಆಡಿಲ್ಲ. ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಉಳಿದ ನಂತರ ಆಂಡರ್ಸನ್ ಈಗ ಟಿ20 ಲೀಗ್‌ಗೆ ಆಡಲು ತಯಾರಿ ನಡೆಸುತ್ತಿದ್ದಾರೆ. ಮತ್ತೊಮ್ಮೆ ಆಂಡರ್ಸನ್ ಅವರನ್ನು ಮೈದಾನದಲ್ಲಿ ನೋಡಲು ಆಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಆಂಡರ್ಸನ್ ಇಂಗ್ಲೆಂಡ್ ಮಾತ್ರವಲ್ಲದೆ ವಿಶ್ವದಾದ್ಯಂತ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ.
ಪ್ರೆಸ್ ಅಸೋಸಿಯೇಷನ್ ಸುದ್ದಿ ಸಂಸ್ಥೆಗೆ ಆಂಡರ್ಸನ್ ಹೇಳಿಕೆ ನೀಡಿರುವ ಪ್ರಕಾರ, ಇಂಗ್ಲೆಂಡ್‌ನ ದೇಶೀಯ ಕ್ರಿಕೆಟ್ ಲೀಗ್ 'ದಿ ಹಂಡ್ರೆಡ್' ಟೂರ್ನಿಯಲ್ಲಿ ಆಡಲು ಯೋಚಿಸುತ್ತಿದ್ದಾರೆ. ಆದರೆ ಇತರೆ ಸ್ವರೂಪಗಳಲ್ಲೂ ಆಡುವ ಬಗ್ಗೆ ಇನ್ನೂ ಯಾವುದೇ ನಿರ್ಧಾರಗಳನ್ನು ತೆಗೆದುಕೊಂಡಿಲ್ಲ. ಒಂದು ವೇಳೆ ಅವರು ಫಿಟ್ ಆಗಿದ್ದರೆ, ದಿ ಹಂಡ್ರೆಡ್ ಮುಂದಿನ ಋತುವಿನಲ್ಲಿ ಆಡಲಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ಆಂಡರ್ಸನ್ ಸಾಕಷ್ಟು ವಿಶ್ವದಾಖಲೆಗಳನ್ನು ಸೃಷ್ಟಿಸಿದ್ದಾರೆ. ಚೆಂಡನ್ನು ಎರಡು ಕಡೆ ಸ್ವಿಂಗ್ ಮಾಡುವುದಕ್ಕೆ ಆಂಡರ್ಸನ್ ಹೆಸರುವಾಗಿಯಾಗಿದ್ದಾರೆ. ಎರಡೂ ದಶಕಗಳಿಗೂ ಹೆಚ್ಚು ಕಾಲ ಇಂಗ್ಲೆಂಡ್ ತಂಡವನ್ನು ಟೆಸ್ಟ್ ಕ್ರಿಕೆಟ್‌ನಲ್ಲಿ ಪ್ರತಿನಿಧಿಸಿದ್ದಾರೆ.
ಆಂಡರ್ಸನ್ ಒಟ್ಟು 188 ಟೆಸ್ಟ್ ಪಂದ್ಯಗಳಲ್ಲಿ 704 ವಿಕೆಟ್‌ಗಳನ್ನು ಪಡೆಯುವ ಮೂಲಕ ರೆಡ್-ಬಾಲ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಒಟ್ಟು ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 987 ವಿಕೆಟ್‌ಗಳನ್ನು ಪಡೆದಿರುವ ಆಂಡರ್ಸನ್, 704 ಟೆಸ್ಟ್ ವಿಕೆಟ್‌ಗಳು, 269 ಏಕದಿನ ಮತ್ತು 18 ಟಿ20 ವಿಕೆಟ್‌ಗಳನ್ನು ಉರುಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications